ಬಳತ (ಕೆ) ಅಕ್ರಮ ನಿವೇಶನ ಹಂಚಿಕೆ

,
,
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮಸ್ಥರ ಆರೋಪ > ಪಂಚಾಯಿತಿ ಅಧ್ಯಕ್ಷ , ಪಿಡಿಒ ವಿರುದ್ಧ ಕ್ರಮಕ್ಕೆ ಒತ್ತಾಯ
ಕಮಲನಗರ: ತಾಲೂಕಿನ ಬಳತ(ಕೆ) ಗ್ರಾಮದಲ್ಲಿ ಸರ್ಕಾರಿ ಭೂಮಿ ಸರ್ವೇ ನಂಬರ್​ 81ರಲ್ಲಿ ಸಾರ್ವಜನಿಕರಿಗಾಗಿ ಕೊಳವೆ ಬಾವಿ, ಸ್ಮಶಾನ ಭೂಮಿ ಸಲುವಾಗಿ ಮೀಸಲಿಟ್ಟಿದ್ದ ಭೂಮಿಯನ್ನು ಬಳತ(ಬಿ) ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರ ಹಾಗೂ ಪಿಡಿಒ ಅನಧಿಕೃತವಾಗಿ ವಸತಿ ನಿವೇಶನ ಹಂಚಿಕೆ ತಯಾರಿಸಿ ನಮೂನೆ&9 ಡಿಜಿಟಲ್​ ಖಾತೆ ಮಾಡಿರುವ ಪ್ರಕರಣದ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ಸಾರ್ವಜನಿಕರು ತಹಸೀಲ್ದಾರ್​ ಅಮಿತಕುಮಾರ ಕುಲಕರ್ಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಕಾಶಿನಾಥ ಶೇಳೆಕೆ ಮಾತನಾಡಿ, ಸರ್ವೆ.ನಂಬರ್​ 81/* ವಿಸ್ತೀರ್ಣ 19 ಎಕರೆ 17 ಗುಂಟೆ ಜಮೀನು ಇದ್ದಿದ್ದು ಸಾರ್ವಜನಿಕರು ಬಳಸುತ್ತಿದ್ದಾರೆ. ಇಲ್ಲಿಯೇ ಸರ್ಕಾರದ ಅನುದಾನದಲ್ಲಿ ಎಸ್​ಟಿ ಸಮುದಾಯ ಭವನ ನಿರ್ಮಾಣವಾಗಿದೆ. ಅದರಲ್ಲಿಯೇ ಸರ್ಕಾರಿ ಪ್ರಾಥಮಿಕ ಶಾಲೆ, ಮತ್ತು ಬೀರಲಿಂಗೇಶ್ವರ ದೇವಸ್ಥಾನ ಹೊಂದಿದ್ದು ಬಿಟ್ಟರೆ, ಯಾವುದೇ ಖಾಸಗಿ ವ್ಯಕ್ತಿಯ ಮಾಲಿಕತ್ವ ಅಥವಾ ಅಧಿಕಾರ ಇರುವುದಿಲ್ಲ ಎಂದರು.
ಸರ್ಕಾರಿ ಭೂಮಿ ಅಕ್ರಮವಾಗಿ ಬಳತ(ಬಿ) ಗ್ರಾಪಂ ಅಧ್ಯಕ್ಷ , ಸದಸ್ಯರು ಹಾಗೂ ಪಿಡಿಒ ಅಕ್ರಮವಾಗಿ ಅಧಿಕಾರವಿರದೇ 19 ನಿವೇಶನಗಳನ್ನು ತಯಾರಿಸಿ ಅನಧಿಕೃತವಾಗಿ ಡಿಜಿಟಲ್​ ಖಾತೆ ನಮೂನೆ&9ರಲ್ಲಿ ಹಂಚಿಕೆ ಮಾಡಿದ್ದು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.
ಅಕ್ರಮ ಎಸಗಿದ್ದು, ಅಲ್ಲದೇ ಅಧಿಕಾರ ದುರುಪಯೋಗ ಪಡಿಸಿಕೊಂಡು ನಿವೇಶನ ಹಂಚಿಕೆ ಮಾಡಿದ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಾಗನಾಥ ಬಿರಾದಾರ, ಶರಣಪ್ಪ ಬಿರಾದಾರ, ಕಾಶಿನಾಥ ಶೆಳೆಕೆ, ಕಾಂತು ಬಿರಾದಾರ, ರಾಮಶೆಟ್ಟಿ ಬಿರಾದಾರ, ರಾಮಶೆಟ್ಟಿ ಕೊರಳೆ, ಕಲ್ಲಪ್ಪ ಹೂಗಾರ, ಯೋಗೇಶ್ವರ ಲ್ಮಕಾಂತ, ಶ್ರೀನಿವಾಸ, ಧನರಾಜ, ಸತೀಷ, ನಾಗನಾಥ, ಸದಾನಂದ, ತಾನಾಜಿ, ಶಮಸುದ್ದೀನ್​, ಸಂಜೀವಕುಮಾರ, ಸುರೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net