ಬಂಜಾರ ಇತಿಹಾಸದ ಅಧ್ಯಯನ ಅಗತ್ಯ

ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಂತ ಸೇವಾಲಾಲ್​ ಮಹಾರಾಜರ ಜಯಂತಿಯಲ್ಲಿ ಡಾ.ಉಮೇಶ ಜಾಧವ್​, ರೇವುನಾಯಕ ಬೆಳಮಗಿ, ಪ್ರೊ.ಈ.ಟಿ.ಪುಟ್ಟಯ್ಯ, ಪ್ರೊ.ಶಶಿಕಾಂತ ಉಡಿಕೇರಿ, ಜಯಾಂಬಿಕ, ಪ್ರೊ.ರಮೇಶ ಲಂಡನಕರ್​, ಡಾ.ಎನ್​.ಜಿ.ಕಣ್ಣೂರ್​ ಇತರರಿದ್ದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಂತ ಸೇವಾಲಾಲ್​ ಮಹಾರಾಜರ ಜಯಂತಿಯಲ್ಲಿ ಡಾ.ಉಮೇಶ ಜಾಧವ್​, ರೇವುನಾಯಕ ಬೆಳಮಗಿ, ಪ್ರೊ.ಈ.ಟಿ.ಪುಟ್ಟಯ್ಯ, ಪ್ರೊ.ಶಶಿಕಾಂತ ಉಡಿಕೇರಿ, ಜಯಾಂಬಿಕ, ಪ್ರೊ.ರಮೇಶ ಲಂಡನಕರ್​, ಡಾ.ಎನ್​.ಜಿ.ಕಣ್ಣೂರ್​ ಇತರರಿದ್ದರು.
Published on
ಕಲಬುರಗಿ: ಬಂಜಾರ ಜನಾಂಗದ ಸಮಗ್ರ ಇತಿಹಾಸದ ಅಧ್ಯಯನ ನಡೆಸಿ ಬೆಳಕಿಗೆ ತರಲು ಗುಲ್ಬರ್ಗ ವಿಶ್ವವಿದ್ಯಾಲಯದ ಸಂತ ಸೇವಾಲಾಲ್​ ಅಧ್ಯಯನ ಪೀಠ ಮುಂದಾಗಬೇಕು ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ್​ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಸಂತ ಸೇವಾಲಾಲ್​ ಅಧ್ಯಯನ ಪೀಠದ ಸಹಯೋಗದಲ್ಲಿ ಕಾರ್ಯಸೌಧ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಂತ ಸೇವಾಲಾಲ್​ ಮಹಾರಾಜರ 287ನೇ ಜಯಂತಿಯಲ್ಲಿ ಮಾತನಾಡಿ, ಇಡೀ ದೇಶದಲ್ಲಿ ಒಂದೇ ಭಾಷೆಯನ್ನಾಡುವ ಬಂಜಾರ ಜನಾಂಗದ ಆಹಾರ, ಉಡುಗೆ&ತೊಡುಗೆ, ಆಚಾರ&ವಿಚಾರ ಮತ್ತು ಸಂಸತಿ ಸಮಾನವಾಗಿದೆ. ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಇತಿಹಾಸದ ಸಂಶೋಧನೆ ಅತ್ಯಗತ್ಯ. ಮೌಖಿಕ ಸಾಹಿತ್ಯ ಮತ್ತು ಜನಪದ ಹಾಡುಗಳಲ್ಲಿ ಅಡಕವಾಗಿರುವ ಬಂಜಾರ ಸಂಸತಿಯ ಬಗ್ಗೆ ಅಧ್ಯಯನ ಪೀಠ ಪಿಎಚ್​.ಡಿ ಅಧ್ಯಯನಕ್ಕೆ ಪ್ರೋತ್ಸಾಹ ನೀಡಿ, ಜನಾಂಗದ ಚರಿತ್ರೆ ಬಗ್ಗೆ ಹೊಸ ಬೆಳಕು ಚೆಲ್ಲಬೇಕಾಗಿದೆ ಎಂದರು.
ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಈ.ಟಿ.ಪುಟ್ಟಯ್ಯ ಮಾತನಾಡಿ, ಸಂತ ಸೇವಾಲಾಲ್​ ಮತ್ತು ಬಸವಣ್ಣನವರ ತತ್ವಗಳು ಸಮಾನವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಅಧ್ಯತೆ ವಹಿಸಿದ್ದರು. ಅಧ್ಯಯನ ಪೀಠದ ನಿರ್ದೇಶಕ ದಶರಥ ನಾಯಕ್​ ಪ್ರಾಸ್ತಾವಿಕ ಮಾನಾಡಿದರು. ಶ್ರೀ ಮುರಾರಿ ಮಹಾರಾಜ, ಮಾಜಿ ಸಚಿವ ರೇವುನಾಯಕ್​ ಬೆಳಮಗಿ, ಶಾಸಕ ಡಾ.ಅವಿನಾಶ ಜಾಧವ್​, ಮೌಲ್ಯಮಾಪನ ಕುಲಸಚಿವ ಡಾ.ಎನ್​.ಜಿ.ಕಣ್ಣೂರ, ಕುಲಸಚಿವ ಪ್ರೊ.ರಮೇಶ ಲಂಡನಕರ, ಸಿಂಡಿಕೇಟ್​ ಸದಸ್ಯ ಪ್ರೊ.ಹೂವಿನಭಾವಿ ಬಾಬಣ್ಣ ಇತರರಿದ್ದರು. ಸುಭಾಷ ರಾಠೋಡ್​ ಬಂಜಾರ ಗೀತೆ ಗಾಯನ ಮಾಡಿದರು. ಭುವನೇಶ್ವರಿ ಜಾಧವ್​ ಪ್ರಾರ್ಥನಾ ಗೀತೆ ಹಾಡಿದರು. ಮಲ್ಲಿಕಾರ್ಜುನ ಸ್ವಾಗತಿಸಿದರು. ಮಹೇಶ ನಿರೂಪಣೆ ಮಾಡಿದರು.
"

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಜನಿಸಿದ ಸೇವಾಲಾಲ್​ ಮಹಾರಾಜರು ಪ್ರಕೃತಿ ಪ್ರೀತಿಸುವ ಮಹಾನ್​ ಸಂತರಾಗಿದ್ದಾರೆ. ಆಯುರ್ವೇದ ವೈದ್ಯನಾಗಿ ಅನೇಕ ಪವಾಡದೊಂದಿಗೆ ಜನರ ಕಲ್ಯಾಣಕ್ಕೆ ಶ್ರಮಿಸಿ ಸಾಮರಸ್ಯದ ಬದುಕು ಕಟ್ಟಿಕೊಟ್ಟವರು.> ಪ್ರೊ.ಈ.ಟಿ.ಪುಟ್ಟಯ್ಯ, ವಿಶ್ರಾಂತ ಕುಲಪತಿ, ಗುವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net