ಪಿಡಿಒಗಳು ಕೇಂದ್ರ ಸ್ಥಾನ ತೊರೆದರೇ ಅಮಾನತ್​

ಕುಡಿಯುವ ನೀರಿನ ಸಮಸ್ಯೆ ಕುರಿತು ಯಾದಗಿರಿ ತಾಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್​ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಶಹಾಪುರ ತಾಪಂ ಇಒ ಬಸವರಾಜ ಶರಭೈ, ಯಾದಗಿರಿ ತಾಪಂ ಮಹಾದೇವ ಬಾಬಳಗಿ, ವಡಗೇರಾ ತಾಪಂ ಇಒ ಶಶಿಧರ ಹಿರೇಮಠ ಸೇರಿದಂತೆಯೇ ಇತರರಿದ್ದರು.
ಕುಡಿಯುವ ನೀರಿನ ಸಮಸ್ಯೆ ಕುರಿತು ಯಾದಗಿರಿ ತಾಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್​ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಶಹಾಪುರ ತಾಪಂ ಇಒ ಬಸವರಾಜ ಶರಭೈ, ಯಾದಗಿರಿ ತಾಪಂ ಮಹಾದೇವ ಬಾಬಳಗಿ, ವಡಗೇರಾ ತಾಪಂ ಇಒ ಶಶಿಧರ ಹಿರೇಮಠ ಸೇರಿದಂತೆಯೇ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ತುನ್ನೂರ ಸೂಚನೆ
  • ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆಯೇ ನೋಡಿಕೊಳ್ಳಿ
ಯಾದಗಿರಿ: ತಮ್ಮ ಮತಕ್ಷೇತ್ರದ ಯಾವುದೇ ಹಳ್ಳಿಗಳಿಗೂ ಕುಡಿಯುವ ನೀರಿನ ತೊಂದರೆಯಾಗದಂತೆಯೇ ಸೂಕ್ತಕ್ರಮ ತೆಗೆದುಕೊಳ್ಳಿ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್​ ತುನ್ನೂರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ಇಲ್ಲಿನ ತಾಪಂ ಕಚೇರಿ ಸಭಾಂಗಣದಲ್ಲಿ ್ಞ ಕುಡಿಯುವ ನೀರಿನ ಕುರಿತಾದ ಸಭೆಯಲ್ಲಿ ಯಾದಗಿರಿ ವಿಧಾನಸಭಾ ಮತಕ್ಷೇತ್ರಕ್ಕೆ ಒಳಪಟ್ಟಿರುವ ಶಹಾಪುರ, ವಡಗೇರಾ ಮತ್ತು ಯಾದಗಿರಿ ತಾಲೂಕಿನ ಗ್ರಾಮ ಪಂಚಾಯಿತಿ ಪ್ರತಿ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ, ಪಿಡಿಒ ಹಾಗೂ ಪಶು ಇಲಾಖೆ ಅಧಿಕಾರಿಗಳ ಜತೆ ಸುಧೀರ್ ಚರ್ಚೆ ನಡೆಸಿದ ಶಾಸಕರು, ಏಪ್ರೀಲ್​ ಮತ್ತು ಮೇ ತಿಂಗಳಲ್ಲಿ ಅತಿಹೆಚ್ಚು ಬಿಸಿಲಿನ ತಾಪಮಾನ ಇಲ್ಲಿ ಇರುತ್ತದೆ. ಕಾರಣ ಈ ವೇಳೆಯಲ್ಲಿ ಒಂದು ಊರಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು. ಜತೆಗೆ ಜಾನುವಾರುಗಳಿಗೆ ಮೇವಿನ ಸಮಸ್ಯೆಯೂ ಉಂಟಾಗದಂತೆಯೇ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಶಾಸಕರು ಅಧಿಕಾರಿಗಳಿಗೆ ಕಡಕ್​ ಆಗಿಯೇ ಸೂಚನೆ ನೀಡಿದರು.
ಯಾದಗಿರಿ ತಾಲೂಕಿನಲ್ಲಿ ಏಳು, ಶಹಾಪುರನಲ್ಲಿ ಆರು ಮತ್ತು ವಡಗೇರಾ ತಾಲೂಕಿನಲ್ಲಿ 17 ಗ್ರಾಪಂಗಳು ಹೀಗೆ ಒಟ್ಟು 30 ಗ್ರಾಪಂಗಳಿದ್ದು, ಇಡಿ ಮತಕ್ಷೇತ್ರದಲ್ಲಿ 21 ಆರ್​ಒ ಪ್ಲಾಂಟ್​ಗಳು ದುರಸ್ತಿ ಬಂದಿವೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದನ್ನು ಮನಗಂಡ ಶಾಸಕರು, ಕೂಡಲೇ ಅವುಗಳನ್ನು ದುರಸ್ತಿ ಮಾಡಿಸುವಂತೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಖಾಸಗಿ ಬೊರವೆಲ್​ಗಳಿಂದ ನೀರು ಪಡೆಯಲು ಮಾಸಿಕ 11 ಸಾವಿರ ರೂ. ನೀಡಬೇಕೆಂದರು
ಸಭೆಯಲ್ಲಿ ಭಾಗವಹಿಸಿದ್ದ ಶಹಾಪುರ ತಾಪಂ ಇಒ ಬಸವರಾಜ ಶರಭೈ, ಯಾದಗಿರಿ ತಾಪಂ ಮಹಾದೇವ ಬಾಬಳಗಿ, ವಡಗೇರಾ ತಾಪಂ ಇಒ ಶಶಿಧರ ಹಿರೇಮಠ, ತಹಸಿಲ್ದಾರರಾದ ಸುರೇಶ ಅಂಕಲಗಿ, ಮಂಗಳಾ ಅವರುಗಳು ಕುಡಿಯುವ ನೀರಿನ ಅಗತ್ಯತೆ ಮತ್ತು ಪರಿಹಾರಕ್ಕಾಗಿ ಕೈಗೊಂಡ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಮೂವತ್ತು ಗ್ರಾಪಂಗಳ ಪಿಡಿಒಗಳು ಹಾಜರಿದ್ದರು.
