ಬಸವ ಭವನ, ವಸತಿನಿಲಯ ನಿರ್ಮಾಣಕ್ಕೆ ಯೋಜನೆ

ಚಿತ್ತಾಪುರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ನಾಗರೆಡ್ಡಿ ಪಾಟೀಲ್​, ಡಾ.ಚಂದ್ರಶೇಖರ ಕಾಂತಾ, ಡಾ.ಪ್ರಭುರಾಜ ಕಾಂತಾ, ಅಣ್ಣಾರಾವ ಪಾಟೀಲ್​ ಮೂಡಬೂಳ, ಪ್ರಭುದೇವ ಬಮ್ಮನಳ್ಳಿ, ನಾಗರಾಜ ಭಂಕಲಗಿ, ಅಶೋಕ ನಿಪ್ಪಾಣಿ ಇತರರಿದ್ದರು.
ಚಿತ್ತಾಪುರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ನಾಗರೆಡ್ಡಿ ಪಾಟೀಲ್​, ಡಾ.ಚಂದ್ರಶೇಖರ ಕಾಂತಾ, ಡಾ.ಪ್ರಭುರಾಜ ಕಾಂತಾ, ಅಣ್ಣಾರಾವ ಪಾಟೀಲ್​ ಮೂಡಬೂಳ, ಪ್ರಭುದೇವ ಬಮ್ಮನಳ್ಳಿ, ನಾಗರಾಜ ಭಂಕಲಗಿ, ಅಶೋಕ ನಿಪ್ಪಾಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಾಗರೆಡ್ಡಿ ಪಾಟೀಲ್​ ಕರದಾಳ ಘೋಷಣೆ
  • ಚಿತ್ತಾಪುರದಲ್ಲಿ ಬಸವೇಶ್ವರ ಟ್ರಸ್ಟ್​ನ ಸಭೆ
ಚಿತ್ತಾಪುರ: ಪಟ್ಟಣದಲ್ಲಿ ಸುಸಜ್ಜಿತ ಬಸವ ಭವನ ಹಾಗೂ ಹೆಣ್ಣುಮಕ್ಕಳ ಉನ್ನತ ಶಿಣಕ್ಕೆ ಪೂರಕವಾಗುವಂತೆ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಿಸಲು ಉದ್ದೇಶಿಸಲಾಗಿದ್ದು, ಬಸವ ಜಯಂತಿ ಅಥವಾ ಅದಕ್ಕೂ ಮೊದಲು ಅಡಿಗಲ್ಲು ಸಮಾರಂಭ ನೆರವೇರಿಸಲಾಗುವುದು ಎಂದು ಬಸವೇಶ್ವರ ಚಾರಿಟೇಬಲ್​ ಟ್ರಸ್ಟ್​ ಅಧ್ಯ ನಾಗರೆಡ್ಡಿ ಪಾಟೀಲ್​ ಕರದಾಳ ಹೇಳಿದರು.
ಉದ್ದೇಶಿತ ಬಸವ ಭವನ ನಿರ್ಮಾಣದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಬಸವೇಶ್ವರ ಚಾರಿಟೇಬಲ್​ ಟ್ರಸ್ಟ್​ನ ಸಭೆಯಲ್ಲಿ ಮಾತನಾಡಿದ ಅವರು, ಬಸವ ಭವನ ನಿರ್ಮಾಣಕ್ಕಾಗಿ ಈಗಾಗಲೇ 2 ಎಕರೆ ಜಮೀನು ಖರೀದಿಸಲಾಗಿದೆ. ಟ್ರಸ್ಟ್​ನ ಹಣಕಾಸಿನ ವ್ಯವಹಾರ ಮತ್ತು ಕಾರ್ಯ ವೈಖರಿಯ ಬಗ್ಗೆ ಕೇಳಿಬಂದಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ. ಸಮಾಜದ ಅಭಿವೃದ್ಧಿಯೇ ಏಕೈಕ ಗುರಿಯಾಗಿದೆ. ಟ್ರಸ್ಟ್​ನಲ್ಲಿ ಮುಕ್ತ ಸದಸ್ಯತ್ವಕ್ಕೆ ಅವಕಾಶ ನೀಡಲಾಗಿದೆ. 2 ಲ ರೂ. ದೇಣಿಗೆ ನೀಡುವವರು ಸದಸ್ಯರಾಗಲು ಅರ್ಹರಾಗಿದ್ದು, ಈಗಾಗಲೇ 33 ಗಣ್ಯರು ಸದಸ್ಯತ್ವ ಪಡೆದಿದ್ದಾರೆ ಎಂದರು.
