ಕಲಬುರಗಿ ಕನ್ನಡ ಭವನದಲ್ಲಿ ತ್ರಿಶಾ ಎಜುಕೇಶನ್ ಚಾರಿಟೇಬಲ್ ಮತ್ತು ವೆಲ್ಫೇರ್ ಟ್ರಸ್ಟ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಮಾತಾ ಲತಾ ದೇವಿ, ಚಂದ್ರಿಕಾ ಪರಮೇಶ್ವರ, ಪೂರ್ಣಿಮಾ ಜಾನೆ, ಸಿಂಧೂಮತಿ ಬೋಸ್ಲೆ, ಅಶ್ವಿನಿ ಚವ್ಹಾಣ್, ಸುಮಾ ಕವಲ್ದಾರ್, ಸುನಂದಾ ರಾಠೋಡ್, ಸಂಗೀತ ಚವ್ಹಾಣ, ಜೈನಾಬಾಯಿ ಇತರರಿದ್ದರು.
ಕಲಬುರಗಿ: ತ್ರಿಶಾ ಎಜುಕೇಶನ್ ಚಾರಿಟೇಬಲ್ ಮತ್ತು ವೆಲ್ಫೇರ್ ಟ್ರಸ್ಟ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೋಮವಾರ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗಾಗಿ ವಿವಿಧ ಆಟ ಹಾಗೂ ಮನರಂಜನಾ ಸ್ಪರ್ಧೆ ನಡೆಸಲಾಯಿತು. ವಿವಿಧ ೇತ್ರಗಳಲ್ಲಿ ಸಾಧನೆಗೈದ ಸಾಧಕಿಯರಿಗೆ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜತೆಗೆ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಹಿಳೆಯರಿಗೆ ಪ್ರಥಮ, ದ್ವೀತಿಯ ಮತ್ತು ತೃತೀಯ ಬಹುಮಾನ ವಿತರಿಸಲಾಯಿತು.
ಸಾನಿಧ್ಯ ವಹಿಸಿದ್ದ ಭಾಗ್ಯವಂತಿಯ ವರಪುತ್ರಿಯಾದ ಶ್ರೀಮಾತಾ ಲತಾ ದೇವಿ (ಕೆಸರಟಗಿ ಸುೇತ್ರ, ಕಲಬುರಗಿ) ಮಾತನಾಡಿ, ಹೆಣ್ಣಿಗೆ ಇರುವ ಗೌರವ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ಹೆಣ್ಣು ದೇವತೆ, ತಾಯಿ ದೇವತೆ, ಭೂಮಿ ದೇವತೆ ಎಂದು ಹೇಳಿದರು.
ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯೆ ಚಂದ್ರಿಕಾ ಪರಮೇಶ್ವರ ಉದ್ಘಾಟಿಸಿ, ಮಹಿಳೆಯರಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳು ಬಡ ಕುಟುಂಬಗಳಿಗೆ ಹೆಚ್ಚಿನ ಸಹಾಯವಾಗುತ್ತಿವೆ ಎಂದರು.
ಉದ್ಯಮಿಗಳಾದ ಅನ್ನಪೂರ್ಣ ಸಂಗೊಳಗಿ ಹಾಗೂ ಆರತಿ ರಾಠೋಡ್ ಪ್ರಶಸ್ತಿ ಪ್ರದಾನ ಮಾಡಿದರು. ಕೇಕ್ ಕಟ್ ಮಾಡುವ ಮೂಲಕ ಮಹಿಳಾ ದಿನ ಆಚರಿಸಿ ಸಂಭ್ರಮಿಸಲಾಯಿತು.
ಪೂರ್ಣಿಮಾ ಜಾನೆ ಮತ್ತು ಸಿಂಧೂಮತಿ ಬೋಸ್ಲೆ ಕಾರ್ಯಕ್ರಮದ ವ್ಯವಸ್ಥೆ ನೋಡಿಕೊಂಡರು. ಅಧ್ಯಕ್ಷತೆ ವಹಿಸಿದ್ದ ತ್ರೀಶಾ ಎಜುಕೇಶನ್ ಚಾರಿಟೇಬಲ್ ಮತ್ತು ವೆಲ್ಫೇರ್ ಟ್ರಸ್ಟ್ ಸಂಸ್ಥಾಪಕಿ ಅಶ್ವಿನಿ ಚವ್ಹಾಣ ಮಾತನಾಡಿ, ಹೆಣ್ಣು ಯಾವುದರಲ್ಲಿಯೂ ಕಡಿಮೆ ಇಲ್ಲ. ಅವಳು ತಾಳ್ಮೆ ಮತ್ತು ಸಹನೆಯ ಮೂರ್ತಿ. ಹೆಣ್ಣು ಗಂಡಸರಿಗೆ ಸಮಾನಳಾಗಿದ್ದು ಸಮಾಜದಲ್ಲಿ ಮಹತ್ತರ ಪಾತ್ರ ವಹಿಸುತ್ತಾಳೆ ಎಂದು ಹೇಳಿದರು.
ಸುಮಾ ಕವಲ್ದಾರ್, ಸುನಂದಾ ರಾಠೋಡ್, ಸಂಗೀತ ಚವ್ಹಾಣ, ಜೈನಾಬಾಯಿ, ತುಕಾರಾಮ್ ಬಿರಾದಾರ್ ಇತರರಿದ್ದರು.