ಬಸವಣ್ಣನವರು ವಿಶ್ವ ವಿಸ್ಮಯ ಗುರು

ಹುಲಸೂರು ತಾಲೂಕಿನ ಗೋರ್ಟಾ(ಬಿ)ದಲ್ಲಿ ಸೋಮವಾರ ವಿಶ್ವಗುರು ಬಸವಣ್ಣನವರ ಜಯಂತಿ ಅರ್ಥಪೂರ್ಣ ಆಚರಿಸಲಾಯಿತು. ಲಿಂಗಾಯತ ಮಹಾಮಠದ ಪೀಠಾಧಿಪತಿ ಶ್ರೀ ಪ್ರಭುದೇವ ಸ್ವಾಮೀಜಿ, ಗ್ರಾಪಂ ಅಧ್ಯೆ ಸೀತಾಬಾಯಿ ಕೈಕಡಿ, ಪಿಡಿಒ ಸಿದ್ದಲಿಂಗಪ್ಪ, ಸದಸ್ಯರಾದ ಜೈದೀಪ ತೆಲಂಗ್​, ವಿಲಾಸ ಗುತ್ತೆ, ಪ್ರಮುಖರಾದ ಸೋಮೇಶ್ವರ ರಾಜೇಶ್ವರೆ, ನೀಲಮ್ಮ ರಾಜೋಳೆ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಪ್ರಭುದೇವ ಸ್ವಾಮೀಜಿ ನುಡಿ
  • ಗೋರ್ಟಾ(ಬಿ)ದಲ್ಲಿ ಅರ್ಥಪೂರ್ಣ ಜಯಂತಿ
ಹುಲಸೂರು: ಜಗತ್ತು ಪರಮಾತ್ಮನ ಮನೆ. ಇಲ್ಲಿರುವ ಪ್ರತಿಯೊಬ್ಬರೂ ಬಾಡಿಗೆದಾರರು. ಜಗತ್ತು ಸುಂದರಗೊಳಿಸಲು ಬಂದ ವಿಶ್ವಗುರು ಬಸವಣ್ಣನವರು ಕಾರಣಿಕ ಪುರುಷರು ಎಂದು ಲಿಂಗಾಯತ ಮಹಾಮಠದ ಪೀಠಾಧಿಪತಿ ಶ್ರೀ ಪ್ರಭುದೇವ ಸ್ವಾಮೀಜಿ ನುಡಿದರು.
ತಾಲೂಕಿನ ಗೋರಟಾ(ಬಿ) ಗ್ರಾಮದಲ್ಲಿ ಸೋಮವಾರ ಸಾಂಸತಿಕ ನಾಯಕ, ವಿಶ್ವಗುರು ಬಸವಣ್ಣನವರ ಜಯಂತಿ ನಿಮಿತ್ತ ಆಯೋಜಿಸಿದ್ದ ಮೆರವಣಿಗೆಗೆ ಚಾಲನೆ ಆಶೀರ್ವಚನ ನೀಡಿ ಪೂಜ್ಯರು, ಬಸವಣ್ಣನವರ ಜಯಂತಿ ಉತ್ಸವ ಇಂದು ವಿಶ್ವದಾದ್ಯಂತ ಬಸವ ಭಕ್ತರೆಲ್ಲ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನಮ್ಮ ನಿಮ್ಮೆಲ್ಲರ ನಿಜವಾದ ಹಬ್ಬವೇ ಬಸವ ಜಯಂತಿ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯೆ ಸೀತಾಬಾಯಿ ಕೈಕಡಿ, ಪಿಡಿಒ ಸಿದ್ದಲಿಂಗಪ್ಪ, ಸದಸ್ಯರಾದ ಜೈದೀಪ ತೆಲಂಗ, ವಿಲಾಸ ಗುತ್ತೆ ಪ್ರಮುಖರಾದ ಸೋಮೇಶ್ವರ ರಾಜೇಶ್ವರೆ, ನೀಲಮ್ಮನ ಬಳಗದ ಅಧ್ಯೆ ನೀಲಮ್ಮ ರಾಜೋಳೆ, ಸಂಜು ತೆಂಲಗ, ವೀರಶೆಟ್ಟಿ ರಾಜೋಳೆ, ಬಸವರಾಜ ಪಾಟೀಲ್​, ರಾಜಕುಮಾರ ಬಿರಾದಾರ, ಕರಬಸಪ್ಪ ಅಕ್ಕಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net