ಕಲಬುರಗಿ: ವಿಶ್ವ ಪರಿಸರ ದಿನದ ಅಂಗವಾಗಿ ಕಲಬುರಗಿಯ ಸಾರಥಿ ಚಾರಿಟೇಬಲ್ ಸೊಸೈಟಿ ಹಾಗೂ ಎಸಿಟಿ-ಎನ್ವಿ ಇಂಟರ್ ನ್ಯಾಷನಲ್ ಶಾಲೆ ಸಹಯೋಗದಲ್ಲಿ ಸಸಿ ನೆಡುವ, ಪರಿಸರ ಜಾಗೃತಿ ಅಭಿಯಾನ ಶನಿವಾರ ನಡೆಯಿತು.
ಪರಿಸರ ಸಂರಕ್ಷಣೆ ಮತ್ತು ಹಸಿರು ಪರಿಸರ ನಿರ್ಮಾಣದ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಹಾಗೂ ಸಂಸ್ಥೆಯ ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದರು. ಶಾಲಾ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ಪರಿಸರದ ಮಹತ್ವ ಸಾರಲಾಯಿತು.
ವಿದ್ಯಾರ್ಥಿಗಳು ಸಮೀಪದ ಮನೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಬಟ್ಟೆ ಹಾಗೂ ಕಾಗದದ ಚೀಲಗಳಂತಹ ಪರಿಸರ ಸ್ನೇಹಿ ಪರ್ಯಾಯ ಬಳಸುವಂತೆ ಮನವಿ ಮಾಡಿ, ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಾರಥಿ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ರಾಮ್ ಶಾನಭೋಗ್, ಸದಸ್ಯರಾದ ಅಭಿಜಿತ್ ಪಡಶೆಟ್ಟಿ, ಜಗದೀಶ್ ಗಾಜರೆ, ಸೌಮ್ಯ ಗಾಜರೆ ಹಾಗೂ ಜಾಹ್ನವಿ ಶಾನಭೋಗ್ ಇದ್ದರು.
ಶಾಲೆಯ ಪ್ರಾಚಾರ್ಯ ಪಂಕಜ್ ದಾಸ್, ವ್ಯವಸ್ಥಾಪನಾ ಸಮಿತಿ ಸದಸ್ಯ ಸುಹಾಸ್ ಖಣಗೆ, ಡಾ.ಗಿರೀಶ್ ಗಲಗಲಿ, ಟ್ರಸ್ಟಿ ತುಷಾರ್ ದೇಶಪಾಂಡೆ ಹಾಗೂ ಸಮೀರ್ ದೇಶಪಾಂಡೆ ಭಾಗವಹಿಸಿದ್ದರು.
ಪರಿಸರ ಸಂರಕ್ಷಣೆ, ಹಸಿರು ವಾತಾವರಣ ನಿರ್ಮಾಣ ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಅಗತ್ಯ ಒತ್ತಿ ಹೇಳಿದ್ದು, ಆರೋಗ್ಯಕರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ವಿಶ್ವ ಪರಿಸರ ದಿನದ ಅಂಗವಾಗಿ ಕಲಬುರಗಿಯ ಸಾರಥಿ ಚಾರಿಟೇಬಲ್ ಸೊಸೈಟಿ ಹಾಗೂ ಎಸಿಟಿ&ಎನ್ವಿ ಇಂಟರ್ ನ್ಯಾಷನಲ್ ಶಾಲೆ ಸಹಯೋಗದಲ್ಲಿ ಸಸಿ ನೆಡುವ, ಪರಿಸರ ಜಾಗೃತಿ ಅಭಿಯಾನ ಶನಿವಾರ ನಡೆಯಿತು.