ಶಿವಯೋಗಕ್ಕೆ ಎಲ್ಲಾ ದಿನಗಳು ಶ್ರೇಷ್ಠ

ಕಲಬುರಗಿ ಜಯನಗರ ಅನುಭವ ಮಂಟಪದಲ್ಲಿ ಬಸವ ಸಮಿತಿ ಭಾನುವಾರ ಆಯೋಜಿಸಿದ್ದ ಅರಿವಿನ ಮನೆ ದತ್ತಿ ಕಾರ್ಯಕ್ರಮದಲ್ಲಿ ಡಾ.ವಿಲಾಸವತಿ ಖೂಬಾ ಅವರು ಡಾ.ಜಯಶ್ರೀ ದಂಡೆಯವರಿಗೆ ಶರಣ ಸ್ಮಾರಕಗಳು ಪುಸ್ತಕ ಕಾಣಿಕೆಯಾಗಿ ನೀಡಿ ಗೌರವಿಸಿದರು.
ಕಲಬುರಗಿ ಜಯನಗರ ಅನುಭವ ಮಂಟಪದಲ್ಲಿ ಬಸವ ಸಮಿತಿ ಭಾನುವಾರ ಆಯೋಜಿಸಿದ್ದ ಅರಿವಿನ ಮನೆ ದತ್ತಿ ಕಾರ್ಯಕ್ರಮದಲ್ಲಿ ಡಾ.ವಿಲಾಸವತಿ ಖೂಬಾ ಅವರು ಡಾ.ಜಯಶ್ರೀ ದಂಡೆಯವರಿಗೆ ಶರಣ ಸ್ಮಾರಕಗಳು ಪುಸ್ತಕ ಕಾಣಿಕೆಯಾಗಿ ನೀಡಿ ಗೌರವಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ಬಸವ ಸಮಿತಿಯಲ್ಲಿ ದತ್ತಿ ಕಾರ್ಯಕ್ರಮ
ಕಲಬುರಗಿ: ಶಿವಯೋಗಕ್ಕೆ ವಾರ, ದಿನಕ್ಕಿಂತ ಲಿಂಗ ಶ್ರೇಷ್ಠ. ಲಿಂಗ ಪೂಜೆಗೆ ಎಲ್ಲಾ ವಾರ, ಎಲ್ಲ ದಿನಗಳೂ ಶ್ರೇಷ್ಠವಾಗಿವೆ ಎಂಬುದು ಶರಣರ ಅಭಿಪ್ರಾಯ ಎಂದು ವಿಶ್ರಾಂತ ಪ್ರಾಧ್ಯಾಪಕಿ ಡಾ.ಜಯಶ್ರೀ ದಂಡೆ ಹೇಳಿದರು.
ನಗರದ ಬಸವ ಸಮಿತಿ ಅನುಭವ ಮಂಟಪದ ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದಲ್ಲಿ ಲಿಂ.ಬಿ ಮಹದೇವಪ್ಪ ಸ್ಮರಣಾರ್ಥ ಭಾನುವಾರ ಜರುಗಿದ ಅರಿವಿನ ಮನೆ 888ನೇ ದತ್ತಿ ಕಾರ್ಯಕ್ರಮದಲ್ಲಿ ಅನುಭಾವ ನೀಡಿದರು.
ಒಬ್ಬ ಶರಣ ಇನ್ನೊಬ್ಬ ಶರಣನೊಂದಿಗೆ ಅನುಭವ ಹಂಚಿಕೊಂಡರೆ ಅದುವೇ ಶಿವರಾತ್ರಿ. ಲಿಂಗ ಧಾರಣೆ ಮಾಡಿದವರಿಗೆ ನಿತ್ಯವೂ ಶಿವರಾತ್ರಿ. ಶರಣ ನಿದ್ರೆಗೈದರೆ ಜಪ, ಎದ್ದು ಕುಳಿತರೆ ಅದೇ ಶಿವರಾತ್ರಿ. ಇಂತಹ ಶರಣನ ನಡೆಪಾವನ ನುಡಿ ಪಾವನವಾಗಿರುತ್ತದೆ . ಅಭ್ಯಾಸ, ಯೋಗ, ನಿಯಮದಿಂದ ಹೊರಬಂದು ಇಷ್ಟಲಿಂಗ ನಿಷ್ಠೆಯಲ್ಲಿ ದಿನವೂ ತಲ್ಲೀನವಾಗಬೇಕು ಎಂದು ಅಲ್ಲಮಪ್ರಭು ಹೇಳುತ್ತಾರೆ.
