ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ

ಬೈಲಹೊಂಗಲ ನಗರದ ಮಳೆ ಹಾನಿ ಪ್ರದೇಶಕ್ಕೆ ಸಂಸದ ಜಗದೀಶ ಶೆಟ್ಟರ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಆಲಿಸಿದರು. ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಸುಭಾಸ ಪಾಟೀಲ, ವಿಜಯ ಮೆಟಗುಡ್ಡ, ಗುರು ಮೆಟಗುಡ್ಡ ಇತರರಿದ್ದರು.
ಬೈಲಹೊಂಗಲ ನಗರದ ಮಳೆ ಹಾನಿ ಪ್ರದೇಶಕ್ಕೆ ಸಂಸದ ಜಗದೀಶ ಶೆಟ್ಟರ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಆಲಿಸಿದರು. ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಸುಭಾಸ ಪಾಟೀಲ, ವಿಜಯ ಮೆಟಗುಡ್ಡ, ಗುರು ಮೆಟಗುಡ್ಡ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ಈಚೆಗೆ ಸುರಿದ ಮಳೆಯಿಂದ ಹಾನಿಗೊಳಗಾದ ನಗರದ ವಿವಿಧ ಪ್ರದೇಶಗಳಿಗೆ ಶನಿವಾರ ಸಂಸದ ಜಗದೀಶ ಶೆಟ್ಟರ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಸಂತ್ರಸ್ತರ ಅಹವಾಲು ಆಲಿಸಿದರು.
ಕಲ್ಮಠಗಲ್ಲಿ, ಚನ್ನಮ್ಮ ಸಮಾಧಿ ಸಮೀಪ ಮಳೆಯಿಂದ ಕುಸಿದು ಬಿದ್ದಿರುವ ಮನೆ ಹಾಗೂ ಬಜಾರ್​ ರೋಡ ಮತ್ತು ಬಸ್​ ನಿಲ್ದಾಣದ ಹತ್ತಿರ ಮಳೆ ನೀರು ನುಗ್ಗಿ ಹಾನಿಗೊಳಗಾದ ಅಂಗಡಿ ವೀಸಿದರು. ತಹಸೀಲ್ದಾರ್​ ಸದಾಶಿವ ಮಕ್ಕೋಜಿ ಹಾಗೂ ನಗರಸಭೆ ಆಯುಕ್ತೆ ಭಾಗ್ಯಶ್ರೀ ಹುಗ್ಗಿ ಅವರನ್ನು ಸ್ಥಳಕ್ಕೆ ಕರೆಸಿ, ಹಾನಿಯ ಸಮಗ್ರ ವರದಿ ಸಿದ್ಧಪಡಿಸಿ ಮನೆ ಕಳೆದುಕೊಂಡವರು ಹಾಗೂ ವ್ಯಾಪಾರ ನಷ್ಟ ಅನುಭವಿಸಿದ ಅರ್ಹ ಸಂತ್ರಸ್ತರಿಗೆ ಸರ್ಕಾರದ ನಿಯಮಾನುಸಾರ ತಣ ಪರಿಹಾರ ಒದಗಿಸಲು ಸೂಚಿಸಿದರು.
ಹುಡೇದಬಾವಿ ಹಾಗೂ ಸುತ್ತಮುತ್ತಲಿನ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಪದೇಪದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಸಾರ್ವಜನಿಕರು ಸಂಸದ ಶೆಟ್ಟರಗೆ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಸಂಸದ ಶೆಟ್ಟರ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ
ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಅಗತ್ಯ ಕ್ರಮ ಕೆಗೊಳ್ಳುವುದಾಗಿ ಭರವಸೆ ನೀಡಿದರು.
ಇದಕ್ಕೂ ಮೊದಲು ಅ-ಧಿಕಾರಿಗಳ ಸಭೆ ನಡೆಸಿದ ಸಂಸದರು ಮಳೆಗಾಲದ ಮುನ್ನವೇ ಸಮಸ್ಯೆ ಕುರಿತು ಕ್ರಮ ಜರುಗಿಸಬೇಕು. ಬಿಜೆಪಿ ಸರ್ಕಾರ ಇದ್ದಾಗ ಸಂತ್ರಸ್ಥರಿಗೆ ಹೆಚ್ಚಿನ ಪರಿಹಾರ ನೀಡಲಾಗುತಿತ್ತು. ಸಚಿವರಿಗೆ ಈ ಕುರಿತು ವಿವರಿಸಿ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಬಿಜೆಪಿ ಜಿಲ್ಲಾಧ್ಯ ಸುಭಾಸ ಪಾಟೀಲ, ಜೆಡಿಎಸ್​ ಜಿಲ್ಲಾಧ್ಯ ಶಂಕರ ಮಾಡಲಗಿ, ಬಿಜೆಪಿ ಮುಖಂಡರಾದ ವಿಜಯ ಮೆಟಗುಡ್ಡ, ಗುರು ಮೆಟಗುಡ್ಡ, ಮಂಡಲ ಅಧ್ಯ ಸುಭಾಸ ತುರಮರಿ,
ಎ್​.ಎಸ್​.ಸಿದ್ದನಗೌಡರ, ಜಗದೀಶ ಬೂದಿಹಾಳ, ಸಚಿನ್​ ಕಡಿ, ಗುರುಪಾದ ಕಳ್ಳಿ, ಶ್ರೀಶೆಲ ಯಡಳ್ಳಿ, ನಿಂಗಪ್ಪ ಚೌಡನ್ನವರ, ಮಡಿವಾಳಪ್ಪ ಹೋಟಿ, ಸುನೀಲ ಮರಕುಂಬಿ, ಪ್ರುಲ ಪಾಟೀಲ, ಸಂತೋಷ ಹಡಪದ, ಲಕ್ಕಪ್ಪ ಕಾರಗಿ, ವಿಶಾಲ ಬೋಗೂರ, ಪ್ರಶಾಂತ ಅಮ್ಮಿನಬಾವಿ, ಚಂದನ ಕೌಜಲಗಿ, ಬಸವರಾಜ ನೇಸರಗಿ, ಗುರುಪಾದ ಅಂಗಡಿ,
ಸದಾಶಿವ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net