ಬಾಳಪ್ಪನವರ ಆದರ್ಶ ಪಾಲನೆಯಾಗಲಿ

ಅಮಟೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವೀರಕೇಸರಿ ಅಮಟೂರ ಬಾಳಪ್ಪ ಉತ್ಸವವನ್ನು ವಿಜಯಾನಂದ ಸ್ವಾಮೀಜಿ, ಪ್ರಭಾ ಅಕ್ಕ ಉದ್ಘಾಟಿಸಿದರು. ಶಾಸಕ ಮಹಾಂತೇಶ ಕೌಜಲಗಿ, ಡಾ.ಮಹಾಂತಯ್ಯ ಆರಾದ್ರಿಮಠ, ಸಂಜಯ ಶಿಂಧಿಹಟ್ಟಿ ಇದ್ದರು.
ಅಮಟೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವೀರಕೇಸರಿ ಅಮಟೂರ ಬಾಳಪ್ಪ ಉತ್ಸವವನ್ನು ವಿಜಯಾನಂದ ಸ್ವಾಮೀಜಿ, ಪ್ರಭಾ ಅಕ್ಕ ಉದ್ಘಾಟಿಸಿದರು. ಶಾಸಕ ಮಹಾಂತೇಶ ಕೌಜಲಗಿ, ಡಾ.ಮಹಾಂತಯ್ಯ ಆರಾದ್ರಿಮಠ, ಸಂಜಯ ಶಿಂಧಿಹಟ್ಟಿ ಇದ್ದರು.
Published on
ಬೈಲಹೊಂಗಲ: ಬ್ರಿಟಿಷ್​ ಕಲೆಕ್ಟರ್​ ಆಗಿದ್ದ ಜಾನ್​ ಥ್ಯಾಕರೆಗೆ ಗುಂಡು ಹಾರಿಸಿ, ಕಿತ್ತೂರು ರಾಣಿ ಚನ್ನಮ್ಮಳಿಗೆ ಜಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಮಟೂರ ಬಾಳಪ್ಪ ಉತ್ಸವ ಸರ್ಕಾರದಿಂದ ಆಯೋಜಿಸುವ ಯೋಜನೆ ಹೊಂದಲಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ತಾಲೂಕಿನ ಅಮಟೂರ ಗ್ರಾಮದ ಸರ್ಕಾರಿ ಕನ್ನಡ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸತಿ ಇಲಾಖೆ ಮತ್ತು ತಾಲೂಕು ಆಡಳಿತದ ಆಶ್ರಯದಲ್ಲಿ ದಿ.ನಾಗನಗೌಡ ಪಾಟೀಲ ವೇದಿಕೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವೀರಕೇಸರಿ ಅಮಟೂರ ಬಾಳಪ್ಪ ಉತ್ಸವದ ಅಧ್ಯತೆ ವಹಿಸಿ ಮಾತನಾಡಿದರು. ನಾಡ ರಕ್ಷಣೆಗೆ ಶ್ರಮಿಸಿದ ಮಹನೀಯರಿಗೆ ಗೌರವ ನೀಡುವ ಮೂಲಕ ಅವರ ಆದರ್ಶ ಪಾಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ಬೇವಿನಕೊಪ್ಪ ಆನಂದಾಶ್ರಮದ ವಿಜಯಾನಂದ ಸ್ವಾಮೀಜಿ ಮಾತನಾಡಿದರು. ಡಾ.ಮಹಾಂತೇಶ ಆರಾದ್ರಿಮಠ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಪ್ರಭಾ ಅಕ್ಕ ಸಾನ್ನಿಧ್ಯ ವಹಿಸಿದ್ದರು. ಕಸಾಪ ಮೂಡಲಗಿ ತಾಲೂಕಾಧ್ಯ ಸಂಜಯ ಶಿಂಧಿಹಟ್ಟಿ ಅಮಟೂರ ಬಾಳಪ್ಪ ಕುರಿತು ಬರೆದ ಪುಸ್ತಕ ಬಿಡುಗಡೆ ಮಾಡಲಾಯಿತು. ತಹಸೀಲ್ದಾರ್​ ಹನುಮಂತ ಶಿರಹಟ್ಟಿ, ತಾಪಂ ಇಒ ಸಂಜೀವ ಜುನ್ನೂರ, ಗ್ರಾಪಂ ಅಧ್ಯ ರಾವೇಂದ್ರ ಸಂಗಪ್ಪನವರ, ಬಾಳಪ್ಪ ಟ್ರಸ್ಟ್​ ಕಮಿಟಿ ಅಧ್ಯ ಸೋಮನಗೌಡ ಪಾಟೀಲ, ಆರೋಗ್ಯಾಧಿಕಾರಿ ಡಾ.ಎಸ್​.ಎಸ್​.ಸಿದ್ದನ್ನವರ, ಕಸಾಪ ಮಾಜಿ ಜಿಲ್ಲಾಧ್ಯ ಮೋಹನ ಪಾಟೀಲ, ಕಂದಾಯ ನಿರೀಕ ಬಸವರಾಜ ಬೋರಗಲ, ಗ್ರಾಮ ಲೆಕ್ಕಾಧಿಕಾರಿ ಅಭಿಷೇಕ, ಡಾ.ರಾಜಶೇಖರ ಬಿರಾದಾರ, ರಾಜು ಹಕ್ಕಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net