ರಾಜ್ಯದ ನಾನಾ ವರ್ಗದ ಅಸಂಘಟಿತ ನೌಕರರಿಗೆ ಇಎಸ್‌ಐ, ಪಿಎಫ್ ನೀಡಲಾಗುತ್ತದೆ. ಜತೆಗೆ ನಿಗದಿತ ವೇತನವನ್ನೂ ನೀಡಲಾಗುತ್ತಿದೆ. ಆದರೆ ಅಂಗವನಾಡಿ, ಬಿಸಿಯೂಟ, ಆಶಾಗಳು 64 ಲಕ್ಷ ಮಂದಿಯಿದ್ದೇವೆ. (ಅಂಗನವಾಡಿ 28 ಲಕ್ಷ ಮಂದಿ, 50 ವರ್ಷ ಸೇವೆ, ಬಿಸಿಯೂಟ ನೌಕರರು 26 ಲಕ್ಷ ಮಂದಿ, 30 ವರ್ಷ ಸೇವೆ ಹಾಗೂ ಆಶಾ ಕಾರ್ಯಕರ್ತೆಯರು 10 ಲಕ್ಷ ಮಂದಿ, 20 ವರ್ಷ ಸೇವೆ) ಈ ವರ್ಗದವರಿಗೆ ಯಾವುದೇ ಸೌಲಭ್ಯಗಳಿಲ್ಲಿ ಇದು ಖಂಡನೀಯ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.