ಮೂಢನಂಬಿಕೆ ತೊಲಗಿಸಲು ಜಾಗೃತಿ ಅಗತ್ಯ

ಕೆಂಭಾವಿ ಪ್ರವಾಸಿ ಮಂದಿರದಲ್ಲಿ ಭಾನುವಾರ ಗ್ರಾಮ ಸಂಚಾಲಕರ ಒಂದು ದಿನದ ವಿಚಾರ ಸಂಕಿರಣ ಹಾಗೂ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಸಭೆ ನಡೆಯಿತು. ವಿಠ್ಠಲ್​ ಎಸ್​.ಬಿ., ಅಶೋಕ ಹೊಸ್ಮನಿ, ವಿಜಯ ಇತರರಿದ್ದರು.
ಕೆಂಭಾವಿ ಪ್ರವಾಸಿ ಮಂದಿರದಲ್ಲಿ ಭಾನುವಾರ ಗ್ರಾಮ ಸಂಚಾಲಕರ ಒಂದು ದಿನದ ವಿಚಾರ ಸಂಕಿರಣ ಹಾಗೂ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಸಭೆ ನಡೆಯಿತು. ವಿಠ್ಠಲ್​ ಎಸ್​.ಬಿ., ಅಶೋಕ ಹೊಸ್ಮನಿ, ವಿಜಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೇದಿಕೆ ತಾಲೂಕು ಸಂಚಾಲಕ ವಿಠ್ಠಲ್​ ಅಭಿಮತ
  • ಕೆಂಭಾವಿಯಲ್ಲಿ ವಿಚಾರ ಸಂಕಿರಣ
ಕೆಂಭಾವಿ: ಸಮಾಜದಲ್ಲಿ ಇನ್ನೂ ತಳವೂರಿದ್ದ ಮೂಢನಂಬಿಕೆ ಮತ್ತು ಅಂಧ ಶ್ರೆದ್ಧಗಳು ಹೋಗಲಾಡಿಸಲು ಗ್ರಾಮ ಮಟ್ಟದಿಂದ ಜಾಗೃತಿ ಮೂಡಿಸುವುದು ಬಹಳ ಅಗತ್ಯವಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ಸುರಪುರ ತಾಲೂಕು ಸಂಚಾಲಕ ವಿಠ್ಠಲ್​ ಎಸ್​.ಬಿ., ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ, ಸುರಪುರ ತಾಲೂಕು ಸಂಚಾಲನ ಸಮಿತಿಯಿಂದ ಭಾನುವಾರ ಹಮ್ಮಿಕೊಂಡ ಗ್ರಾಮ ಸಂಚಾಲಕರ ಒಂದು ದಿನದ ವಿಚಾರ ಸಂಕಿರಣ ಹಾಗೂ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಮೂಢನಂಬಿಕೆ, ಅಂಧ ಶ್ರದ್ಧೆ ಮತ್ತು ಕಪಟ ಆಚರಣೆ ಜನರ ಬದುಕಿನ ಮೇಲೆ ಇನ್ನೂ ದುಷ್ಪರಿಣಾಮ ಬೀರುತ್ತಿವೆ. ಇವುಗಳನ್ನು ತೊಲಗಿಸಲು ಗ್ರಾಮ ಮಟ್ಟದಲ್ಲೇ ನಿರಂತರ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ಮಾನವೀಯ ಮೌಲ್ಯ, ವೈಜ್ಞಾನಿಕ ಮನೋಭಾವ ಹಾಗೂ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಜವಾಬ್ದಾರಿ ಗ್ರಾಮ ಸಂಚಾಲಕರ ಮೇಲಿದೆ ಎಂದರು.
ಯುವಜನತೆ ವೈಜ್ಞಾನಿಕ ಚಿಂತನೆ ಬೆಳೆಸಿಕೊಂಡು ಮೂಢನಂಬಿಕೆಗಳಿಂದ ದೂರವಿರಬೇಕು. ಸಮಾಜದಲ್ಲಿ ಸಹೋದರತ್ವ, ಸಮಾನತೆ ಮತ್ತು ಮಾನವೀಯತೆ ಬೆಳೆಯಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಜಿಲ್ಲಾ ಸಂಚಾಲಕ ಅಶೋಕ ಹೊಸಮನಿ ಮಾತನಾಡಿ, ಮೂಢನಂಬಿಕೆಗಳ ನಿಮೂರ್ಲನೆಗಾಗಿ ಸಂಟನೆಯು ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಗ್ರಾಮಮಟ್ಟದ ಕಾರ್ಯಕರ್ತರು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಹುಣಸಗಿ ತಾಲೂಕು ಸಂಚಾಲಕ ನಿಂಗಣ್ಣ ಹೊಸಮನಿ ಸೇರಿ ತಾಲೂಕಿನ ವಿವಿಧ ಗ್ರಾಮಗಳ ಸಂಚಾಲಕರು ಭಾಗವಹಿಸಿ ಸಂಟನೆಯ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಿದರು. ವಿಜಯ ರಾಂಪುರ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net