1975ರ ಜೂ.1ರಂದು ಕಲಬುರಗಿ ಜಿಲ್ಲೆ ಶಹಾಬಾದ್ ಸಮೀಪದ ಗೋಳಾ(ಕೆ) ಗ್ರಾಮದಲ್ಲಿ ಜನಿಸಿದ ಡಾ.ರೆಹಮಾನ್ ಪಟೇಲ್, ಚಿತ್ರಕಲೆ ಕ್ಷೇತ್ರದಲ್ಲಿ ಆಸಕ್ತಿಯೊಂದಿಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿದರಿ ಕಲೆ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿ ಪಿಎಚ್.ಡಿ ಪಡೆದಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿ-ಪುರಸ್ಕಾರ ಪಡೆದಿರುವ ಅವರು, ನಾಗಪುರದ ದಣ ಮಧ್ಯ ವಲಯ ಸಾಂಸತಿಕ ಕೇಂದ್ರ ಆಯೋಜಿಸಿದ್ದ ಅಖಿಲ ಭಾರತ ಕಲಾ ಸ್ಪರ್ಧೆ ಮತ್ತು ಪ್ರದರ್ಶನ ಪ್ರಶಸ್ತಿ, ಮುಂಬೈನ ಪ್ರಫುಲ್ಲ ದಹಾನುಕರ್ ಆರ್ಟ್ ಫೌಂಡೇಷನ್ನ ಕರ್ನಾಟಕ ರಾಜ್ಯ ಫೆಲೋಶಿಪ್ ಪ್ರಶಸ್ತಿ, ಶ್ರೀಲಂಕಾದ ಕೊಲಂಬೊದಲ್ಲಿ ಶೋರಾಂಗ್ ಆರ್ಟ್ ಗ್ರೂಪ್ ನೀಡಿದ ಅಂತಾರಾಷ್ಟ್ರೀಯ ಶೋರಾಂಗ್ ಪ್ರಶಸ್ತಿ, ಹೈದರಾಬಾದ್ ಆರ್ಟ್ ಸೊಸೈಟಿಯ ಅಖಿಲ ಭಾರತ ವಾರ್ಷಿಕ ಪ್ರಶಸ್ತಿ ಹಾಗೂ 2025ರ ಕರ್ನಾಟಕ ಲಲಿತಕಲಾ ಅಕಾಡೆಮಿ ರಾಜ್ಯ ವಾರ್ಷಿಕ ಪ್ರಶಸ್ತಿ ಸೇರಿ ಹಲವು ಗೌರವಗಳು ಸಂದಿವೆ. ಅವರ ಕಲಾಕೃತಿಗಳು ದೇಶ, ವಿದೇಶಗಳಲ್ಲಿ ಪ್ರದರ್ಶನ ಕಂಡಿವೆ.