ಯಶೋಧ ಆಸ್ಪತ್ರೆಯಲ್ಲಿ ಜಾಗೃತಿ ಕಾರ್ಯಕ್ರಮ

ಡಾ.ವಿನಯಕುಮಾರ್
ಡಾ.ವಿನಯಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ರೋಬೋಟಿಕ್​ ಜಾಯಿಂಟ್​ ರಿಪ್ಲೇಸ್ಮೆಂಟ್​ ಶಸಚಿಕಿತ್ಸೆ
ಕಲಬುರಗಿ: ಸಿಕಂದರಾಬಾದ್​ನ ಯಶೋದ ಆಸ್ಪತ್ರೆಯು ಕಲಬುರಗಿಯಲ್ಲಿ ಮೊಣಕಾಲು ನೋವು, ಕ್ರೀಡಾ ಗಾಯ ಹಾಗೂ ರೋಬೋಟಿಕ್​ ಜಾಯಿಂಟ್​ ರಿಪ್ಲೇಸ್ಮೆಂಟ್​ ಶಸಚಿಕಿತ್ಸೆ ಮತ್ತು ಆತ್ರೋರ್ಸ್ಕೋಪಿಕ್​ ಕ್ರೀಡಾ ಗಾಯ ಚಿಕಿತ್ಸೆಯಲ್ಲಿನ ಅತ್ಯಾಧುನಿಕ ತಂತ್ರಾನ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶುಕ್ರವಾರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಯಶೋದ ಆಸ್ಪತ್ರೆಯ ಹಿರಿಯ ಅಸ್ಥಿರೋಗ ತ ಡಾ.ವಿನಯಕುಮಾರ್​, ಕೇವಲ ಇಂಜೆನ್​ಗಳ ಮೂಲಕ ಮೊಣಕಾಲು ನೋವು ಶಾಶ್ವತವಾಗಿ ಗುಣಪಡಿಸಬಹುದು ಎಂಬುದು ತಪ್ಪು ಕಲ್ಪನೆ. ಸುಳ್ಳು ಜಾಹೀರಾತುಗಳು ಹಾಗೂ ವೈಾನಿಕ ಆಧಾರವಿಲ್ಲದ ಚಿಕಿತ್ಸೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಸೂಕ್ತ ರೋಗರ್ನಿಣಯ ಮತ್ತು ಚಿಕಿತ್ಸೆಗೆ ತ ಅಸ್ಥಿರೋಗ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರಲ್ಲಿ ಮೊಣಕಾಲು ಸಮಸ್ಯೆ, ಸಂಧಿವಾತ, ಲಿಗಮೆಂಟ್​ ಗಾಯ, ಮೆನಿಸ್ಕಸ್​ ಹರಿತ, ಭುಜದ ಗಾಯದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಿಕಂದರಾಬಾದ್​ನ ಯಶೋದ ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೋಬೋಟಿಕ್​ ಸಹಾಯದಿಂದ ಜಂಟಿ ಬದಲಿ ಶಸಚಿಕಿತ್ಸೆ ಹಾಗೂ ಕ್ರೀಡಾ ಗಾಯಗಳಿಗೆ ಆತ್ರೋರ್ಸ್ಕೋಪಿಕ್​ (ಕೀಹೋಲ್​) ಚಿಕಿತ್ಸೆ ಯಶಸ್ವಿಯಾಗಿ ನೀಡಲಾಗುತ್ತಿದೆ ಎಂದು ಹೇಳಿದರು.
ರೋಬೋಟಿಕ್​ ತಂತ್ರಾನದ ನೆರವಿನಿಂದ ಶಸಚಿಕಿತ್ಸೆಯನ್ನು ಅತ್ಯಂತ ನಿಖರವಾಗಿ ನಡೆಸಲು ಸಾಧ್ಯವಾಗುತ್ತದೆ. ಇದರಿಂದ ಸಣ್ಣ ಪ್ರಮಾಣದ ಕತ್ತರಿಕೆ, ಕಡಿಮೆ ರಕ್ತಸ್ರಾವ, ಶಸಚಿಕಿತ್ಸೆಯ ನಂತರದ ನೋವು ಕಡಿಮೆ ಹಾಗೂ ವೇಗವಾದ ಚೇತರಿಕೆ ಸಾಧ್ಯವಾಗುತ್ತದೆ. ಬಹುತೇಕ ರೋಗಿಗಳು ಶಸಚಿಕಿತ್ಸೆಯ ನಂತರ ಎರಡು ದಿನಗಳಲ್ಲಿಯೇ ಎದ್ದು ನಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಗೀತಾ ಎಂಬುವರು ಅನಿಸಿಕೆ ಹಂಚಿಕೊಂಡು, ಒಂದು ತಿಂಗಳ ಹಿಂದೆ ಭುಜದ ಆತ್ರೋರ್ಸ್ಕೋಪಿಕ್​ ಶಸಚಿಕಿತ್ಸೆಗೆ ಒಳಗಾಗಿದ್ದೆ. ಕೆಲವೇ ವಾರಗಳಲ್ಲಿ ಗಮನಾರ್ಹ ಪರಿಹಾರ ದೊರೆತಿದೆ ಎಂದು ಹೇಳಿದರು.
ಮೊಣಕಾಲು ನೋವು, ಊತ ಅಥವಾ ಕ್ರೀಡಾ ಗಾಯ ಕಡೆಗಣಿಸದೆ ಸಮಯಕ್ಕೆ ಸರಿಯಾಗಿ ಅಸ್ಥಿರೋಗ ತರನ್ನು ಸಂಪರ್ಕಿಸುವಂತೆ ವೈದ್ಯರು ಸಲಹೆ ನೀಡಿದರು. ಆಸ್ಪತ್ರೆಯ ಆಡಳಿತ ಪ್ರತಿನಿಧಿ ಕೇಶವ್​, ಸತೀಶ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net