ಶಿಕ್ಷಕರಿಗೆ ಪಾಠ ಮಾಡಲು ಅನುವು ಮಾಡಿಕೊಡಿ

ಕಲಬುರಗಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಾಧಕರಿಗೆ ಸಾರ್ಥಕ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಸಿ.ಸೋಮಶೇಖರ, ಪ್ರಫುಲ್​ ನಮೋಶಿ, ವಿಜಯಕುಮಾರ ತೇಗಲತಿಪ್ಪಿ, ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಸಿದ್ಧಲಿಂಗ ಬಾಳಿ, ಬಿ.ಎಂ.ಪಾಟೀಲ್​ ಕಲ್ಲೂರ್​, ಶರಣರಾಜ ಛಪ್ಪರಬಂದಿ ಇತರರಿದ್ದರು.
ಕಲಬುರಗಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಾಧಕರಿಗೆ ಸಾರ್ಥಕ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಸಿ.ಸೋಮಶೇಖರ, ಪ್ರಫುಲ್​ ನಮೋಶಿ, ವಿಜಯಕುಮಾರ ತೇಗಲತಿಪ್ಪಿ, ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಸಿದ್ಧಲಿಂಗ ಬಾಳಿ, ಬಿ.ಎಂ.ಪಾಟೀಲ್​ ಕಲ್ಲೂರ್​, ಶರಣರಾಜ ಛಪ್ಪರಬಂದಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎನ್​ಪಿಎಸ್​ ನಿರ್ದೇಶಕ ಪ್ರಫುಲ್​ ನಮೋಶಿ ಹೇಳಿಕೆ
  • ಕಸಾಪ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ
ಕಲಬುರಗಿ: ಶಿಕ್ಷಕರಿಗೆ ಪಾಠ ಮಾಡುವುದಕ್ಕಿಂತ ಅನ್ಯ ಕಾರ್ಯಗಳ ಭಾರ ಹೆಚ್ಚಾಗಿದೆ. ಇದನ್ನು ತಪ್ಪಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಅನುವು ಮಾಡಿಕೊಡಬೇಕು ಎಂದು ಎನ್​ಪಿಎಸ್​ ನಿರ್ದೇಶಕ ಪ್ರಫುಲ್​ ನಮೋಶಿ ಹೇಳಿದರು.
ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್​ನಿಂದ ಬುಧವಾರ ಹಮ್ಮಿಕೊಂಡಿದ್ದ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಕುರಿತ ವಿಚಾರಗೋಷ್ಠಿ ಹಾಗೂ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಈ ಸಮಾಜದ ನಿಜವಾದ ಕಣ್ಣುಗಳು. ಜ್ಞಾನದ ಜ್ಯೋತಿ ಸದಾ ಬೆಳಗಿಸುವ ಶ್ರೇಷ್ಠ ಮಾರ್ಗದರ್ಶಕರಾಗಿದ್ದಾರೆ ಎಂದು ಬಣ್ಣಿಸಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಶಿಕ್ಷಕರು ನಮ್ಮ ನಾಡಿನ ಸಾಂಸತಿಕ ಬೆಳವಣಿಗೆಯ ಪ್ರಮುಖ ಆಧಾರಸ್ತಂಭ. ಒಂದು ಸಮಾಜದ ಸಂಸ್ಕಾರ, ಸಂಸತಿ ಮತ್ತು ಕಲೆ, ಸಾಹಿತ್ಯದ ಪರಂಪರೆ ಮುಂದಿನ ಪೀಳಿಗೆಗೆ ದಾಟಿಸುವ ಅತ್ಯಂತ ಜವಾಬ್ದಾರಿಯುತ ಕಾರ್ಯ ಶಿಕ್ಷಕರು ಮಾಡುತ್ತಿದ್ದಾರೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್​ ಅಧ್ಯಕ್ಷ ಡಾ.