ವಾರಕ್ಕೊಮ್ಮೆ ಶುಚಿಗೊಳಿಸಿ
ಯಾದಗಿರಿ ಮತಕ್ಷೇತ್ರದಲ್ಲಿರುವ ಎಲ್ಲ ನೀರಿನ ಟ್ಯಾಂಕ್​ಗಳನ್ನು ವಾರಕ್ಕೊಮ್ಮೇ ಸ್ವಚ್ಚಗೊಳಿಸಬೇಕು. ಹಳ್ಳಿಗಳಲ್ಲಿನ ರಸ್ತೆ ಬದಿಯಲ್ಲಿರುವ ಚರಂಡಿ ನಿತ್ಯ ಸ್ವಚ್ಛಗೊಳಿಸಿ, ಅಲ್ಲಿ ಬ್ಲಿಚಿಂಗ್​ ಪೌಡರ್​ ಸಿಂಪಡಿಸಿ ಸೊಳ್ಳೆಗಳು ಬರದಂತೆಯೇ ನೋಡಿಕೊಳ್ಳಬೇಕು. ಸಮಸ್ಯಾತ್ಮಕ ಹಳ್ಳಿಗಳಿಗೆ ಖಾಸಗಿ ಬೋರವೆಲ್​ಗಳ ಮೂಲಕ ನೀರು ಸರಬರಾಜು ಮಾಡಬೇಕು. ಆಗಾಗ ನೀರಿನ ಗುಣಮಟ್ಟದ ಪರೀಕ್ಷೆ ಮಾಡಿಸಬೇಕು. ಅಗತ್ಯವಿರುವ ಕಡೆ ಬೊರವೆಲ್​ ಕೊರೆಯಿಸಬೇಕು. ಇದನ್ನು ಸಂಬಂಧಪಟ್ಟ ಇಲಾಖೆ ಎಇಇಗಳು ಕೂಡಲೇ ಗಮನ ಹರಿಸಬೇಕು. ದುರಸ್ತಿಗೆ ಬಂದಿರುವ ಬೊರವೆಲ್​ಗಳು ರಿಪೇರಿ ಮಾಡಿಸಬೇಕು.
ಕೇಂದ್ರ ಸ್ಥಾನ ಬಿಟ್ಟರೇ ಅಮಾನತ್​
ಬೇಸಿಗೆ ಮುಗಿಯುವವರೆಗೂ ಎಲ್ಲ ಪಿಡಿಒಗಳು ನಿತ್ಯ ಕೇಂದ್ರ ಸ್ಥಾನದಲ್ಲಿ ಇರಬೇಕು. ಯಾರೇ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಿ ಅವರು ಹೇಳುವ ಸಮಸ್ಯೆ ಆಲಿಸಿ ಬಗೆಹರಿಸುವತ್ತ ಗಮನ ನೀಡಬೇಕೆಂದ ಶಾಸಕರು, ಇದಕ್ಕೆ ರ್ನಿಲಕ್ಷವಹಿಸಿದರೇ ಸೇವೆಯಿಂದ ಅಮಾನತ್​ಗೊಳಿಸಲಾಗುವುದೆಂದು ಶಾಸಕ ತುನ್ನೂರ ಎಚ್ಚರಿಕೆ ನೀಡಿದರು.
ಮೇವಿನ ಕೊರತೆ ಇಲ್ಲ
ಜಾನುವಾರುಗಳಿಗೆ ಮೇವಿನ ಕೊರತೆ ಬಗ್ಗೆ ಮಾಹಿತಿ ಪಡೆದ ಶಾಸಕರು, ಏಪ್ರಿಲ್​ ತಿಂಗಳಿಂದ ಜೂನವರೆಗೆ ಮೇವಿನ ಕೊರತೆ ಇಲ್ಲ ಎಂದು ಪಶು ಇಲಾಖೆ ಎಡಿ ಸಭೆಯಲ್ಲಿ ಮಾಹಿತಿ ನೀಡಿದರು. ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆಯೇ ಅಲ್ಲಲ್ಲಿ ನೀರು ಸಂಗ್ರಹಿಸುವ ತೊಟ್ಟಿಗಳನ್ನು ಇಡಬೇಕೆಂದರು.
ನಾಲ್ಕು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು
ಯಾದಗಿರಿ ತಾಲೂಕಿನ ರಾಮಸಮುದ್ರ, ವರ್ಕನಳ್ಳಿ, ಪಗಲಾಪುರ, ಮುಷ್ಟರ್​ ಮತ್ತು ಅರಕೇರಾದ ಪಂಚಶೀಲ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಬಹುದೆಂದು ಅಂದಾಜಿಸಲಾಗಿದೆ ಎಂಬ ಮಾಹಿತಿ ತಾಪಂ ಇಒ ಮಹಾದೇವ ಬಾಬಳಗಿ ಹೇಳಿದರು. ಅದರಂತಯೇ ಉಳಿದ ಕಡೆ ಎಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ ಎಂದು ಶಹಾಪುರ, ವಡಗೇರಾ ತಾಪಂ ಇಒ ಅವರು ಸಭೆಯಲ್ಲಿ ಶಾಸಕರಿಗೆ ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net