ಸ್ತ್ರೀಪರ ಚಿಂತನೆಗಳಿಂದ ಸಮ ಸಮಾಜ ಸಾಧ್ಯ

ಕಲಬುರಗಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ನಿಮಿತ್ತ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಧಕಿಯರಿಗೆ ಜಗದ ಕಣ್ಣು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಸಂತೋಷಿರಾಣಿ ಪಾಟೀಲ್​ ತೆಲ್ಕೂರ, ಪ್ರಮೀಳಾ ಎಂ.ಕೆ, ಮಾಲಾ ದಣ್ಣೂರ, ಪರಮೇಶ್ವರ ಬೆಳಮಗಿ, ರವಿಕುಮಾರ ಶಹಾಪುರಕರ್​ ಇತರರಿದ್ದರು.
ಕಲಬುರಗಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ನಿಮಿತ್ತ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಧಕಿಯರಿಗೆ ಜಗದ ಕಣ್ಣು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಸಂತೋಷಿರಾಣಿ ಪಾಟೀಲ್​ ತೆಲ್ಕೂರ, ಪ್ರಮೀಳಾ ಎಂ.ಕೆ, ಮಾಲಾ ದಣ್ಣೂರ, ಪರಮೇಶ್ವರ ಬೆಳಮಗಿ, ರವಿಕುಮಾರ ಶಹಾಪುರಕರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸಂತೋಷಿರಾಣಿ ತೆಲ್ಕೂರ ಅಭಿಮತ
  • ಸಾಧಕಿಯರಿಗೆ ಜಗದ ಕಣ್ಣು ಪ್ರಶಸ್ತಿ ಪ್ರದಾನ
 ಕಲಬುರಗಿ: ಮಕ್ಕಳಿಗೆ ಶಿಕ್ಷಣ ಮೂಲಕ ಸಂಸ್ಕಾರ ನೀಡುವವಳು ಹೆಣ್ಣು. ಅವಳು ತಾಯಿ, ಮಗಳು ಹಾಗೂ ಸೊಸೆಯಾಗಿ ಸಮಾಜದ ಜವಾಬ್ದಾರಿ ನಿರ್ವಹಿಸಿರುತ್ತಾಳೆ. ಸೊಸೆಯನ್ನು ಮಗಳಂತೆ ಹಾಗೂ ಅತ್ತೆಯನ್ನು ತಾಯಿಯಂತೆ ಕಾಣಬೇಕು. ನಿಜವಾಗಿಯೂ ಮಹಿಳೆ ಜಗದ ಕಣ್ಣು. ಆದರೆ ಕಣ್ತೆರೆಸುವ ವ್ಯವಸ್ಥೆ ಬದಲಾಗಬೇಕಾಗಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಾೆ ಸಂತೋಷಿರಾಣಿ ಪಾಟೀಲ್​ ತೆಲ್ಕೂರ ಹೇಳಿದರು. 
ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾ ಮತ್ತು ದಣ ವಲಯದ ಸಹಯೋಗದಡಿ ಅಂತಾರಾಷ್ಟ್ರೀಯ ಮಹಿಳಾ ದಿನ ನಿಮಿತ್ತ ಮಹಿಳೆ ನಿನ್ನಿಂದಲೇ ಈ ಇಳೆ ಎಂಬ ೂಷವಾಕ್ಯದೊಂದಿಗೆ ಶನಿವಾರ ಏರ್ಪಡಿಸಿದ್ದ ಜಿಲ್ಲೆಯ ವಿವಿಧ ೇತ್ರದ ಸಾಧಕಿಯರಿಗೆ ಜಗದ ಕಣ್ಣು ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಶಸ್ತಿ ಪ್ರದಾನ ಮಾಡಿದ ಮಹಾನಗರ ಪಾಲಿಕೆ ಉಪ ಆಯುಕ್ತೆ ಪ್ರಮೀಳಾ ಎಂ.ಕೆ. ಮಾತನಾಡಿ, ಪ್ರತಿ ೇತ್ರದಲ್ಲಿ ಪ್ರಗತಿ ಹೊಂದುತ್ತಿರುವ ಮಹಿಳೆಯರಿಂದ ಸಮ ಸಮಾಜ ಕಟ್ಟಲು ಸಾಧ್ಯ. ಇಂದು ಹೊಸ ಸಂವೇದನಾಶೀಲ ಬದುಕು ಕಟ್ಟಿಕೊಂಡು ಸಮರ್ಥವಾಗಿ ನಿಭಾಯಿಸಬಲ್ಲಳು. ಪುರುಷರಷ್ಟೇ ಸಮಾನಳಾಗಿ ಮೇಲುಗೈ ಸಾಧಿಸುತ್ತಿದ್ದಾಳೆ. ಆದರೂ ಅವಳಿಗೆ ಅಭದ್ರತೆ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಲೇಖಕಿ ಡಾ.ಶಿವಲೀಲಾ ಚಟ್ನಳ್ಳಿ, ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸತೆ ಅನ್ನಪೂರ್ಣ ಸಂಗೋಳಗಿ, ಸಾಮಾಜಿಕ ಚಿಂತಕಿ ಮಾಲಾ ದಣ್ಣೂರ, ವಾಪಿ ಕನ್ನಡ ಸಂದ ಕಾರ್ಯದರ್ಶಿ ಪರಮೇಶ್ವರ ಬೆಳಮಗಿ, ಕಸಾಪ ದಣ ವಲಯ ಅಧ್ಯಕ್ಷ ರವಿಕುಮಾರ ಶಹಾಪುರಕರ್​, ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ, ಧರ್ಮರಾಜ ಜವಳಿ, ಮಲ್ಲಿನಾಥ ಸಂಗಶೆಟ್ಟಿ, ಮಂಜುನಾಥ ಕಂಬಾಳಿಮಠ, ದಿನೇಶ ಮದಕರಿ, ರಾಜೇಂದ್ರ ಮಾಡಬೂಳ, ಹಣಮಂತರಾವ ಪೆಂಚನಪಳ್ಳಿ, ವೆಂಕುಬಾಯಿ ರಜಪೂತ, ಮಾಣಿಕಮ್ಮಾ ಜಮಾದಾರ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು. ಮಹಿಳಾ ೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯೆ ಶಶಿಕಲಾ ಟೆಂಗಳಿ, ಮಾಜಿ ಮೇಯರ್​ ಮಲ್ಲಮ್ಮ ವಳಕೇರಿ, ಶೀಲಾವತಿ ಭೀಮರಾವ ಟಿ.ಟಿ., ಆದರ್ಶ ಶಿಕ್ಷಕಿ ಆರತಿ ಬಳಗಾರ, ಚಿಂಚೋಳಿ ಪುರಸಭೆ ಮಾಜಿ ಅಧ್ಯೆ ಜಗದೇವಿ ಗಡಂತಿ, ಮನೋಶಾಸೆ  ಡಾ.ರೇಣುಕಾ ಬಗಾಲೆ, ಜಿಪಂ ಮಾಜಿ ಸದಸ್ಯೆ ಸುನಂದಾ ರವಿರಾಜ ಕೊರವಿ, ಸಾಂಸತಿಕ ಸಂಟಕಿ ಶ್ವೇತಾ ಪಾಟೀಲ್​ ಅವರಿಗೆ ಜಗದ ಕಣ್ಣು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕವಿ ಕಂಡ ಯುಗಾದಿ ವಿಶೇಷ ಕವಿಗೋಷ್ಠಿ

