ಕತ್ತಲೆ ಬದುಕಿಗೆ ಬಸವಣ್ಣನ ವಚನ ಬೆಳಕು

 ಕಲಬುರಗಿಯಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಪರ್ವ ಕಾರ್ಯಕ್ರಮದಲ್ಲಿ ಸಾಧಕರಿಗೆ ಬಸವ ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ರೀ ಬಸವೇಶ್ವರಿ ಮಾತಾ, ಹರ್ಷಾನಂದ ಗುತ್ತೇದಾರ್​, ವಿಜಯಕುಮಾರ ತೇಗಲತಿಪ್ಪಿ, ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಬಸಣ್ಣ ಗುಣಾರಿ, ರಾಜೇಶ್ವರಿ ಸಾಹು, ಕಲ್ಯಾಣಪ್ಪ ಪಾಟೀಲ್​ ಮಳಖೇಡ ಇತರರಿದ್ದರು.
ಕಲಬುರಗಿಯಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಪರ್ವ ಕಾರ್ಯಕ್ರಮದಲ್ಲಿ ಸಾಧಕರಿಗೆ ಬಸವ ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ರೀ ಬಸವೇಶ್ವರಿ ಮಾತಾ, ಹರ್ಷಾನಂದ ಗುತ್ತೇದಾರ್​, ವಿಜಯಕುಮಾರ ತೇಗಲತಿಪ್ಪಿ, ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಬಸಣ್ಣ ಗುಣಾರಿ, ರಾಜೇಶ್ವರಿ ಸಾಹು, ಕಲ್ಯಾಣಪ್ಪ ಪಾಟೀಲ್​ ಮಳಖೇಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಹೇಳಿಕೆ
  • ಕಸಾಪದಿಂದ ಬಸವ ಪರ್ವ ಸಮಾರಂಭ
ಕಲಬುರಗಿ: ನುಡಿದಂತೆ ನಡೆದ ಬಸವಾದಿ ಶರಣರ ತತ್ವಾದರ್ಶಗಳಿಂದ ಸಮ ಬಾಳ್ವೆಯ ಜೀವನ ಸಾಧ್ಯ. ಎಲ್ಲ ಜಾತಿ&ಧರ್ಮದವರನ್ನು ಒಂದುಗೂಡಿಸಿದ ಬಸವಣ್ಣನವರ ವಚನಗಳು ಕತ್ತಲೆ ಬದುಕಿಗೆ ಬೆಳಕಾಗಿವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್​ ಹೇಳಿದರು.
ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಬಸವ ಜಯಂತಿ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್​ನಿಂದ ಭಾನುವಾರ ಆಯೋಜಿಸಿದ್ದ ಬಸವ ಪರ್ವ ಇವ ನಮ್ಮವನಾಗಿಸುವ ಹಬ್ಬ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣರ ಆಚಾರ&ವಿಚಾರಗಳನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಸಾಮಾಜಿಕ ಸಮಾನತೆ ಸಾರಿದ ಬಸವಾದಿ ಶರಣರು ಮಾನವೀಯ ಮೌಲ್ಯ ಮೆರೆದಿದ್ದಾರೆ. ಅಳಿದು ಹೋಗುವ ಸಂಪತ್ತಿನ ಹಿಂದೆ ಬಿದ್ದಿರುವ ನಾವು ಮಾನವೀಯ ಸಂಪತ್ತು ಮರೆಯುತ್ತಿದ್ದೇವೆ. ಸಮಾಜದಲ್ಲಿ ಕಡೆಗಣಿಸಲ್ಪಟ್ಟ ಜನರನ್ನು ಶರಣರು ಒಪ್ಪಿದ್ದರು, ಅಪ್ಪಿದ್ದರು. ಶರಣರು ತೋರಿದ ದಾರಿಯಲ್ಲಿ ನಡೆದರೆ ಸಮಾನತೆ, ಪ್ರೀತಿ, ವಿಶ್ವಾಸ, ಸೌಹಾರ್ದತೆ ಕಾಣಬಹುದು ಎಂದರು.
