ವಿರೋಧಿಸಿದಷ್ಟು ಅಂಬೇಡ್ಕರ್​ ವಿಚಾರ ಬೆಳಕಿಗೆ

ಜಾವಳಿ(ಡಿ) ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಜಯಂತಿ ಬಹಿರಂಗ ಸಭೆಯಲ್ಲಿ ರಾಜ್ಯ ದಲಿತ ಸೇನೆ ಅಧ್ಯ ಹಣಮಂತ ಯಳಸಂಗಿ ಮಾತನಾಡಿದರು. ಬಿಕ್ಕುವಿಣಿ ಸುಮನ ಅಯರೋಜಿ, ಶರಣಬಸಪ್ಪ ಪಾಟೀಲ, ಆನಂದಪ್ರಭು ಪಾಟೀಲ ಇತರರಿದ್ದರು.
ಜಾವಳಿ(ಡಿ) ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಜಯಂತಿ ಬಹಿರಂಗ ಸಭೆಯಲ್ಲಿ ರಾಜ್ಯ ದಲಿತ ಸೇನೆ ಅಧ್ಯ ಹಣಮಂತ ಯಳಸಂಗಿ ಮಾತನಾಡಿದರು. ಬಿಕ್ಕುವಿಣಿ ಸುಮನ ಅಯರೋಜಿ, ಶರಣಬಸಪ್ಪ ಪಾಟೀಲ, ಆನಂದಪ್ರಭು ಪಾಟೀಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಲಿತ ಸೇನೆ ಅಧ್ಯಕ್ಷ ಹಣಮಂತ ಯಳಸಂಗಿ ಅನಿಸಿಕೆ
  • ಜಾವಳಿ(ಡಿ)ಯಲ್ಲಿ ಬಾಬಾಸಾಹೇಬ ಜಯಂತ್ಯುತ್ಸವ
ಆಳಂದ: ಡಾ.ಬಿ.ಆರ್​. ಅಂಬೇಡ್ಕರ್​ ಅವರಿಗೆ ವಿರೋಧ ಮಾಡಿದಷ್ಟು ಅವರ ವಿಚಾರಗಳು ಬೆಳಕಿಗೆ ಬರುತ್ತವೆ ಎಂದು ರಾಜ್ಯ ದಲಿತ ಸೇನೆ ಅಧ್ಯ ಹಣಮಂತ ಯಳಸಂಗಿ ಯಳಸಂಗಿ ಹೇಳಿದರು.
ಜಾವಳಿ(ಡಿ) ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಡಾ.ಬಿ.ಆರ್​. ಅಂಬೇಡ್ಕರ್​ ಅವರ 135ನೇ ಜಯಂತಿ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಾಬಾಸಾಹೇಬರ ವಿಚಾರಗಳನ್ನು ಇತಿಹಾಸದಲ್ಲಿ ದಾಖಲಿಸಲು ಸಂಘ ಪರಿವಾರದವರು ವಿರೋಧ ಮಾಡುತ್ತಿರುವಂತಿದೆ. ಅಷ್ಟೇ ಅಲ್ಲ ಕೆಲ ಮಠಾಧೀಶರೊಂದಿಗೆ ಸೇರಿ ಸಂವಿಧಾನ ಅಂಬೇಡ್ಕರ್​ ಬರೆದಿಲ್ಲ ಎಂದು ಹೇಳುತ್ತಿರುವುದು ಸಹಿಸಲಾಗದು ಎಂದು ಎಚ್ಚರಿಸಿದರು.
ಯುವ ಪೀಳಿಗೆ ಉತ್ತಮ ಶಿಕ್ಷಣ ಪಡೆದು ನ್ಯಾಯಾಧೀಶ, ಪೊಲೀಸ್​ ಅಧಿಕಾರಿ, ಜಿಲ್ಲಾಧಿಕಾರಿ, ತಹಸೀಲ್ದಾರಂಥ ಹುದ್ದೆ ಅಲಂಕರಿಸಿ ಸಮುದಾಯದ ಏಳಿಗೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಿಪಿಐ ಮಹಾದೇವಪ್ಪ ಜಿಡ್ಡಿಮನಿ ಮಾತನಾಡಿ, ಕೇವಲ ಉನ್ನತ ಹುದ್ದೆಗಳಲ್ಲಿದ್ದರೆ ಸಾಲದು, ಸಮಾಜಕ್ಕೆ ತಿರುಗಿ ನೋಡಬೇಕು. ಕಡು ಬಡತನದಲ್ಲಿರುವ ವಿದ್ಯಾರ್ಥಿಗಳು ಶಿಕ್ಷಣದ ಮುಂದೆ ಬರಲು ಪ್ರೋತ್ಸಾಹಿಸಿ ಸಹಕಾರ ನೀಡುವ ಮನೋಭಾವ ಹೊಂದಿರಬೇಕೆಂದು ಸಲಹೆ ನೀಡಿದರು.
ರಮೇಶ ಮಾಡಿಯಾಳ್ಕರ, ಡಾ.ಅನಿಲ ಟೆಂಗಳಿ, ಜಿತೇಂದ್ರ ತಳವಾರ ಮಾತನಾಡಿದರು. ಬಸವಂತರಾವ ಜಿಡ್ಡೆ ಪ್ರಾಸ್ತಾವಿಕ ಮಾತನಾಡಿದರು.
ಬಿಕ್ಕುವಿಣಿ ಸುಮನ ಅಯರೋಜಿ ಕೆರೆಅಂಬಲಗ ಸಾನ್ನಿಧ್ಯ, ಗ್ರಾಮದ ಹಿರಿಯ ಶರಣಬಸಪ್ಪ ಪಾಟೀಲ ಅಧ್ಯತೆ ವಹಿಸಿದ್ದರು. ಶ್ರೀಮಂತ ಜಿಡ್ಡೆ, ರಾಜಶೇಖರ ಬುದ್ಧಿವಂತ, ಶ್ರೀಕಾಂತ ಉಡಗಿ, ಬಸವರಾಜ ಬಾಳಿ, ಆನಂದಪ್ರಭು ಪಾಟೀಲ, ಗುರಣ್ಣ ಶಿರವಾಳ, ಶಿವಶರಣಪ್ಪ ಜಿಡ್ಡೆ, ಹವಳಪ್ಪ ಜಾನೆ, ಮಂಜುನಾಥ ಭಂಡಾರಿ, ಶಿವರುದ್ರಪ್ಪ ಜಿಡ್ಡೆ, ಸುರೇಶ ಝಳಕಿ, ಅಶೋಕ ಜಿಡ್ಡೆ, ವಸಂತ ರೇವೂರ, ಶಿವಾನಂದ ಜಾನೆ, ಸಿದ್ದರಾಮ ತಳಕೇರಿ, ದುಶ್ಯಂತ ಜಿಡ್ಡೆ, ಹನುಮಂತ ಜಿಡ್ಡೆ, ಅಮೃತ ಜಾನೆ, ಶಾಂತಕುಮಾರ ಝಳಕಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net