ಕೋ.ಶಿವಾಪುರ: ಬಣಜಿಗ ಸಮಾಜಕ್ಕೆ ಸಲ್ಲಬೇಕಾದ ಸರ್ಕಾರಿ ಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ಸಮೀಪದ ತೆನಿಕೊಳ್ಳದಲ್ಲಿ ಶುಕ್ರವಾರ ಬಣಜಿಗ ಸಮಾಜದ ೇಮಾಭಿವದ್ಧಿ ಸಂದ ಯರಝರ್ವಿ ಗ್ರಾಮ ಟಕ ಉಧ್ಘಾಟಿಸಿ ಅವರು ಮಾತನಾಡಿ, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಣಜಿಗ ಸಮುದಾಯದ ಸಂಟನೆ ಅಗತ್ಯವಿದೆ ಎಂದರು. ಯರಗಟ್ಟಿಯ ಹಿರಿಯ ವರ್ತಕ ಮಹಾಬಳೇಶ್ವರ ಹಾದಿಮನಿ, ಗೋಕಾಕದ ಉದ್ದಿಮೆದಾರ ಬಸವರಾಜ ಕಲ್ಯಾಣಶೆಟ್ಟಿ, ಸವದತ್ತಿ ತಾಲೂಕು ಬಣಜಿಗ ಸಮುದಾಯದ ಅಧ್ಯ ಪ್ರವಿಣ ಪಟ್ಟಣಶೆೆಟ್ಟಿ, ಮನವಳ್ಳಿಯ ಉಮೇಶ ಬಾಳಿ, ಮಹಾಂತೇಶ ಜಕಾತಿ, ಅಶೋಕ ಶೆಟ್ಟರ, ಶರಣಕುಮಾರ ಅಂಗಡಿ, ಶಿವಾನಂದ ಪಟ್ಟಣಶೆಟ್ಟಿ, ಗಿರೀಶ ಉದೋಶಿ, ರಾಜು ಕೋಳಲಗಿ, ಚನ್ನಪ್ಪ ಶೆಟ್ಟರ, ರಾಜೇಶ ಉದೋಶಿ, ಬಸವರಾಜ ಅತ್ತಿಗೇರಿ, ಪ್ರೇಮಾ ಅಂಗಡಿ, ಮಹಾದೇವಿ ಉಪ್ಪಿನ, ಡಾ.ಶಂಕರಲಿಂಗಪ್ಪ ಅಂಗಡಿ, ಸಂತೋಷ ಹಾದಿಮನಿ, ರಾಜೇಂದ್ರ ವಾಲಿ, ರಮೇಶ ಅಂಗಡಿ, ಪ್ರಕಾಶ ಕಬ್ಬೂರ ಉಪಸ್ಥಿತರಿದ್ದರು. ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.