ಮೌಢ್ಯ ವಿರೋಧಿಸಿ ಕಾಯಕ ತತ್ವ ಸಾರಿದ ಅಪ್ಪಣ್ಣ

ಗುಲ್ಬರ್ಗ ವಿವಿ ಹಡಪದ ಅಪ್ಪಣ್ಣ ಅಧ್ಯಯನ ಪೀಠದ ಬುಧವಾರ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ, ಪ್ರೊ.ರಮೇಶ ಲಂಡನಕರ್​, ಡಾ.ಎನ್​.ಜಿ.ಕಣ್ಣೂರು, ಜಯಾಂಬಿಕ, ಡಾ.ಸುರೇಶ ಜಂಗೆ ಇದ್ದರು.
ಗುಲ್ಬರ್ಗ ವಿವಿ ಹಡಪದ ಅಪ್ಪಣ್ಣ ಅಧ್ಯಯನ ಪೀಠದ ಬುಧವಾರ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ, ಪ್ರೊ.ರಮೇಶ ಲಂಡನಕರ್​, ಡಾ.ಎನ್​.ಜಿ.ಕಣ್ಣೂರು, ಜಯಾಂಬಿಕ, ಡಾ.ಸುರೇಶ ಜಂಗೆ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರೊ.ಎಚ್​.ಟಿ.ಪೋತೆ ಅನಿಸಿಕೆ
  • ಗುಲ್ಬರ್ಗ ವಿವಿಯಲ್ಲಿ ಶರಣ ಹಡಪದ ಜಯಂತಿ
ಕಲಬುರಗಿ: ಹನ್ನೆರಡನೇ ಶತಮಾನದ ವಚನ ಚಳವಳಿ ಮತ್ತು ಸಮಾನತೆ ಕ್ರಾಂತಿಯಲ್ಲಿ ಶರಣ ಹಡಪದ ಅಪ್ಪಣ್ಣ ಒಬ್ಬರು. ಮೌಢ್ಯ ವಿರೋದಿಸಿ ಕಾಯಕ ತತ್ವ ಸಾರಿದ ಹಡಪದ ಅಪ್ಪಣ್ಣನವರ ವಿಚಾರಗಳನ್ನು ಗುರುತಿಸಿದ ಬಸವಣ್ಣನವರು ಅನುಭವ ಮಂಟಪದಲ್ಲಿ ಸಮಾನ ಸ್ಥಾನ ನೀಡುವ ಮೂಲಕ ಆಪ್ತ ಸಹಾಯಕನಾಗಿ ನೇಮಕ ಮಾಡಿದ್ದರು ಎಂದು ಕಲಾ ನಿಕಾಯದ ಡೀನ್​ ಪ್ರೊ.ಎಚ್​.ಟಿ. ಪೋತೆ ಹೇಳಿದರು.
ವಿಶ್ವವಿದ್ಯಾಲಯದ ಶ್ರೀ ಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠದಲ್ಲಿ ಬುಧವಾರ ಏರ್ಪಡಿಸಿದ್ದ ಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದ ಅವರು, ಯಾವುದೇ ವೃತ್ತಿ ಕೀಳಲ್ಲ. ಶುದ್ಧ ಕಾಯಕ ಭಾವ ಮುಖ್ಯ ಎಂದು ಸಾರಿದ ಶರಣ ಹಡಪದ ಅಪ್ಪಣ್ಣನವರ ಪರಂಪರೆಯ ಉಪಾಲಿ ಎಂಬ ಬಿಕ್ಕು ಬುದ್ಧನ ಆಸ್ಥಾನ ಸೇವಕನಾಗಿದ್ದ. ಜತೆಗೆ ಬುದ್ಧನು ಕುಟುಂಬದವರಿಗಿಂತ ಉಪಾಲಿಗೆ ಮೊದಲು ಧರ್ಮ ಬೋಧನೆ ಮಾಡಿದರು. ಹಡಪದ ಸಮುದಾಯದ ಪ್ರಾಮಾಣಿಕ ಸೇವೆ ಮತ್ತು ಕಾಯಕ ತತ್ವ ಇಂದಿನ ಸಮಾಜ ಅರಿತುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ.ಶಶಿಕಾಂತ ಎಸ್​.ಉಡಿಕೇರಿ ಮಾತನಾಡಿ, ವಿದ್ಯಾರ್ಥಿ ಜೀವನ ಮತ್ತು ಸಾಧನೆಗೆ ಶರಣ ಹಡಪದ ಅಪ್ಪಣ್ಣ ಸಂದೇಶಗಳು ಮಾರ್ಗ ತೋರಿಸುತ್ತವೆ ಎಂದು ಹೇಳಿದರು.
ಪೀಠದ ನಿರ್ದೇಶಕ ಡಾ.ಸುರೇಶ ಜಂಗೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಶರಣ ಹಡಪದ ಅಪ್ಪಣ್ಣನವರ ವಚನಗಳ ಕುರಿತು ಈಗಾಗಲೇ ಮೂರು ಪುಸ್ತಕ ಪ್ರಕಟಿಸಲಾಗಿದೆ. ಇದರೊಂದಿಗೆ ವಚನಗಳನ್ನು ಕಲಾವಿದರಿಂದ ಹಾಡಿಸುವ ಮೂಲಕ ಧ್ವನಿಸುರುಳಿ ಹೊರತರಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕುಲಸಚಿವ ಪೊ.ರಮೇಶ ಲಂಡನಕರ್​, ಮೌಲ್ಯಮಾಪನ ಕುಲಸಚಿವ ಡಾ.ಎನ್​.ಜಿ. ಕಣ್ಣೂರು, ವಿತ್ತಾಧಿಕಾರಿ ಜಯಾಂಬಿಕ, ಡಾ.ಸೂರ್ಯಕಾಂತ ಸುಜ್ಯಾತ, ಮಲ್ಲಿಕಾರ್ಜುನ ಹೊಸಮನಿ, ಜಗದೀಶ, ದಿಗಂಬರ್​ ಫಡ್ನಿಸ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net