ಮೇ 2ರಂದು ಕಾರ್ಗಿಲ್ ಯುದ್ಧ ಸ್ಮಾರಕದಿಂದ ಈ ಓಟ ಆರಂಭಿಸಿದ ಕಾರ್ತಿಕ್, ಒಟ್ಟು 4,200 ಕಿಮೀ ದೂರ ಕ್ರಮಿಸುವ ಗುರಿ ಹೊಂದಿದ್ದಾರೆ. ಪ್ರತಿದಿನ ಸರಾಸರಿ 70ರಿಂದ 80 ಕಿಮೀ ಓಡುತ್ತಿರುವ ಅವರು, ಕೇವಲ 55 ದಿನಗಳಲ್ಲಿ ಪ್ರಯಾಣವನ್ನು ಮುಗಿಸಿ ಹೊಸ ದಾಖಲೆ ಬರೆಯುವ ಉತ್ಸಾಹದಲ್ಲಿದ್ದಾರೆ. ಪರ್ವತ ರಸ್ತೆಗಳು, ಕಠಿಣ ಭೂಪ್ರದೇಶಗಳು ಮತ್ತು ಬದಲಾಗುವ ಹವಾಮಾನದ ನಡುವೆಯೂ ಅವರು ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.