ಬೈಲಹೊಂಗಲ ಆಸ್ಪತ್ರೆ ಮಾದರಿ

ಬೈಲಹೊಂಗಲ ನಗರದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ತೀವ್ರ ನಿಗಾ ಟಕ ನಿರ್ಮಾಣ ಕಾಮಗಾರಿಗೆ ಸಚಿವ ದಿನೇಶ ಗುಂಡೂರಾವ್​ ಶಂಕುಸ್ಥಾಪನೆ ನೆರವೇರಿಸಿದರು. ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಗಣಪತಿ ಭಟ್ಟರು, ವಿನಯ ನಾವಲಗಟ್ಟಿ, ಸುನೀಲ ಹನುಮಣ್ಣವರ, ಹನುಮಂತ ಶಿರಹಟ್ಟಿ ಇತರರಿದ್ದರು.
ಬೈಲಹೊಂಗಲ ನಗರದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ತೀವ್ರ ನಿಗಾ ಟಕ ನಿರ್ಮಾಣ ಕಾಮಗಾರಿಗೆ ಸಚಿವ ದಿನೇಶ ಗುಂಡೂರಾವ್​ ಶಂಕುಸ್ಥಾಪನೆ ನೆರವೇರಿಸಿದರು. ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಗಣಪತಿ ಭಟ್ಟರು, ವಿನಯ ನಾವಲಗಟ್ಟಿ, ಸುನೀಲ ಹನುಮಣ್ಣವರ, ಹನುಮಂತ ಶಿರಹಟ್ಟಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಅತ್ಯುತ್ತಮ ಕಾರ್ಯ ನಿರ್ವಹಿಸುವ ಮೂಲಕ ರಾಜ್ಯದಲ್ಲೇ ಮಾದರಿಯಾಗಿದೆ. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕು ಆಸ್ಪತ್ರೆ ಮೇಲ್ದರ್ಜೆಗೇರಿಸುವ ಸದುದ್ದೇಶದಿಂದ 50 ಹಾಸಿಗೆಗಳ ತೀವ್ರ ನಿಗಾ ಟಕ ಮಂಜೂರು ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್​ ಹೇಳಿದರು.
ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 50 ಹಾಸಿಗೆಗಳ ತೀವ್ರ ನಿಗಾ ಟಕ (ಸಿಸಿಯು)ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಬಡತನ ನಿವಾರಣೆ ಹಾಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಗ್ಯಾರಂಟಿ ಯೋಜನೆಗಳ ಮೂಲಕ ಮಾದರಿ ರಾಜ್ಯ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಆರೋಗ್ಯ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಜಿಲ್ಲೆಗೆ ಸುಮಾರು 300 ಕೋಟಿ ರೂ.ಅನುದಾನ ಈಗಾಗಲೇ ಸರ್ಕಾರ ಒದಗಿಸಿದೆ ಎಂದರು.
ಇಲ್ಲಿನ ಆಸ್ಪತ್ರೆಯಲ್ಲಿ ತಿಂಗಳಿಗೆ ಸುಮಾರು 200 ಹೆರಿಗೆ ಆಗುತ್ತವೆ. ಸ್ಥಳಿಯರಿಗೆ ಉತ್ತಮ ವೈದ್ಯಕಿಯ ಸೇವೆ ದೊರೆಯುತ್ತಿರುವುದು ಸಂತಸವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆಗೆ ಎಲ್ಲ ಇಲಾಖೆ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಪುನೀತ್​ ರಾಜಕುಮಾರ ಹೃದಯ ಜ್ಯೋತಿ, ಟೆಲಿ ಐಸಿಯು ಹಾಗೂ ಗೃಹ ಆರೋಗ್ಯ ಯೋಜನೆ ಸಹ ಜಾರಿಯಲ್ಲಿದೆ. ಸ್ಥಳಿಯ ಶಾಸಕರ ಬೇಡಿಕೆಯಂತೆ ಆಸ್ಪತ್ರೆಗೆ ಕಂಪೌಂಡ್​ ನಿರ್ಮಿಸಲು 2 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಕಳೆದ 7 ವರ್ಷಗಳ ಹಿಂದೆ 110 ಒಪಿಡಿ ಮಾತ್ರ ನೋಂದಣಿಯಾಗುತ್ತಿದ್ದವು. ಈಗ 800ಕ್ಕೂ ಅಧಿಕ ಒಪಿಡಿ ನೋಂದಣಿಯಾಗುತ್ತಿವೆ. ಆಸ್ಪತ್ರೆಯಲ್ಲಿ ಉತ್ತಮ ವೈದ್ಯಕಿಯ ಸೇವೆ, ಸಿಬ್ಬಂದಿ ಜತೆಗೆ ಅಗತ್ಯ ಉಪಕರಣ ಒಳಗೊಂಡಿದೆ ಎಂದು ತಿಳಿಸಿದರು.
ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ, ಗಣಪತಿ ಭಟ್ಟರು, ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಕೆಎಸ್​ಆರ್​ಟಿಸಿ ನಿಗಮದ ಉಪಾಧ್ಯ ಸುನೀಲ ಹನುಮಣ್ಣವರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯ ವಿನಯ ನಾವಲಗಟ್ಟಿ, ಡಿಎಚ್​ಒ ಈಶ್ವರ ಗಡಾದ, ತಹಸೀಲ್ದಾರ್​ ಹನುಮಂತ ಶಿರಹಟ್ಟಿ, ಟಿಎಚ್​ಒ ಸಂಜಯ ಸಿದ್ದಣ್ಣವರ, ಡಾ.ರವಿಕುಮಾರ ಜಕನೂರ, ಡಾ.ಬಿ.ಎಸ್​.ಮಾಹಾಂತಶೆಟ್ಟಿ, ಮಲ್ಲಪ್ಪ ಮುರಗೋಡ, ರಾಜು ಜನ್ಮಟ್ಟಿ, ಅರ್ಜುನ ಕಲಕುಟಕರ, ಸಿದ್ದಪ್ಪ ಶೀಗಿಹಳ್ಳಿ, ಡಾ.ಮಹಾಂತೇಶ ಕಳ್ಳಿಬಡ್ಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net