ಮಳೆಗಾಗಿ ಲಾಧಾದಲ್ಲಿ ಬುಟ್ಟಿ ಜಾತ್ರೆ

ಔರಾದ್​ ತಾಲೂಕಿನ ಲಾಧಾ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಹಿಳೆಯರು ತಲೆಮೇಲೆ ರೊಟ್ಟಿ ಬುಟ್ಟಿ ಹೊತ್ತು  ಬುಟ್ಟಿಜಾತ್ರೆ ಆಚರಿಸಿದರು. ಕಲಾವತಿ ಮುಚಳಂಬೆ, ಸರಸ್ವತಿ ಲೋಹಾರ, ರೇಣುಕಾ ಬಿರಾದಾರ್​, ಅನಿತಾ, ಸಂಗೀತಾ, ಸುವರ್ಣಾ ಪಾಟೀಲ್​, ಲಲಿತಾ, ಶೋಭಾವತಿ ಮಾನೂರೆ ಇತರರಿದ್ದರು.

Published on
ಔರಾದ್​: ತಾಲೂಕಿನ ಉತ್ತಮ ಮಳೆಯಾಗಲಿ, ಬೆಳೆ ಸಮೃದ್ಧಿಯಾಗಿ ಬೆಳೆಯಲಿ ಎಂದು ಲಾಧಾ ಬಳಿ ಮಾಂಜ್ರಾ ನದಿ ನದಿಯ ದಡದಲ್ಲಿನ ಮಹಾದೇವ ಮಂದಿರದಲ್ಲಿ ಪ್ರಾರ್ಥಿಸಿ ಗ್ರಾಮಸ್ಥರು ಶ್ರದ್ಧಾ&ಭಕ್ತಿಯಿಂದ ಬುಟ್ಟಿ ಜಾತ್ರೆ ಆಚರಿಸಿದರು. ಮಹಿಳೆಯರು ರೊಟ್ಟಿ ಬುಟ್ಟಿಗಳಲ್ಲಿ ಇಟ್ಟುಕೊಂಡು ತಲೆಯ ಮೇಲೆ ಹೊತ್ತು ವಾಧ್ಯಮೇಳದೊಂದಿಗೆ ಭಜನೆ ಮಾಡುತ್ತಾ ಹೆಜ್ಜೆ ಹಾಕಿದರು. ಬಳಿಕ ನದಿಯ ದಡದಲ್ಲಿನ ಮಹಾದೇವನಿಗೆ ವಿಶೇಷ ಪೂಜೆ ಸಲ್ಲಿಸಿ, ಹೋಳಿಗೆ, ಅನ್ನ, ಸೇರಿ ಇನ್ನಿತರ ನೈವೇದ್ಯ ಸಮರ್ಪಿಸಿ ಮಳೆಗಾಗಿ ಪ್ರಾರ್ಥಿಸಿದರು. ನಂತರ ಎಲ್ಲರೂ ಸಾಮೂಹಿಕ ಭೋಜನ, ಭಜನೆ ಮಾಡಿ ಮಳೆಗಾಗಿ ಆರಾಧಿಸಿದರು. ಪ್ರಮುಖರಾದ ಕಲಾವತಿ ಮುಚಳಂಬೆ, ಸರಸ್ವತಿ ಲೋಹಾರ, ರೇಣುಕಾ ಬಿರಾದಾರ್​, ಅನಿತಾ, ಸಂಗೀತಾ, ಸುವರ್ಣಾ ಪಾಟೀಲ್​, ಲಲಿತಾ, ಶೋಭಾವತಿ ಮಾನೂರೆ, ಭರತ್​ ದದ್ದಾಪುರೆ, ಬಾಬುರಾವ ಮುಚಳಂಬೆ, ಮೋತಿರಾಮ, ಶಿವರಾಜ ಮಾನೂರೆ, ಪ್ರಭು, ಶರಣಪ್ಪ ಬಾವಗೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net