ಕವಿ ಕಂಡ ಯುಗಾದಿ ವಿಶೇಷ ಕಿವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕಥೆಗಾರ ಸಿ.ಎಸ್​. ಆನಂದ ಮಾತನಾಡಿ, ಕವಿ, ಸಾಹಿತಿಗಳು ಸುಮ್ಮನೆ ಕಾವ್ಯ ರಚಿಸದೆ ಸಾಮಾಜಿಕ ಜವಾಬ್ದಾರಿಯೊಂದಿಗೆ ಕಾಲದ ದನಿಯಾಗಬೇಕಾಗಿದೆ. ಕವಿತೆ ರಚಿಸುವುದು ಕೇವಲ ಕವಿ ಭಾವನೆಗಳ ಅಭಿವ್ಯಕ್ತಿಯಲ್ಲ. ಅದೊಂದು ಕ್ಲಿಷ್ಟಕರವಾದ ಸೃಜನಾತ್ಮಕ ಪ್ರಕ್ರಿಯೆ. ಕವಿ ಸಮಾಜದ ಒಂದು ಭಾಗವಾಗಿದ್ದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು  ಸಂರಸುವ ಹೊಣೆಗಾರಿಕೆ ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು. ಕವಿಗಳಾದ ಪ್ರಭು ನಿಷ್ಠಿ ನಿಡಗುಂದಾ, ಶಕುಂತಲಾ ಪಾಟೀಲ್​ ಜಾವಳಿ, ಜಯಶ್ರೀ ಜಮಾದಾರ, ಅಶ್ವಿನಿ ಎಂ.ಪಾಟೀಲ್​, ವಿದ್ಯಾಧರ ಕಾಂಬಳೆ, ಶರಣು ಅತನೂರ, ಭೀಮರಾಯ ಹೇಮನೂರ, ಜ್ಯೋತಿ ಪಾಟೀಲ್​, ಶ್ರೀದೇವಿ ಪೊಲೀಸ್​ ಪಾಟೀಲ್​, ಕವಿತಾ ಮೋರಾ ಅವರು ವರ್ತಮಾನಕ್ಕೆ ಸ್ಪಂದಿಸುವ ಕವಿತೆ ವಾಚಿಸಿ ಪ್ರೇಕ್ಷಕರ ಗಮನಸೆಳೆದರು. 
"

ಮಹಿಳೆ ತ್ಯಾಗ ಜೀವಿ. ಯಾವ ಕುಟುಂಬದಲ್ಲಿ ಮಹಿಳೆ ಪೂಜಿಸಲ್ಪಡುತ್ತಾಳೋ ಆ ಮನೆಯಲ್ಲಿ ದೇವರು ಸದಾ ನೆಲೆಸಿರುತ್ತಾನೆ. ಆದ್ದರಿಂದ ಮಹಿಳೆಯರನ್ನು ಗೌರವಿಸುವ ಕಾರ್ಯವಾಗಬೇಕು. ಮಹಿಳೆಯರ ಬದುಕಿಗೆ ಪ್ರೇರಣೆ ಮತ್ತು ಸ್ಫೂರ್ತಿ ನೀಡುವುದರ ಜತೆಗೆ ಸರ್ವ ಜನಾಂಗದ ಶಾಂತಿಯ ತೋಟದಂತೆ ಪರಿಷತ್​ ಕಾರ್ಯನಿರ್ವಹಿಸುತ್ತಿದೆ.

 > ವಿಜಯಕುಮಾರ ತೇಗಲತಿಪ್ಪಿ 

ಜಿಲ್ಲಾಧ್ಯಕ್ಷ, ಕಸಾಪ ಕಲಬುರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net