ಈ 24 ಸಿಬ್ಬಂದಿಗೆ ಕಳೆದ ಅಕ್ಟೋಬರ್‌ನಿಂದ ಪಾವತಿಯಾಗದಿರುವ ವೇತನವನ್ನು ಪಾವತಿಸಲು ಕ್ರಮ ವಹಿಸಲಾಗಿದೆ. ಸಿಬ್ಬಂದಿಗಳ ನೇಮಕಾತಿಯಲ್ಲಿ ಪಾಲಿಸಬೇಕಾದ ನಿಯಮಗಳಲ್ಲಿ ಆಗಿದ್ದ ಲೋಪಗಳ ಹಿನ್ನೆಲೆಯಲ್ಲಿ ಕಸಾಪಗೆ ಆಡಳಿತಾಧಿಕಾರಿ ನೇಮಕ ಆದಾಗಿನಿಂದ 46 ಸಿಬ್ಬಂದಿಯ ವೇತನ ಸ್ಥಗಿತಗೊಳಿಸಲಾಗಿತ್ತು. ಬಳಿಕ ಆಡಳಿತಾಧಿಕಾರಿ ಈ ಕುರಿತು ಸರ್ಕಾರದ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿ, ಸಮನ್ವಯ ಸಾಧಿಸಿ, ಸಿಬ್ಬಂದಿಗಳ ವಿವರಗಳನ್ನು ಸಲ್ಲಿಸಿದ್ದರು. ಈ ವೇಳೆ ಪರಿಷತ್ತಿನ ಕಾರ್ಯಕಾರಿ ಸಮಿತಿ ಮತ್ತು ಆರ್ಥಿಕ ಸಮಿತಿಯ ಅನುಮೋದನೆ ಪಡೆದು ನೇಮಿಸಿಕೊಂಡಿದ್ದ 24 ಸಿಬ್ಬಂದಿಗಳಿಗೆ ಮಾತ್ರ ವೇತನ ಪಾವತಿ ಮಾಡಲು ಆರ್ಥಿಕ ಇಲಾಖೆ ಸಮ್ಮತಿಸಿದೆ.