Bangalore university: ಬಿಸಿಎ ಬೋಧನೆಗೆ ಅತಿಥಿ ಉಪನ್ಯಾಸಕರಿಂದ ಅರ್ಜಿ ಆಹ್ವಾನ

ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ
Published on

ಪ್ರಮುಖ ಮುಖ್ಯಾಂಶಗಳು

  • ಒಟ್ಟು 16 ಹುದ್ದೆಗಳಿದ್ದು, ಮೀಸಲಾತಿ ಅನ್ವಯ ಸಾಮಾನ್ಯ ವರ್ಗಕ್ಕೆ 8, ಪರಿಶಿಷ್ಟ ಜಾತಿ-3, 2ಎ- 3, 3ಎ-1, 3ಬಿ-1 ಹುದ್ದೆಗಳಿವೆ.
  • ಪಿಎಚ್.ಡಿ ವಿದ್ಯಾರ್ಹತೆಗೆ 49,920 ರೂ. ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ 38,080 ರೂ. ವೇತನ ನಿಗದಿ
  • ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಸಿಎ/ಎಂಎಸ್‌ಸಿ/ಎಂ.ಟೆಕ್ ಹಾಗೂ ನೆಟ್/ಸ್ಲೆಟ್/ಪಿಎಚ್.ಡಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.
ಬೆಂಗಳೂರು ಬೆಂಗಳೂರು ವಿಶ್ವವಿದ್ಯಾಲಯದ ಬಿಸಿಎ ವಿಭಾಗವು 2026-27ನೇ ಶೈಕ್ಷಣಿಕ ಸಾಲಿನ ಪೂರ್ಣಕಾಲಿಕ ಬೋಧನೆಗಾಗಿ ಅತಿಥಿ ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 16 ಹುದ್ದೆಗಳಿದ್ದು, ಮೀಸಲಾತಿ ಅನ್ವಯ ಸಾಮಾನ್ಯ ವರ್ಗಕ್ಕೆ 8, ಪರಿಶಿಷ್ಟ ಜಾತಿ-3, 2ಎ- 3, 3ಎ-1, 3ಬಿ-1 ಹುದ್ದೆಗಳಿವೆ.
ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಸಿಎ/ಎಂಎಸ್‌ಸಿ/ಎಂ.ಟೆಕ್ ಹಾಗೂ ನೆಟ್/ಸ್ಲೆಟ್/ಪಿಎಚ್.ಡಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.
ಪಿಎಚ್.ಡಿ ವಿದ್ಯಾರ್ಹತೆಗೆ 49,920 ರೂ. ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ 38,080 ರೂ. ವೇತನ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಬೆಂ.ವಿವಿ ಜ್ಞಾನಭಾರತಿ ಆವರಣದ ರೂಸಾ ಕಟ್ಟಡದಲ್ಲಿರುವ ಬಿಸಿಎ ವಿಭಾಗವನ್ನು ಸಂಪರ್ಕಿಸಬಹುದು.
ಅರ್ಜಿಯನ್ನು ಜು.26ರೊಳಗೆ ಗೂಗಲ್ ಾರ್ಮ್ ಲಿಂಕ್ ಮೂಲಕ ಸಲ್ಲಿಸಬೇಕು. bca@bub.ernet.in
ಲಿಂಕ್ ಸಂಪರ್ಕಿಸಬಹುದು. ಅಧಿಸೂಚನೆಗೂ ಮೊದಲೇ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ವಿವಿ ಬಿಸಿಎ ವಿಭಾಗ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net