ಶರಣ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಜಾಗತಿಕ ಲಿಂಗಾಯತ ಮಹಾಸಭಾ ಅಫಜಲಪುರ ತಾಲೂಕು ಅಧ್ಯಕ್ಷ ಬಸಣ್ಣ ಗುಣಾರಿ, ಸಾಹಿತ್ಯ ಪ್ರೇರಕಿ ರಾಜೇಶ್ವರಿ ಸಾಹು, ಕಲ್ಯಾಣಪ್ಪ ಪಾಟೀಲ್​ ಮಳಖೇಡ ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆಯ ಅತ್ತಿವೇರಿ ಬಸವ ಧಾಮ ಶ್ರೀ ಬಸವೇಶ್ವರಿ ಮಾತಾ ನೇತೃತ್ವ ವಹಿಸಿದ್ದರು.
ಕಸಾಪ ಜಿಲ್ಲಾ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಭುವನೇಶ್ವರಿ ಹಳ್ಳಿಖೇಡ, ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ್​, ಅನನ್ಯಾ ಗೋಲ್ಡ್​ಸ್ಮಿತ್​ ಇದ್ದರು.
ವಿವಿಧ ಕ್ಷೇತ್ರದ ಸಾಧಕರಿಗೆ ಪುರಸ್ಕಾರ
ಶರಣ ದಂಪತಿ ಶಶಿಕಲಾ ಶಿವಪ್ಪ ತಳಕಿನ್​ ಮಳಖೇಡ, ಶಕುಂತಲಾ ಯಶ್ವಂತರಾವ ಪಾಟೀಲ್​ ಜಾವಳಿ, ಕಲ್ಪನಾ ಅಣ್ಣಾರಾವ ಪೆದ್ದಿ ಕೋಡ್ಲಿ, ಮಹಾದೇವಿ ಡಾ.ಕೆ.ಎಸ್​. ಬಂಧು ಸಿದ್ಧೇಶ್ವರ, ನಿರ್ಮಲಾ ಸಿದ್ದಣ್ಣ ಬೆಡಸೂರ ಸೇಡಂ, ನಂದಿನಿ ವಿಶ್ವಾರಾಧ್ಯ ಬಿರಾಳ ಶಹಾಬಾದ್​, ಪ್ರೀತಿ ಬಸವರಾಜ ಬಿರಾದಾರ ಸೊನ್ನ, ರೇಣುಕಾ ರಾಮು ರೆಡ್ಡಿ ಗುಮ್ಮಟ ಅವರಿಗೆ ಬಸವ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದ ಸಾಧಕರಾದ ಶರಣಗೌಡ ಪಾಟೀಲ್​, ಸಿದ್ದರಾಮ ಮಹಾಂತಗೋಳ, ಉದಯಕುಮಾರ ಜೇವರ್ಗಿ, ಕಿಶೋರ ಗಾಯಕವಾಡ, ಮಲ್ಲಿಕಾರ್ಜುನ ಮೂಲಗೆ, ಅಶೋಕಕುಮಾರ ಪಟ್ಟಣಶೆಟ್ಟಿ, ದತ್ತಾತ್ರೇಯ ಬಿರಾದಾರ, ಶಿವಕುಮಾರ ದೊಡ್ಮನಿ, ಮಹಾಂತೇಶ ಪಾಟೀಲ್​, ದಯಾನಂದ ಪಾಟೀಲ್​, ರುಕ್ಕಪ್ಪ ಕಾಂಬಳೆ, ಜ್ಯೋತಿ ಪಾಟೀಲ್​, ಮಹೇಶ ಬಾಳಿ, ಡಾ.ರೆಡಸನ್​ ಎಸ್​.ಆರ್​., ರೇಣುಕಾ ಹಯ್ಯಾಳಕರ್​, ಶರಣಪ್ಪ ಬೆಳಮ್​, ವೀರಣ್ಣ ತೊರವಿ, ಶಿವರಾಜ ಹಿರೇಗೌಡ ಅವರಿಗೆ ಕಾಯಕ ಪ್ರಿಯ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಾಮರಸ್ಯ ಜೀವನ ಹಾಗೂ ಮಾನವ ಕಲ್ಯಾಣಕ್ಕೆ ವಚನಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಇಂದಿನ ಕಲುಷಿತ ಸಮಾಜ ಶುದ್ಧೀಕರಿಸಲು ಶರಣರ ನಡೆ ನುಡಿಗಳೆ ಸಾಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net