ಗುರಿಗೆ ಅನುಸಾರ ಕಾರ್ಮಿಕರಿಗೆ ಕೆಲಸ ಕೊಡಿ

ಯಾದಗಿರಿ ತಾಲೂಕಿನ ಮುಂಡರಗಿ, ರಾಮಸಮುದ್ರ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ ಭೇಟಿ ನೀಡಿ ಪರಿಶೀಲಿಸಿದರು.
ಯಾದಗಿರಿ ತಾಲೂಕಿನ ಮುಂಡರಗಿ, ರಾಮಸಮುದ್ರ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ ಭೇಟಿ ನೀಡಿ ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಯೋಜನಾ ನಿರ್ದೇಶಕ ದೇವರಮನಿ ಸೂಚನೆ
  • ನರೇಗಾ ಕಾಮಗಾರಿ ಸ್ಥಳಗಳಿಗೆ ದಿಢೀರ್​ ಭೇಟಿ
ಯಾದಗಿರಿ: ವಲಸೆ ಹೋಗುವುದನ್ನು ತಡೆಯಲು ಏಪ್ರಿಲ್​ ತಿಂಗಳಲ್ಲಿ ಹೆಚ್ಚು ಮಾನವ ದಿನ ಸೃಜನೆ ಮಾಡಲು ಪ್ರತಿ ಗ್ರಾಪಂಗೆ ನೀಡಿದ ಗುರಿಗೆ ಅನುಸಾರ ಕೂಲಿಕಾರರಿಗೆ ಕೆಲಸ ಕೊಡಿ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ ಪಿಡಿಒಗಳಿಗೆ ತಾಕೀತು ಮಾಡಿದರು.
ತಾಲೂಕಿನ ಮುಂಡರಗಿ, ರಾಮಸಮುದ್ರ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದ ರೈತರ ಕೃಷಿ ಚಟುವಟಿ ಕಡಿಮೆಯಾಗಿ, ಕೃಷಿ ಕೂಲಿಕಾರರಿಗೆ ಕೆಲಸ ಸಿಗದೆ, ತಮ್ಮ ಕುಟುಂಬ ನಿರ್ವಹಣೆ ಮಾಡಲು ಕೂಲಿ ಕೆಲಸಕ್ಕಾಗಿ ದೂರದ ನಗರಗಳಿಗೆ ಹೋಗುತ್ತಿದ್ದಾರೆ ಹೀಗಾಗಿ ಗ್ರಾಪಂನಿಂದ ಕೂಲಿ ಕೆಲಸ ನೀಡಬೇಕು ಎಂದು ಅವರು ಸೂಚನೆ ನೀಡಿದರು.
ಕಾಮಗಾರಿ ಪ್ರಗತಿ, ಗುಣಮಟ್ಟ ಹಾಗೂ ಭೌತಿಕ ಸ್ಥಿತಿ ವೀಸಿ, ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿಗಳಲ್ಲಿ ಹಿಂದಿನ ವರ್ಷದಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿ ಅಪೂರ್ಣ ಮಾಡಿದ ಕಾಮಗಾರಿಗಳಲ್ಲಿ ಬಾಕಿ ಉಳಿದ ಕೂಲಿ ಹಣಕ್ಕೆ ಲೆಕ್ಕ ಹಾಕಿ ಕಾರ್ಮಿಕರಿಗೆ ಕೆಲಸ ನೀಡಬೇಕು.
ನರೇಗಾ ಯೋಜನೆಯಡಿ ಕೆಲಸ ಇಲ್ಲ ಎಂದು ಹೇಳಬೇಡಿ, ಕೆಲಸಕ್ಕಾಗಿ ಬೇಡಿಕೆ ಸಲ್ಲಿಸುವ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಿ. ಗ್ರಾಮೀಣ ಪ್ರದೇಶದ ದುಡಿಯುವ ಕೈಗಳಿಗೆ ಕೂಲಿ ಕೆಲಸ ಕೊಡುವುದರ ಜತೆಗೆ ನೈಸರ್ಗಿಕ ಸಂಪನ್ಮೂಲ ಸಂರಸುವ ಬಹುಕಾಲ ಬಾಳಿಕೆ ಬರುವ ಗ್ರಾಮೀಣ ಆಸ್ತಿ ಸೃಜನೆ ಮಾಡುವುದು ನರೇಗಾ ಯೋಜನೆ ಮೂಲ ಉದ್ದೇಶವಾಗಿದೆ ಎಂದರು.
ನರೇಗಾ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರ ದಿನದ ಕೂಲಿ ಹಣ ನೇರವಾಗಿ ಅವರ ಆಧಾರ್​ ಸಂಖ್ಯೆ ಲಿಂಕ್​ ಮಾಡಿದ ಬ್ಯಾಂಕ್​ ಖಾತೆಗೆ ಜಮೆಯಾಗುತ್ತದೆ. ಜಾಬ್​ ಕಾರ್ಡ್​ ಪಡೆದ ಪ್ರತಿಯೊಬ್ಬ ಫಲಾನುಭವಿಗಳು ತಪ್ಪದೇ ತಮ್ಮ ಜಾಬ್​ ಕಾರ್ಡ್​ಗೆ ಇ&ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯ ಎಂದರು.
ಈ ವೇಳೆ ಮುಂಡರಗಿ, ರಾಮಸಮುದ್ರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಜಿಪಂ ನರೇಗಾ ಯೋಜನೆ ಎಡಿಪಿಸಿ ಬನ್ನಪ್ಪ ಬೈಟಪುಲ್ಲಿ, ನರೇಗಾ ಯೋಜನೆ ಜಿಲ್ಲಾ ಐಇಸಿ ಸಂಯೋಜಕ ಪರಶುರಾಮ ಜೀನಕೇರಾ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net