ಉದ್ಯಾವನ ಉದ್ಘಾಟಿಸಿ ಮಾತನಾಡಿದ ಶಾಸಕ ಉಮೇಶ ಮೇಟಿ, ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಸಂತ್ರಸ್ತರಿಗೆ ಯುನಿಟ್-೨ರಲ್ಲಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಸಂತ್ರಸ್ತರು ವಿವಿಧ ಸೆಕ್ಟರಗಳಲ್ಲಿ ಸ್ಥಳಾಂತರಗೊAಡಿದ್ದು, ಅವರಿಗೆ ಕ್ರೀಡಾ ಚಟುವಟಿಕೆ, ವಾಯು ವಿಹಾರ, ಮನೋರಂಜನೆ ಅನುಕೂಲಕ್ಕಾಗಿ ಸೆಕ್ಟರ ನಂ.೮೮ರಲ್ಲಿ ೧೦ ಎಕರೆ ವಿಶಾಲವಾದ ಪ್ರದೇಶದಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಇದೀಗ ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಲಾಗಿದೆ. ಇದೊಂದು ಮಾದರಿ ಉದ್ಯಾನವನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.