ಬಸವಕಲ್ಯಾಣದಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದ ನಿಮಿತ್ತ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶ್ರೀ ಪ್ರಣವಾನಂದ ಮಹಾಸ್ವಾಮೀಜಿ, ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯ, ಶ್ರೀ ಸಿದ್ಧಲಿಂಗ ಶಿವಾಚಾರ್ಯ, ಶ್ರೀ ಮೃತ್ಯುಂಜಯ ಶಿವಾಚಾರ್ಯ, ಶ್ರೀ ರತ್ನಕಾಂತ ಮಾಹಸ್ವಾಮೀಜಿ, ಗುಂಡುರೆಡ್ಡಿ, ಅರ್ಜುನ ಕನಕ, ಡಾ.ಬಸವರಾಜ ಸ್ವಾಮಿ, ರವೀಂದ್ರ ನಾವದ್ಗೀಕರ್, ದೀಪಕ ಗಾಯಕವಾಡ, ಅಶೋಕ ವಕಾರೆ, ಬಸವಂತಪ್ಪ ಲವಾರೆ ಇದ್ದರು
ಕಲ್ಯಾಣದಲ್ಲಿ ಅಗತ್ಯ ಸಿದ್ಧತೆ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
ಬಸವಕಲ್ಯಾಣ: ಧರ್ಮ, ಪರಿಸರ, ಕೃಷಿ ಕುರಿತು ಜಾಗೃತಿ ಮತ್ತು ರೈತಾಪಿ ವರ್ಗದ ಕಲ್ಯಾಣಕ್ಕಾಗಿ ಮಹಾಸಂಕಲ್ಪದೊಂದಿಗೆ ನಗರದಲ್ಲಿ ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ನಗರದಲ್ಲಿ ಜೂನ್ 28 ರಂದು ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ಅದ್ಧೂರಿ ಹಾಗೂ ಅರ್ಥಪೂರ್ಣವಗಿ ಅಚರಿಸಲು ನಿರ್ಧರಿಸಲಾಗಿದೆ.
ಸಮಾವೇಶದ ನಿಮಿತ್ತ ನಗರದ ಶ್ರೀ ಸದ್ಗುರು ಸದಾನಂದ ಸ್ವಾಮಿ ಮಠದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಚರ್ಚಿಸಿ ಪೂಜ್ಯರ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆ ಮಾಡಿಕೊಳ್ಳಲು ತೀರ್ಮಾನಿಸಲಾಯಿತು.
ನೇತೃತ್ವ ವಹಿಸಿದ್ದ ಮುಚಳಂಬನ ಶ್ರೀ ಪ್ರಣವಾನಂದ ಮಹಾಸ್ವಾಮೀಜಿ ಮಾತನಾಡಿ, ನಂಬಿಕೆಗಳನ್ನು ಅಲ್ಲಗಳೆದರೆ, ಮೂಲಭೂತ ಅಂಶಕ್ಕೆ ಧಕ್ಕೆ ತಂದರೆ ಸಹಿಸಲಾಗದು. ನಾವೆಲ್ಲರೂ ಒಂದೇ, ನಾವೆಲ್ಲರೂ ಹಿಂದೂಗಳು. ಕಲ್ಯಾಣದಲ್ಲಿ ರಾಜ್ಯದ ನಾನಾ ಕಡೆಯಿಂದ ಆಗಮಿಸುವ ಸುಮಾರು 300 ಜನ ಪೂಜ್ಯರು, ಸಂತರ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಈ ಸಮಾವೇಶ ಯಾರ ಪರ ಮತ್ತು ಯಾರ ವಿರುದ್ಧವೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ನೂರಾರು ಮಾತೆಯರಿಂದ ಪೂರ್ಣ ಕುಂಭದೊಂದಿಗೆ ಡೊಳ, ಕಹಳೆ, ನೃತ್ಯ, ಭಜನೆ, ಕೋಲಾಟ ಸೇರಿ ಹಲವಾರು ಕಲಾ ತಂಡಗಳೊಂದಿಗೆ ನಗರದಲ್ಲಿ ಭವ್ಯ ಮೆರವಣಿಗೆ ಮತ್ತು ಬೃಹತ್ ಸಮಾವೇಶ ಐತಿಹಾಸಿಕವಾಗಲಿದೆ ಎಂದರು.
ಜಿಪಂ ಮಾಜಿ ಗುಂಡುರೆಡ್ಡಿ ಕಮಲಾಪುರೆ, ಡಾ.ಬಸವರಾಜ ಸ್ವಾಮಿ ಮಾತನಾಡಿ, ಈ ಐತಿಹಾಸಿಕ ಸಮಾವೇಶಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಸದಲಾಪುರದ ಶ್ರೀ ಸಿದ್ಧಲಿಂಗ ಶಿವಾಚಾರ್ಯ, ಕಲ್ಲೂರಿನ ಶ್ರೀ ಮೃತ್ಯುಂಜಯ ಶಿವಾಚಾರ್ಯ, ನಿಜಶರಣ ಅಂಬಿಗರ ಚೌಡಯ್ಯ ಜಾಗೃತ ಪೀಠದ ಶ್ರೀ ರತ್ನಕಾಂತ ಮಹಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಪ್ರಮುಖರಾದ ರವಿ ಚಂದನಕೇರೆ, ವಿಎಚ್ಪಿ ತಾಲೂಕು ಅಧ್ಯಕ್ಷ ಶ್ರೀಶೈಲ ವಾತಡೆ, ಅರ್ಜುನ ಕನಕ, ಸಂಜು ಜಾಧವ್, ದೀಪಕ ಗಾಯಕವಾಡ, ಲ್ಮಪುತ್ರ ನಿಂಬಾಳ್ಕರ, ಸಂಜುರಡ್ಡಿ ಯರಬಾಗ, ಡಾ.ಧನರಾಜ ಚಂದನಕೇರೆ, ಸುನೀಲ ಮೆಕಾಲೆ, ಜಗದೀಶ ಅವಸೆ ಅಶೋಕ ವಕಾರೆ, ಬಸವಂತಪ್ಪ ಇತರರು ಭಾಗವಹಿಸಿದ್ದರು. ಬಜರಂಗ ದಳದ ತಲೂಕು ಸಂಯೋಜಕ ರವಿ ನಾವದ್ಗೇಕರ ಪ್ರಸ್ತಾವಿಕ ಮಾತನಾಡಿದರು. ಲೋಕೇಶ ಮೋಳಕೇರೆ ಸ್ವಾಗತಿಸಿ ವಂದಿಸಿದರು.