ಇಲ್ಲಿನ ವಾರ್ಡ್ 31ರ ಶಶಿಧರ ಕಾಲನಿಯಲ್ಲಿ ನಗರಸಭೆಯಿಂದ ನಗರೋತ್ಥಾನ ಹಂತ 3ರಲ್ಲಿ ಸುಮಾರು 20 ಲ ರೂ.ವೆಚ್ಚದಲ್ಲಿ ನಿರ್ಮಿಸಲಾದ ಶೌಚಗೃಹ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಜನರು ನಿರ್ಸಗದ ಕರೆಗಳನ್ನು ಪೂರೈಸಿಕೊಳ್ಳುವುದು ಅತಿ ಅಗತ್ಯವಾಗಿದೆ. ನಗರ ಪ್ರದೇಶಗಳಲ್ಲಿ ಹೊರಗಿನಿಂದ ಬರುವ ಜನರು ಇದಕ್ಕಾಗಿ ಪರದಾಡುತ್ತಾರೆ. ಇದನ್ನು ತಪ್ಪಿಸಲು ವಿವಿಧ ಆಯ್ದ ಸ್ಥಳಗಳಲ್ಲಿ ಶೌಚಗೃಹ ನಿರ್ಮಿಸಲಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು ಎಂದು ಹೇಳಿದರು. ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್ ಮಾತನಾಡಿ, ಇಲ್ಲಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ತಲಾ ಶೌಚಗೃಗಳ ವ್ಯವಸ್ಥೆ ಮಾಡಲಾಗಿದೆ. ನೀರಿನ ಅನುಕೂಲಕ್ಕಾಗಿ ಕೊಳವೆಬಾವಿ ಹಾಕಿಸಲಾಗಿದೆ. ಮೂತ್ರಕ್ಕೂ ವ್ಯವಸ್ಥೆ ಇದೆ ಎಂದರು. ಯುಡಾ ಅಧ್ಯ ಬಾಬುರಾವ ಕಾಡ್ಲೂರ್, ನಗರಸಭೆ ಸಿಬ್ಬಂದಿ ಪ್ರಶಾಂತ, ಶಂಭುಲಿಂಗ ನಾಗರಾಜ್, ಶರಣಮ್ಮ, ಮಂಜುನಾಥ, ಅರುಣ ಇತರರಿದ್ದರು.