ಟ್ರಸ್ಟ್​ನಿಂದ ಪ್ರತಿವರ್ಷ ಬಸವ ಜಯಂತಿ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಕರೊನಾ ಬಳಿಕ ಸಾಮೂಹಿಕ ವಿವಾಹಕ್ಕೆ ಜನರು ಆಸಕ್ತಿ ತೋರುಸುತ್ತಿಲ್ಲ. ಬಸವ ಭವನ ಮತ್ತು ವಿದ್ಯಾರ್ಥಿನಿಯರಿಗಾಗಿ ಉಚಿತ ವಸತಿ ನಿಲಯ ಅಗತ್ಯವಿರುವುದರಿಂದ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಮುಖಂಡ ಅಂಬರೀಷ ಸುಲೇಗಾಂವ್​ ಮಾತನಾಡಿದರು.
ಪ್ರಮುಖರಾದ ಡಾ. ಚಂದ್ರಶೇಖರ ಕಾಂತಾ, ಡಾ.ಪ್ರಭುರಾಜ ಕಾಂತಾ, ಅಣ್ಣಾರಾವ ಪಾಟೀಲ್​ ಮೂಡಬೂಳ, ಪ್ರಭುದೇವ ಬಮ್ಮನಳ್ಳಿ, ಮಲ್ಲರೆಡ್ಡಿ ಗೋಪಸೇನ್​, ಅನಿಲ ವಡ್ಡಡಗಿ, ಅಶೋಕ ನಿಪ್ಪಾಣಿ, ಎಸ್​.ಎನ್​.ಪಾಟೀಲ್​, ಶರಣಪ್ಪ ಸಜ್ಜನ್​, ಶಾಂತಕುಮಾರ ಹತ್ತಿ, ಶ್ರೀನಿವಾಸರೆಡ್ಡಿ ಪಾಲಪ್​, ಶಿವರಾಜ ಪಾಳೇದ್​, ಸುವನರೆಡ್ಡಿ ಪೋತರೆಡ್ಠಿ, ಬಸವರಾಜ ಸಂಕನೂರ, ರಾಜಶೇಖರ ಯದಲಾಪುರ, ಬಸವರಾಜ ಕಾಳಗಿ, ಬಸವರಾಜ ಹೂಗಾರ, ಶ್ರೀಮಂತ ಕುಂಬಾರ, ರವೀಂದ್ರ ಗೊಬ್ಬೂರ, ಮಲ್ಲಿಕಾರ್ಜುನರೆಡ್ಡಿ ಇಜಾರ, ಸಿದ್ದಲಿಂಗ ಅನವಾರ, ಬಸವರಾಜಗೌಡ ಆಲೂರ, ಗೂಳಿನಾಥ ಹಳ್ಳಿಮನಿ, ಶರಣರೆಡ್ಡಿ ಗಡೇಸೂರ, ಅಯ್ಯಣ್ಣಗೌಡ ಗಡೇಸೂರ, ರಾಚಪ್ಪ ಬಮ್ಮನಳ್ಳಿ, ವಿಶಾಲ ದಂಡಗುಂಡ, ಸುಭಾಷಗೌಡ ಪಸಾರ, ಬಸಣ್ಣಗೌಡ ಭೀಮನಳ್ಳಿ ಇತರರಿದ್ದರು.
ಟ್ರಸ್ಟ್​ ಕಾರ್ಯದರ್ಶಿ ನಾಗರಾಜ ಭಂಕಲಗಿ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಕೊಳ್ಳಿ ಅವರು 2 ಲ ರೂ. ದೇಣಿಗೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net