ಶಿವಯೋಗಿ ಇಷ್ಟಲಿಂಗ ಧಾರಣೆಗಿಂತ ಮುಂಚೆ ಸಿದ್ದರಾಮ ಶೈವ& ಸ್ಥಾವರಲಿಂಗ ಉಪಾಸಕರಾಗಿದ್ದರು. ಲಿಂಗಯೋಗ ಅರಿತು ಲಿಂಗಯೋಗಿಯಾದನು. ಧ್ಯಾನ&ಧಾರಣಾ&ಸಮಾಧಿ ಎಚ್ಚರವಿದ್ದಾಗಲೇ ಪಡೆಯುವಂಥವು. ಅಲ್ಲಮಪ್ರಭು ಹೇಳುವಂತೆ ಶರಣರು ಸ್ವತಂತ್ರ ಧೀರರಾಗಿದ್ದಾರೆ, ಸ್ವತಂತ್ರ ಆಲೋಚಿಕರಾಗಿದ್ದಾರೆ. ವಚನಾಮೃತ ಸುಧೆ ಸವಿಯುವ ಮೂಲಕ ನಿಜವಾದ ಶಿವಯೋಗ ಆನಂದಿಸಬೇಕು. ಶಿವಯೋಗ ರೂಢಿಯಿಂದ ಬರುವಂಥದ್ದಾಗಿದೆ ಎಂದರು.
ಬಸವಣ್ಣ ಯಾವ ವ್ಯಕ್ತಿಯನ್ನೂ ಕಡಿಮೆ ಎಂದು ಹೇಳಲಿಲ್ಲ. ಅವರು ತಮ್ಮನ್ನು ತಾವು ಪರೀೆಗೆ ಒಡ್ಡಿಕೊಂಡರು. ತಮ್ಮಂತೆ ಅನುಕರಿಸಲು ಜನರಲ್ಲಿ ಹೇಳಲಿಲ್ಲ. ಪ್ರತಿಯೊಬ್ಬರೂ ತಮ್ಮನ್ನು ತಾವು ಪರೀಸಿಕೊಂಡು ಶಿವಯೋಗ ಮಾಡಬೇಕು. ಇಷ್ಟಲಿಂಗ ಕಟ್ಟಿಕೊಂಡು ಒಳ್ಳೆಯ ಕೆಲಸ ಮಾಡಬೇಕು. ಶಿವಯೋಗವೆಂದರೆ ಕೇವಲ ತ್ರಿಕಾಲ ಪೂಜೆ ಅಲ್ಲ. ನಾವು ಯಾವ ಕಾಯಕದಲ್ಲಿ ನಿರತರಾಗಿರುತ್ತೇವೋ ಅದರಲ್ಲಿಯೇ 24 ಗಂಟೆ ದೇವರ ಆರಾಧನೆಯಲ್ಲಿ ನಿರತನಾಗಿರಬೇಕು, ಅದೇ ಶಿವಯೋಗ. ಲಿಂಗೈಕ್ಯ ಎಂದರೆ ಸಾವು ಅಲ್ಲ , ಲಿಂಗ ಧ್ಯಾನದಲ್ಲಿಯೇ ಬೇರೆ, ಭಾವವಿಲ್ಲದೆ ಬೆರೆಯುವುದೇ ಲಿಂಗೈಕ್ಯವಾಗಿದೆ ಎಂದು ಹೇಳಿದರು.
ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ.ವಿಲಾಸ್ವತಿ ಖೂಬಾ, ಡಾ.ವೀರಣ್ಣ ದಂಡೆ, ಉದ್ಯಮಿ ರಾಜೇಂದ್ರ ಖೂಬಾ, ಕಾರ್ಯದರ್ಶಿ ಡಾ.ಆನಂದ ಸಿದ್ಧಾಮಣಿ, ಡಾ.ಕೆ.ಎಸ್​.ವಾಲಿ, ಶರಣಗೌಡ ಪಾಟೀಲ್​ ಪಾಳಾ, ದತ್ತಿ ದಾಸೋಹಿ ಬಿ.ವೀರಬಸವಂತ ಇದ್ದರು. ಭಾರತಿ ಹುಲುಗೋಳ ನಿರೂಪಿಸಿದರು, ಉದ್ದಂಡಯ್ಯ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net