ಬೆಂ.ವಿವಿಯಲ್ಲಿ ರ‍್ಯಾಗಿಂಗ್ ವಿರೋಧಿ ಸಮಿತಿ ರಚನೆ

ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ
Published on

ಪ್ರಮುಖ ಮುಖ್ಯಾಂಶಗಳು

  • ರ‍್ಯಾಗಿಂಗ್ ಮುಕ್ತ ವಾತಾವರಣ ಕಲ್ಪಿಸುವುದು, ವಿದ್ಯಾರ್ಥಿನಿಯರು ನಿರ್ಭೀತಿಯಿಂದ ಕಾಲೇಜಿಗೆ ಹಾಜರಾಗುವಂತೆ ಮಾಡುವುದು
  • ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಡೀನ್ ಪ್ರೊ. ಸತೀಶ್ ಗೌಡ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಬೆಂಗಳೂರು: ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ನಿಯಮಾವಳಿಗಳಂತೆ ಬೆಂಗಳೂರು ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯಲ್ಲಿ ನಡೆಯುವ ರ‍್ಯಾಗಿಂಗ್ ಗಳನ್ನು ತಡೆಗಟ್ಟುವುದಕ್ಕಾಗಿ ಮತ್ತು ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಲು ರ‍್ಯಾಗಿಂಗ್ ವಿರೋಧಿ ಸಮಿತಿ’ಯನ್ನು ರಚಿಸಿದೆ.
ಈ ಸಮಿತಿಯು ವಿಶ್ವವಿದ್ಯಾಲಯ ಹಂತದಲ್ಲಿ ಕಾರ್ಯನಿರ್ವಹಿಸಲಿದೆ. ರ‍್ಯಾಗಿಂಗ್ ಮುಕ್ತ ವಾತಾವರಣ ಕಲ್ಪಿಸುವುದು, ವಿದ್ಯಾರ್ಥಿನಿಯರು ನಿರ್ಭೀತಿಯಿಂದ ಕಾಲೇಜಿಗೆ ಹಾಜರಾಗುವಂತೆ ಮಾಡುವುದು ಹಾಗೂ ವಿದ್ಯಾರ್ಥಿನಿಯರು ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ವೇದಿಕೆ ಕಲ್ಪಿಸುವುದಾಗಿದೆ.

ಸಮಿತಿ ರಚನೆ:

ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಡೀನ್ ಪ್ರೊ. ಸತೀಶ್ ಗೌಡ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವಿಶ್ವವಿದ್ಯಾಲಯದ ಇತರೆ 5 ವಿಭಾಗಗಳ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕರನ್ನು ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ವಿದ್ಯಾರ್ಥಿ ಪ್ರತಿನಿಧಿ, ಪೊಲೀಸ್ ಆಡಳಿತ, ಮಾಧ್ಯಮ, ಎನ್‌ಜಿಒಗಳನ್ನು ಅವಶ್ಯವಿದ್ದಲ್ಲಿ ಸಭೆಗೆ ಕರೆಯಬಹುದು ಎಂದು ತಿಳಿಸಲಾಗಿದೆ.
ವಿಶ್ವವಿದ್ಯಾಲಯದಲ್ಲಿನ ಕಲಿಕಾ ವಾತಾವರಣ ಹಾಗೂ ರ‌್ಯಾಗಿಂಗ್ ಪ್ರಕರಣಗಳು ಸಂಬಂಧಿಸಿದ್ದಲ್ಲಿ ಅಂತಹ ಘಟನೆಗಳ ಕುರಿತಂತೆ ಸಮಿತಿಯು ಯುಜಿಸಿಗೆ ವರದಿ ಮಾಡಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net