ಸಾಧನೆಗೆ ಹಳೆ ವಿದ್ಯಾರ್ಥಿಗಳ ಸಂಘ ದಿಕ್ಸೂಚಿ

ಗುಲ್ಬರ್ಗ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಸೆಮಿನಾರ್​ ಹಾಲ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಮರ್ಸ್​ ಅಲ್ಯೂಮ್ನಿ ಅಸೋಸಿಯೇಷನ್​ಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರೊ.ಸಿ.ಎಸ್​.ಬಸವರಾಜ, ಪ್ರೊ.ರಾಜನಾಳಕರ್​ ಲಕ್ಷ್ಮಮಣ, ಪ್ರೊ.ಬಿ.ವಿಜಯ, ಪ್ರೊ.ಪಾಂಡುರಂಗ ಪತ್ತಿ, ಡಾ.ಕರಿಗೊಳೇಶ್ವರ, ಡಾ.ಕಲ್ಲಿನಾಥ ಪಾಟೀಲ್​, ಪ್ರೊ.ಬಿ.ಎಂ.ಕನ್ಹಳ್ಳಿ, ಡಾ.ಚಂದ್ರಶೇಖರ ಶೀಲವಂತ ಇತರರಿದ್ದರು.
ಗುಲ್ಬರ್ಗ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಸೆಮಿನಾರ್​ ಹಾಲ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಮರ್ಸ್​ ಅಲ್ಯೂಮ್ನಿ ಅಸೋಸಿಯೇಷನ್​ಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರೊ.ಸಿ.ಎಸ್​.ಬಸವರಾಜ, ಪ್ರೊ.ರಾಜನಾಳಕರ್​ ಲಕ್ಷ್ಮಮಣ, ಪ್ರೊ.ಬಿ.ವಿಜಯ, ಪ್ರೊ.ಪಾಂಡುರಂಗ ಪತ್ತಿ, ಡಾ.ಕರಿಗೊಳೇಶ್ವರ, ಡಾ.ಕಲ್ಲಿನಾಥ ಪಾಟೀಲ್​, ಪ್ರೊ.ಬಿ.ಎಂ.ಕನ್ಹಳ್ಳಿ, ಡಾ.ಚಂದ್ರಶೇಖರ ಶೀಲವಂತ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರೊ.ಸಿ.ಎಸ್​.ಬಸವರಾಜ ಅಭಿಮತ
  • ಗುಲ್ಬರ್ಗ ವಿವಿ ಕಾಮರ್ಸ್​ ಅಲ್ಯೂಮ್ನಿ ಅಸೋಸಿಯೇಷನ್​ಗೆ ಚಾಲನೆ
ಕಲಬುರಗಿ: ಕಾಮರ್ಸ್​ ಅಲ್ಯೂಮ್ನಿ ಅಸೋಸಿಯೇಷನ್​ ವಾಣಿಜ್ಯ ವಿಭಾಗದ ಚಟುವಟಿಕೆ ಮತ್ತು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಪೂರಕವಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಾಧನೆಗೆ ದಿಕ್ಸೂಚಿಯಾಗಲಿದೆ ಎಂದು ವಾಣಿಜ್ಯಶಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ಎಸ್​.ಬಸವರಾಜ ಅಭಿಪ್ರಾಯಪಟ್ಟರು.
ಗುಲ್ಬರ್ಗ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಸೆಮಿನಾರ್​ ಹಾಲ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಮರ್ಸ್​ ಅಲ್ಯೂಮ್ನಿ ಅಸೋಸಿಯೇಷನ್​ಗೆ ಚಾಲನೆ ನೀಡಿ ಮಾತನಾಡಿದ ಅವರು, ಹಳೆಯ ವಿದ್ಯಾರ್ಥಿಗಳೊಂದಿಗೆ ಪ್ರಸ್ತುತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಒಂದೇ ವೇದಿಕೆಗೆ ತರಲು ಕಾಮರ್ಸ್​ ಅಸೋಸಿಯೇಷನ್​ನಿಂದ ಸಾಧ್ಯವಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಮುದಾಯದ ಒಗ್ಗೂಡುವಿಕೆ, ಸಹಕಾರ ಮತ್ತು ಮಾರ್ಗದರ್ಶನ ಪಡೆಯುವ ಮೂಲಕ ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಪ್ರೋತ್ಸಾಹ ಸಿಗಲಿದೆ ಎಂದರು.
