ಬಾಲಕಾರ್ಮಿಕ ಪದ್ಧತಿ ತಡೆಗೆ ಜಾಗೃತಿ ಅಗತ್ಯ

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ನಿಮಿತ್ತ ಔರಾದ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್​ನ್ಯಾಯಾಧೀಶ ಹಾಜಿ ಹುಸೇನ್​ ಸಾಬ್​ ಯಾದವಾಡ ಚಾಲನೆ ನೀಡಿದರು. ಕಾರ್ಮಿಕ ನಿರೀ ರಾಹುಲ , ತಹಸೀಲ್ದಾರ್​ ಮಹೇಶ ಪಾಟೀಲ, ಸಹಾಯಕ ಸರಕಾರಿ ಅಭಿಯೋಜಕ ಶಿವರಾಜ ಶೆಟಕಾರ , ಬಾಲಾಜಿ ಕಂಬಾರ, ರವಿಕಾಂತ ನೌಬಾದೆ, ಬಾಲಾಜಿ ಉಪಾಸೆ, ರುನಾಥ, ಸುನೀಲ ವಾಮಾರೆ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ ಹಾಜಿ ಹುಸೇನ್​ ಸಾಬ್​ ಅನಿಸಿಕೆ
  • ಔರಾದ್​ನಲ್ಲಿ ಜಾಥಾಕ್ಕೆ ಚಾಲನೆ
ಔರಾದ್​: ಬಾಲಕಾರ್ಮಿಕ ಪದ್ಥತಿ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು, ಪಾಲಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹಿರಿಯ ಸಿವಿಲ್​ನ್ಯಾಯಾಧೀಶ ಹಾಜಿ ಹುಸೇನ್​ ಸಾಬ್​ ಯಾದವಾಡ ಹೇಳಿದರು.
ಪಟ್ಟಣದಲ್ಲಿ ಕಾರ್ಮಿಕ ಇಲಾಖೆ , ತಾಲೂಕ ಕಾನೂನು ಸೇವಾ ಸಮಿತಿ, ಕಾನೂನು ತಾಲೂಕು ನ್ಯಾಯವಾದಿಗಳ ಸಂಘದ ಸಹಯೋಗದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾಲಕಾರ್ಮಿಕ ಪದ್ಧತಿಯಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಉಜ್ವಲ ಭವಿಷ್ಯಕ್ಕಾಗಿ ಶಾಲೆಗೆ ಕಳುಹಿಸಬೇಕು ಮಕ್ಕಳನ್ನು ದುಡಿಮೆಗೆ ಹಚ್ಚಿದರೆ ಪಾಲಕರು ಹಾಗೂ ಮಾಲೀಕರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. 14 ವರ್ಷದೊಳಗಿನ ಯಾವುದೇ ಮಗುವನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಮತ್ತು 14-18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕೆಲಸದಲ್ಲಿ ತೊಡಗಿಸುವುದು ಶಿಕ್ಷಾರ್ಹ ಅಪರಾಧ ಎಂದು ಎಚ್ಚರಿಸಿದರು.
ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಾಲಾಜಿ ಕಂಬಾರ, ಕಾರ್ಮಿಕ ನಿರೀಕ ರಾಹುಲ ಮಾತನಾಡಿದರು.
ತಹಸೀಲ್ದಾರ್​ ಮಹೇಶ ಪಾಟೀಲ, ಸಹಾಯಕ ಸರಕಾರಿ ಅಭಿಯೋಜಕ ಶಿವರಾಜ ಶೆಟಕಾರ , ಬಾಲಾಜಿ ಕಂಬಾರ, ರವಿಕಾಂತ ನೌಬಾದೆ, ಬಾಲಾಜಿ ಉಪಾಸೆ, ರುನಾಥ, ಸುನೀಲ ವಾಮಾರೆ ಇದ್ದರು. ನ್ಯಾಯಾಲಯ ಆವರಣದಿಂದ ಆರಂಭವಾದ ಜಾಗೃತಿ ಜಾಥಾ ಎಪಿಎಂಸಿ ಕ್ರಾಸ್​ವರೆಗೆ ಕಾಲುನಡೆಗೆಯೊಂದಿಗೆ ಜರುಗಿತು. ಹಲವಾರು ಶಾಲಾ ಶಿಕರು, ಮಕ್ಕಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net