ಸಿ.ಸೋಮಶೇಖರ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಸರ್ಕಾರಿ ನೌಕರರ ಸಂದ ಸದಸ್ಯ ಧರ್ಮರಾಜ ಜವಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ಸಂತೋಷ ಗಂಗೂ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂದ ಜಿಲ್ಲಾಧ್ಯೆ ಸೇವಂತಾ ಚವ್ಹಾಣ್​, ಜಿಲ್ಲಾ ಸರ್ಕಾರಿ ಗ್ರೇಡ್​&1 ದೈಹಿಕ ಶಿಕ್ಷಣ ಶಿಕ್ಷಕರ ಸಂದ ಅಧ್ಯಕ್ಷ ಭೋಜನಗೌಡ ಪಾಟೀಲ್​, ಪ್ರಮುಖರಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ, ಸೈಯ್ಯದ್​ ನಜಿರುದ್ದಿನ್​ ಮುತ್ತವಲ್ಲಿ, ಸಿದ್ದಲಿಂಗ ಬಾಳಿ, ಶಿವಲೀಲಾ ಕಲಗುರ್ಕಿ, ಬಿ.ಎಂ.ಪಾಟೀಲ್​ ಕಲ್ಲೂರ, ರಾಜೇಂದ್ರ ಮಾಡಬೂಳ, ರಮೇಶ ಬಡಿಗೇರ, ಗಣೇಶ ಚಿನ್ನಾಕಾರ ಇತರರಿದ್ದರು.
ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸತ ನಿಂಗಪ್ಪ ಮಂಗೊಂಡ ಹಾಗೂ ರಾಜೀವ್​ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸತ ಶಿವಾನಂದ ಪೂಜಾರಿ, ಜಯಶ್ರೀ ಜಮಾದಾರ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ
ಡಾ.ಗುರುಪ್ರಕಾಶ ಹೂಗಾರ, ಡಾ.ಬಸವರಾಜೇಶ್ವರಿ ಇಂದೂರ, ಡಾ.ಗಿರಿಜಾಬಾಯಿ ಗುಜಗೊಂಡ, ಮೀನಾ ಅವಧಾನಿ, ಶರಣು ಬಿರಾದಾರ, ಶಿವಾನಂದ ನಿರವಾಣಿ, ಭೋಜನಗೌಡ ಪಾಟೀಲ್​, ದೌಲತರಾಯ ದೇಸಾಯಿ, ವಿಜಯಕುಮಾರ ಪಾಟೀಲ್​, ಮರೆಪ್ಪ ಬಸವಪಟ್ಟಣ, ರಮೇಶಕುಮಾರ ದೇವಣಿ, ಜೆ.ಎಚ್​. ಪಾಟೀಲ್​, ಪರಮೇಶ್ವರ ಪಾಟೀಲ್​, ಶಾರದಾ ದೇಸಾಯಿ, ಪ್ರಕಾಶ ಕೋಟ್ರೆ ಈರಮ್ಮ ಸುತಾರ, ರಾಜಶೇಖರ ಸಜ್ಜಿ, ವಿಶಾಲಾ ಕಾಟಾಪುರ, ದೇವಿದಾಸ ಪವಾರ್​, ಮಹಾಂತೇಶ್ವರಿ ಕಟ್ಟಿಮನಿ, ಭೀಮಾಶಂಕರ ಮಡಿವಾಳ, ಸುನಂದಾ ಕುಲಕರ್ಣಿ, ಮೈತ್ರಾಬಾಯಿ ಪತ್ತಾರ್​, ಡಾ.ಅನ್ನಪೂರ್ಣ ಗಂಗಾಣಿ ಅವರಿಗೆ ಸಾರ್ಥಕ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
"

ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಹೀಗಾಗಿ ಸತತ ಅಧ್ಯಯನಶೀಲರಾಗಿ ಹಾಗೂ ಚಾರಿತ್ರ್ಯ ವಂತರಾಗಿ ಬದುಕಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net