ಬಾಳಯ್ಯಜ್ಜನವರ ಜಾತ್ರೆ ಇಂದಿನಿಂದ

ಬಾಳಯ್ಯಜ್ಜನವರು
ಬಾಳಯ್ಯಜ್ಜನವರು
Published on
ಮಮದಾಪುರ: ಗೋಕಾಕ ತಾಲೂಕಿನ ತವಗ ಮಠದ ಸದ್ಗುರು ಬಾಳಯ್ಯ ಅಜ್ಜನವರ ಜಾತ್ರಾ ಮಹೋತ್ಸವ ೆ.22ರಿಂದ 24ರವರೆಗೆ ನೆರವೇರಲಿದೆ. ೆ.22ರಂದು ಬೆಳಗ್ಗೆ 6 ಗಂಟೆಗೆ ದೇವರ ಗದ್ದುಗೆಗೆ ವಿಶೇಷ ಪೂಜಾಭಿಷೇಕ ನೆರವೇರುವುದು. ರಾತ್ರಿ 10 ಗಂಟೆಗೆ ಸುತ್ತಮುತ್ತಲಿನ ಗ್ರಾಮಗಳ ದೇವರ ಪಲ್ಲಕ್ಕಿ ಬರಮಾಡಿಕೊಳ್ಳುವುದು. ೆ.23ರಂದು ಅನ್ನದಾಸೋಹ ಪ್ರಾರಂಭವಾಗಲಿದೆ. ಮಧ್ಯಾಹ್ನ 2 ಗಂಟೆಗೆ ಮಠದ ಪೀಠಾಧಿಕಾರಿ ಬ್ರಹ್ಮಶ್ರೀ ಸಿದ್ಧಲಿಂಗಯ್ಯ ಸ್ವಾಮೀಜಿ ಅವರ ತುಲಾಭಾರ ಕಾರ್ಯಕ್ರಮ ನೆರವೇರುವುದು. ಸಂಜೆ 5ಕ್ಕೆ ಶ್ರೀಗಳಿಂದ ಭವಿಷ್ಯವಾಣಿ, ರಾತ್ರಿ 10 ಗಂಟೆಗೆ ಬೈಲಾಟ ಪ್ರದರ್ಶನಗೊಳ್ಳಲಿದೆ. ೆ.24ರಂದು ಬೆಳಗ್ಗೆ 8 ಗಂಟೆಗೆ ಎಲ್ಲ ದೇವರ ಪಲ್ಲಕ್ಕಿಗಳ ಬೀಳ್ಕೊಡುಗೆ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net