ಅಂತಾರಾಷ್ಟ್ರೀಯ ವಸ್ತುಗಳ ಬಾಲಿ ಎಕ್ಸ್​ಪೋ ಶುರು

,
,
Published on

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜನೆ
  • ಆಕರ್ಷಕ ಸಾಮಾನುಗಳಿಗೆ ಮುಗಿಬಿದ್ದ ಜನತೆ
ಕಲಬುರಗಿ: ನಗರದ ಸಾರ್ವಜನಿಕ ಉದ್ಯಾನದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ವಿದೇಶಿ ಫರ್ನಿಚರ್​, ಸಿಹಿ ತಿಂಡಿ ಸೇರಿ ವೈವಿಧ್ಯಮಯ ಅಂತಾರಾಷ್ಟ್ರೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ "ಇಂಡೋನೇಷ್ಯಾ ಬಾಲಿ ಎಕ್ಸ್​ಪೋ'ಗೆ ಪಾಲಿಕೆ ಮೇಯರ್​ ವರ್ಷಾ ರಾಜೀವ್​ ಜಾನೆ ಶುಕ್ರವಾರ ಚಾಲನೆ ನೀಡಿದರು.
ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್​ ಆಯುಕ್ತ ಶರಣಪ್ಪ ಸುಬೇದಾರ ಸಾಥ್​ ನೀಡಿದರು. ಆಯೋಜಕರಾದ ರವಿ ಎಂ., ಪ್ರಶಾಂತ, ವಿವೇಕ ಇತರರಿದ್ದರು. ಉದ್ಘಾಟಿಸಿದ ಬಳಿಕ ಇಡೀ ಪ್ರದರ್ಶನದಲ್ಲಿ ಒಂದು ಸುತ್ತು ಹಾಕಿ ಸಾಮಾನುಗಳನ್ನು ವೀಕ್ಷಿಸಿ ಶುಭ ಕೋರಿದರು.
ನಗರದಲ್ಲಿ ಇದೇ ಮೊದಲ ಸಲ ಒಂದೇ ಸೂರಿನಡಿ ಮನೆಗೆ ಬೇಕಿರುವ ಎಲ್ಲ ವಸ್ತುಗಳು ಸಿಗುವಂತಹ ಮೇಳ ಇದಾಗಿದ್ದು, ಪ್ರದರ್ಶನ ಆ.31ರವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಇರಲಿದೆ. ಶಾಪಿಂಗ್​ ಪ್ರಿಯರಿಗೆ ಒಂದೇ ಸ್ಥಳದಲ್ಲಿ ದೇಶ-ವಿದೇಶದ ವೈವಿಧ್ಯಮಯ ವಸ್ತುಗಳ ಅದ್ಭುತ ಸಂಗ್ರಹ ಇಲ್ಲಿದೆ. ಇಂಡೋನೇಷ್ಯಾ ಇತರ ದೇಶದ ಫರ್ನಿಚರ್​, ಸೆರಾಮಿಕ್​ ವಸ್ತು, ಪಂಜಾಬಿ ಸ್ಯಾಂಡಲ್ಸ್​, ಆಕರ್ಷಕ ಸೀರೆ, ಬ್ರಾಂಡೆಡ್​ ಪರ್ಸ್​, ಕುರ್ತಾ, ಸೋಫಾ, ಕಾರ್ಪೆಟ್​, ಶೂ ರ್ಯಾಕ್​, ಜೈಪುರ ಬೆಡ್​ಶೀಟ್​, ಜ್ಯುವೆಲ್ಲರಿ ಸೇರಿ ಹಲವಾರು ವಿಶೇಷ ವಸ್ತುಗಳಲ್ಲದೇ ಬಾಲಿ ಸ್ಪೆಷಲ್​ ಐಟಂ, ಮಸಾಜ್​ ಚೇರ್​, ವಾಕರ್​ನಂಥ ಉತ್ಪನ್ನಗಳು ಸಿಗಲಿವೆ ಎಂದು ಆಯೋಜಕ ರವಿಕುಮಾರ ತಿಳಿಸಿದರು.
ಮೇಳದ ಮತ್ತೊಂದು ವಿಶೇಷ ಆಕರ್ಷಣೆ ಅಂದರೆ ದುಬೈ ಪ್ರಸಿದ್ಧ ಬಾಕ್ಲಾವ್​ ಸ್ವೀಟ್​. ಹಲವು ದೇಶದ ವಿಶೇಷವಾಗಿರುವ ಡೆಪ್ರೂಟ್ಸ್​ ಸಹ ಲಭ್ಯವಿದೆ. ಹಳೆಯ ಸೋಫಾ ಎಕ್ಸ್​ಚೇಂಜ್​ ಮಾಡಿ ಹೊಸದ ಖರೀದಿ ಮೇಲೆ ಶೇ.70ರವರೆಗೆ ಆಫರ್​ ನೀಡಲಾಗಿದೆ. ಮಾಹಿತಿಗೆ ಮೊ.97422 44688ಗೆ ಸಂಪರ್ಕಿಸಬಹುದು. ಎಕ್ಸ್​ಪೋಗೆ ಜನರು ಮುಗಿಬಿದ್ದಿದ್ದು, ಆಕರ್ಷಕ ಸಾಮಾನುಗಳಿಗೆ ಮಾರುಹೋಗುತ್ತಿದ್ದಾರೆ.
"

ದೇಶ-ವಿದೇಶದ ಅಪರೂಪದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳೆ ಪ್ರಥಮ ಬಾರಿಗೆ ಕಲಬುರಗಿಯಲ್ಲಿ ಜರುಗುತ್ತಿದೆ. ಫರ್ನಿಚರ್​ ಸೇರಿ ಎಲ್ಲ ಸಾಮಾನುಗಳು ಆಕರ್ಷಕವಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು.

— > ವರ್ಷಾ ರಾಜೀವ್​ ಜಾನೆ ಮೇಯರ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net