ಅಗ್ರೋ ಡೀಲರ್​ಗಳಿಗೆ ಜ್ಞಾನ ನವೀಕರಣ ಅಗತ್ಯ

ಕಲಬುರಗಿ ಕೆಕೆಸಿಸಿಐ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ್​ ಪಟೇಲರನ್ನು ಸತ್ಕರಿಸಿ, ಗೌರವಿಸಲಾಯಿತು. ಚಿಣಮಗೆರೆ ಮಠದ ಪೂಜ್ಯ ಸಿದ್ದರಾಮ ಶಿವಯೋಗಿಗಳು, ಬಬಲಾದ ಮಠದ ಪೂಜ್ಯ ಗುರುಪಾದಲಿಂಗ ಮಹಾಸ್ವಾಮಿಗಳು, ಶರಣಬಸಪ್ಪ ಪಪ್ಪಾ, ಚಂದ್ರಶೇಖರ ತಳ್ಳಳ್ಳಿ, ಬಸವರಾಜ ಮಂಗಲಗಿ, ಅಂಕುಶ್​ ಶಾ ಇತರರಿದ್ದರು.
ಕಲಬುರಗಿ ಕೆಕೆಸಿಸಿಐ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ್​ ಪಟೇಲರನ್ನು ಸತ್ಕರಿಸಿ, ಗೌರವಿಸಲಾಯಿತು. ಚಿಣಮಗೆರೆ ಮಠದ ಪೂಜ್ಯ ಸಿದ್ದರಾಮ ಶಿವಯೋಗಿಗಳು, ಬಬಲಾದ ಮಠದ ಪೂಜ್ಯ ಗುರುಪಾದಲಿಂಗ ಮಹಾಸ್ವಾಮಿಗಳು, ಶರಣಬಸಪ್ಪ ಪಪ್ಪಾ, ಚಂದ್ರಶೇಖರ ತಳ್ಳಳ್ಳಿ, ಬಸವರಾಜ ಮಂಗಲಗಿ, ಅಂಕುಶ್​ ಶಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಂಟಿ ಕೃಷಿ ನಿರ್ದೇಶಕ ಸಮದ್​ ಪಟೇಲ್​ ಹೇಳಿಕೆ
  • ಕೆಕೆಸಿಸಿಐ ಸಭಾಂಗಣದಲ್ಲಿ ಕಾಯಕ ನಿಷ್ಠೆ ಸತ್ಕಾರ ಸಮಾರಂಭ
ಕಲಬುರಗಿ: ದೇಶದ ಶೇ.60ರಷ್ಟು ಜನ ಕೃಷಿ ಅವಲಂಬಿಸಿದ್ದಾರೆ. ದೇಶದ ಬೆಳವಣಿಗೆಯಲ್ಲಿ ಕೃಷಿ ಪಾತ್ರ ಪ್ರಮುಖ. ಅಗ್ರೋ ಡೀಲರ್​ಗಳು ತಮ್ಮ ಜ್ಞಾನ ನವೀಕರಿಸಿಕೊಂಡು ರೈತರಿಗೆ ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಸಮದ್​ ಪಟೇಲ್​ ಹೇಳಿದರು.
