ಯಾದು ಮೇತ್ರೆ ಮಾತನಾಡಿ, ನಾವು ಎದುರಿಸುವ ಪ್ರತಿ ಸಮಸ್ಯೆಗೆ ನೇರವಾಗಿ ಮುಖ್ಯಮಂತ್ರಿ, ಸಚಿವರು, ಶಾಸಕರು, ಸಂಸದರ ವಿರುದ್ಧ ಹೋರಾಟಕ್ಕೆ ಇಳಿಯಲು ಆಗುವುದಿಲ್ಲ. ಅದಕ್ಕೆಂದ ಅಧಿಕಾರಿಗಳ ವ್ಯವಸ್ಥೆಯಿದೆ. ಮುಖ್ಯಾಧಿಕಾರಿಯ ತಪ್ಪಿನಿಂದಾಗಿ ಔರಾದ್ ಪಟ್ಟಣದಲ್ಲಿ ಕೆಲ ದಿನಗಳಿಂದ ನೀರಿನ ಸಮಸ್ಯೆಯಾಗುತ್ತಿದೆ. ಅದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಬೇಗ ಸರಿಪಡಿಸಿ ಜನತೆಗೆ ಅನುಕೂಲ ಕಲ್ಪಿಸಲು ಎಲ್ಲರೂ ಪ್ರಯತ್ನಿಸೋಣ. ಅದನ್ನು ಬಿಟ್ಟು ನೇರವಾಗಿ ಶಾಸಕರ ಹೆಸರನ್ನು ಕೆಡಿಸಲು ಯತ್ನಿಸುವುದು ಸರಿಯಲ್ಲ ಎಂದು ಖಂಡಿಸಿದ್ದಾರೆ.