ಶಹಾಪುರದಲ್ಲಿ ಮೇ 19ರಂದು ಹಮ್ಮಿಕೊಂಡ ಬಸವಾದಿ ಶರಣರ ಹಿಂದೂ ಸಮಾವೇಶ ರದ್ದು ಪಡಿಸಬೇಕೆಂದು ಆಗ್ರಹಿಸಿ ಸೌಹಾರ್ದ ಕರ್ನಾಟಕ ಸಂಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಮತ್ತು ಎಸ್ಪಿ ಪೃಥ್ವಿಕ್ ಶಂಕರ್ ಅವರಿಗೆ ಶನಿವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. ಸಂಟನೆಯ ನೀಲಾ ಕೆ. ಪ್ರೋ.ಆರ್.ಕೆ.ಹುಡಗಿ, ಡಾ.ಮೀನಾಕ್ಷಿ, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಆರ್.ಜೆ.ಶೆಟಗಾರ, ಆರ್.ಚನ್ನಬಸ್ಸು ವನದುರ್ಗ, ಗಿರಿಯಪ್ಪಗೌಡ ಬಾಣತಿಹಾಳ, ಶಿವಣ್ಣ ಇಜೇರಿ, ಮಲ್ಲಿಕಾರ್ಜುನ ಸತ್ಯಂಪೇಟ್, ಚನ್ನಪ್ಪ ಆನೆಗುಂದಿ, ಬಸವರಾಜ ಕೋಣಿನ್, ಶಾಂತಪ್ಪ ಪಾಟೀಲ್, ಅನೀತಾ ಹಿರೇಮಠ, ಬಸವಲಿಂಗಮ್ಮ ನಾಟೇಕರ್, ಈರಮ್ಮ ಹಯ್ಯಾಳಕರ ಇತರರಿದ್ದರು.