ವಾಣಿಜ್ಯಶಾಸ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ.ರಾಜನಾಳ್ಕರ್​ ಲಕ್ಷ್ಮಣ್​ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಸಂದಿಂದ ಕಾಮರ್ಸ್​ ವಿದ್ಯಾರ್ಥಿಗಳಿಗೆ ವಾಣಿಜ್ಯ ಜಗತ್ತಿನ ವಾಸ್ತವತೆ, ವೃತ್ತಿಪರತೆ ಜ್ಞಾನ, ವೃತ್ತಿ ಸ್ಪರ್ಧಾತ್ಮಕತೆ, ವಿಶೇಷ ಅವಕಾಶ ಮತ್ತು ಸವಾಲುಗಳ ಬಗ್ಗೆ ಸಲಹೆ ಮತ್ತು ಮಾರ್ಗದರ್ಶನ ದೊರೆಯಲಿದೆ. ಭವಿಷ್ಯದ ಗುರಿ ಮತ್ತು ಸಾಧನೆಗೆ ಸಹಕಾರ ಮತ್ತು ಪಾಲ್ಗೊಳ್ಳುವಿಕೆಗೆ ಪ್ರೇರಣೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂದ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ವಿಜಯ ಮಾತನಾಡಿದರು. ಹಳೆವಿದ್ಯಾರ್ಥಿಗಳ ಸಂದ ಪ್ರಧಾನ ಕಾರ್ಯದರ್ಶಿ ಡಾ.ಕರಿಗೊಳೇಶ್ವರ ಪ್ರಾಸ್ತಾವಿಕ ಮಾತನಾಡಿ, ಸಂದ ಆಶಯ, ಉದ್ದೇಶ ಮತ್ತು ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಹಳೆಯ ವಿದ್ಯಾರ್ಥಿಗಳಾದ ಡಾ.ಪಾಂಡುರಂಗ ಪತ್ತಿ, ಡಾ.ಕಲ್ಲಿನಾಥ ಪಾಟೀಲ್​ ತಮ್ಮ ಶೈಕ್ಷಣಿಕ ಜೀವನದ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡರು. ವಾಣಿಜ್ಯ ವಿಭಾಗದ ನಿವೃತ್ತ ಹಿರಿಯ ಪ್ರಾಧ್ಯಾಪಕ ಪ್ರೊ.ಬಿ.ಎಂ.ಕನ್ಹಳ್ಳಿ ಮತ್ತು ಡಾ.ಬಿ.ಆರ್​.ಅಂಬೇಡ್ಕರ್​ ಕಾಲೇಜಿನ ನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ.ಚಂದ್ರಶೇಖರ್​ ಶೀಲವಂತ ಅತಿಥಿಗಳಾಗಿದ್ದರು. ವಿಭಾಗದ ಪ್ರಾಧ್ಯಾಪಕರು ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು.
ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು, ಹಳೆಯ ವಿದ್ಯಾರ್ಥಿಗಳು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ಸಂಜಯ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಸಂದ ಕೋಶಾಧಿಕಾರಿ ಡಾ.ಕೈಲಾಸಪತಿ ನಿರೂಪಿಸಿದರು. ಡಾ.ಸವಿತಾ ಪಾಟೀಲ್​ ವಂದಿಸಿದರು.

ಸಂವು ಸಮಾಜಮುಖಿ ಕಾರ್ಯಗಳೊಂದಿಗೆ ಮುನ್ನಡೆಯಬೇಕು. ವಿದ್ಯಾರ್ಥಿಪರ ಮತ್ತು ಉತ್ತಮ ಚಟುವಟಿಕೆಗಳ ಮೂಲಕ ಮಾದರಿ ಸಂಟನೆಯಾಗಲಿ. ಸಂಟಿತರಾಗಿ ವಿಭಾಗದ ಬಲವರ್ಧನೆಗೆ ಕೈಜೋಡಿಸಬೇಕು.

ಪ್ರೊ.ಬಿ.ವಿಜಯ,ಅಧ್ಯಕ್ಷ,

ವಾಣಿಜ್ಯ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net