ಅಧ್ಯಕ್ಷರಾಗಿ ಆಶಿಶ್​ ತುಶೆ ಅಧಿಕಾರ ಸ್ವೀಕಾರ

ಕಲಬುರಗಿಯ ರೋಟರಿ ಪಾಲ್​ ಹ್ಯಾರಿಸ್​ ಸಭಾಂಗಣದಲ್ಲಿ ರೋಟರಿ ಕ್ಲಬ್​ ಆಫ್​ ಗುಲ್ಬರ್ಗ ದಣದ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಡಾ.ಗೌತಮ ಜಹಾಗೀರದಾರ್​, ಆಶಿಶ್​ ತುಶೆ, ರವಿಶಂಕರ ಜಮದರಖಾನಿ, ಮಣಿಲಾಲ್​ ಶಾ, ಮಾಣಿಕ ಪವಾರ್​, ಡಾ.ಸುಧಾ ಹಾಲಕಾಯಿ ಇತರರಿದ್ದರು.
ಕಲಬುರಗಿಯ ರೋಟರಿ ಪಾಲ್​ ಹ್ಯಾರಿಸ್​ ಸಭಾಂಗಣದಲ್ಲಿ ರೋಟರಿ ಕ್ಲಬ್​ ಆಫ್​ ಗುಲ್ಬರ್ಗ ದಣದ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಡಾ.ಗೌತಮ ಜಹಾಗೀರದಾರ್​, ಆಶಿಶ್​ ತುಶೆ, ರವಿಶಂಕರ ಜಮದರಖಾನಿ, ಮಣಿಲಾಲ್​ ಶಾ, ಮಾಣಿಕ ಪವಾರ್​, ಡಾ.ಸುಧಾ ಹಾಲಕಾಯಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೋಟರಿ ಕ್ಲಬ್​ ಆಫ್​ ಗುಲ್ಬರ್ಗ ದಕ್ಷಿಣ ಘಟಕದ ಪದಾಧಿಕಾರಿಗಳ ಪದಗ್ರಹಣ
ಕಲಬುರಗಿ: ರೋಟರಿ ಕ್ಲಬ್​ ಆಫ್​ ಗುಲ್ಬರ್ಗ ದಕ್ಷಿಣದ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರೋಟರಿ ಪಾಲ್​ ಹ್ಯಾರಿಸ್​ ಆಡಿಟೋರಿಯಂನಲ್ಲಿ ಶನಿವಾರ ಸಂಜೆ ಸಂಭ್ರಮದಿಂದ ನಡೆಯಿತು.
ಅಧ್ಯಕ್ಷ ಆರ್​.ಟಿ.ಎನ್​. ಆಶಿಶ್​ ತುಶೆ ಹಾಗೂ ಕಾರ್ಯದರ್ಶಿಯಾಗಿ ಆರ್​.ಟಿ.ಎನ್​. ರವಿಶಂಕರ ಜಮದರಖಾನಿ ಅಧಿಕಾರ ಸ್ವೀಕರಿಸಿದರು. ನಿವೃತ್ತ ವೈದ್ಯ ಹಾಗೂ ರೋಟರಿ ಸಂಸ್ಥೆ ಹಿರಿಯ ಮುಖಂಡ ಡಾ.ಗೌತಮ್​ ಜಹಗೀರದಾರ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಆಶಿಶ್​ ತುಶೆ (ಅಧ್ಯಕ್ಷ), ದಿನೇಶ್​ ಆಣಕಲ್​ (ಅಧ್ಯಕ್ಷ ಚುನಾಯಿತ), ಪ್ರವಿಣ್​ ಕುಲಕರ್ಣಿ (ತಕ್ಷಣದ ಮಾಜಿ ಅಧ್ಯಕ್ಷ), ರವಿಶಂಕರ ಜಮದರಖಾನಿ (ಕಾರ್ಯದರ್ಶಿ), ಡಾ. ಸಂಗಮೇಶ ಹಟ್ಟಿ (ಜಂಟಿ ಕಾರ್ಯದರ್ಶಿ), ಸಿಎ ಉಮೇಶ ರಂಸರ್ಜೆ (ಖಜಾಂಚಿ), ಗಿರಿಧರ್​ ಮುಕ್ಕ (ಕ್ಲಬ್​ ಮಾರ್ಗದರ್ಶಕ), ಮಹಾದೇವ ಖೇಣಿ (ಕ್ಲಬ್​ ಸಲಹೆಗಾರ), ಶಿವಕುಮಾರ್​ ಕಲ್ಯಾಣಿ (ಕ್ಲಬ್​ ತರಬೇತುದಾರ), ಮಂಜುನಾಥ ದೇಶಮುಖ (ಸಾರ್ಜೆಂಟ್​ ಅಟ್​ ಆಮ್ಸ್​ರ್), ಸಿಎ ಮಾಣಿಕ್​ ಮಂದಕನಳ್ಳಿ (ಕ್ಲಬ್​ ಆಡಳಿತ), ಪ್ರಜೋತ್​ ಕದಮ್​ (ಸದಸ್ಯತ್ವ ಅಭಿವೃದ್ಧಿ), ಶಿವರಾಜ ಇಂಗಿನಶೆಟ್ಟಿ (ರೋಟರಿ ಫೌಂಡೇಷನ್​), ಶರಣಬಸಪ್ಪ ಚಿಂಚನಸೂರ (ಸೇವಾ ಯೋಜನೆ), ರಾಹುಲ್​ ಟೆಂಗಳಿ (ಸಾರ್ವಜನಿಕ ಚಿತ್ರಣ), ಡಾ.ಉಮಾಕಾಂತ ರಾಜಗಿರಿ (ಪಲ್ಸ್​ ಪೋಲಿಯೀ), ಮಂಜುನಾಥ ವಸದ್​ (ಯುವ ಸೇವೆ), ಮಹೇಶ್​ ಆರ್​.ಮಠ (ವೃತ್ತಿಪರ ಸೇವೆ), ಸಂತೋಷ್​ ನಂದ್ಯಾಳ (ಸಾಕ್ಷರತೆ), ಪ್ರಫುಲ್​ ನಮೋಶಿ (ಅನುದಾನ ಮತ್ತು ಯೋಜನೆ), ಗಣೇಶ್​ ನಿಗ್ಗುಡಗಿ (ಸೆವೆನ್​ ಏರಿಯಾ ಆಫ್​ ಫೋಕಸ್​), ಜಗದೀಶ ಗಾಜರೆ (ವೆಬ್​ ಮತ್ತು ಸಂವಹನ), ಸಂತೋಷ್​ ಮಾಳಿ (ಕ್ಲಬ್​ ಬುಲೆಟಿನ್​) ಅಧಿಕಾರ ವಹಿಸಿಕೊಂಡರು.
ಜಿಲ್ಲಾ ಮಾಜಿ ಗವರ್ನರ್​ಗಳಾದ ಸಿಎ ಮಣಿಲಾಲ್​ ಶಾ, ಮಾಣಿಕ್​ ಪವಾರ್​, ವಲಯ-11ರ ಸಹಾಯಕ ಗವರ್ನರ್​ ಡಾ. ಸುಧಾ ಹಾಲಕಾಯಿ ಇತರರಿದ್ದರು. ಮಾಣಿಕ್​ ಮಂದಕನಳ್ಳಿ ನಿರೂಪಣೆ ಮಾಡಿದರು. ದಿನೇಶ್​ ಅಣಕಲ್​ ಸ್ವಾಗತಿಸಿದರು. ರವಿಶಂಕರ ಜಮದರಖಾನಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net