ಕಲಬುರಗಿ ಕೆಕೆಸಿಸಿಐ ಸಭಾಂಗಣದಲ್ಲಿ ಅಗ್ರೊ ಇನ್​ಪುಟ್​ ಡೀರ್ಲಸ್​ ಅಸೋಸಿಯೇಶನ್​ ಹಾಗೂ ತಾಲೂಕು ಅಗ್ರೊ ಇನ್​ಪುಟ್​ ಡೀರ್ಲಸ್​ ಸಂಗಳ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಯಕ ನಿಷ್ಠೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನನ್ನ ಸೇವಾ ಅವಧಿಯಲ್ಲಿ ರೋಟಾವೇಟರ್​ ಬಳಕೆ ಹಾಗೂ ಸಾವಯವ ಕೃಷಿ ಪರಿಚಯಿಸಲಾಗಿದೆ. ರೈತರೊಂದಿಗೆ ನೇರ ಸಂಪರ್ಕದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ನಮ್ಮ ಪ್ರದೇಶ ಬರ ಅಥವಾ ಪ್ರವಾಹಕ್ಕೆ ಹೆಸರಾಗಿದ್ದು, ಆ ಸಂದರ್ಭದಲ್ಲಿ ರೈತರೊಟ್ಟಿಗೆ ನಿಂತು ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಕಲಬುರಗಿ ರೊಟ್ಟಿ ಬ್ರಾಂಡ್​ ಮಾಡಿದ್ದು, ಇಂದು ವಿದೇಶಗಳಿಗೂ ರಫ್ತು ಆಗುತ್ತಿದೆ. ಪ್ರಧಾನಮಂತ್ರಿಗಳ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲೂ ಪ್ರಸ್ತಾಪವಾಗಿದೆ. ಡ್ರೋಣ್​ ಸೆಯಿಂಗ್​ ತಂತ್ರಜ್ಞಾನ ಪರಿಚಯಿಸಲು 14 ಡ್ರೋಣ್​ಗಳನ್ನು ಖರೀದಿಸಲಾಗಿದೆ ಎಂದು ವಿವರಿಸಿದರು.
ಸಾನ್ನಿಧ್ಯ ವಹಿಸಿದ್ದ ಚಿಣಮಗೆರೆ ಮಠದ ಪೂಜ್ಯ ಸಿದ್ದರಾಮ ಶಿವಯೋಗಿಗಳು ಮಾತನಾಡಿ, ಕೃಷಿ ಆರೋಗ್ಯಕರ ಜೀವನಕ್ಕೆ ಮೂಲ. ನನಗೀಗ 98 ವರ್ಷ, ಇಂದಿಗೂ ಕೃಷಿಯಲ್ಲೇ ತೊಡಗಿಸಿಕೊಂಡಿರುವುದು ಅದರ ಮಹತ್ವ ತೋರಿಸುತ್ತದೆ. ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ, ಅತಿಥಿ ದೇವೋ ಭವ ಎಂಬ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪ ಮಾತನಾಡಿ, ಸಮದ್​ ಪಟೇಲ್​ ಅವರು ಜಿಲ್ಲೆಯ ರೈತರಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಕೆಕೆಸಿಸಿಐ ಕೃಷಿ ಜಾತ್ರೆ ಯಶಸ್ವಿಗೆ ಅವರು ನೀಡಿದ ಸಹಕಾರ ಅಮೂಲ್ಯ ಎಂದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್​ ಧಂಗಾಪೂರ್​ ಮಾತನಾಡಿ, ಅಗ್ರೊ ಡೀಲರ್​ಗಳು ರೈತರಿಗೆ ಕಳಪೆಮಟ್ಟದ ಬೀಜ ಮಾರಾಟ ಮಾಡಬಾರದು. ಸಮದ್​ ಪಟೇಲ್​ ಅವರು ತಮ್ಮ ಇತಿಮಿತಿಯಲ್ಲಿ ರೈತರ ಹಿತಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ಶ್ಲಾಸಿದರು.
ಬಬಲಾದ ಮಠದ ಪೂಜ್ಯ ಗುರುಪಾದಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಅಗ್ರೊ ಇನ್​ಪುಟ್​ ಡೀರ್ಲಸ್​ ಅಸೋಸಿಯೇಶನ್​ ಗೌರವಾಧ್ಯಕ್ಷ ಅಂಕುಶ್​ ಶಾ ಭಾಗವಹಿಸಿದ್ದರು. ಕೆಕೆಸಿಸಿಐ ಕಾರ್ಯದರ್ಶಿ ಶಿವರಾಜ್​ ಇಂಗಿನಶೆಟ್ಟಿ, ರಾಜಶೇಖರ ದುಕಾನ್​ದಾರ್​, ಡೀರ್ಲಸ್​ ಸಂದ ಅಧ್ಯಕ್ಷ ಬಸವರಾಜ್​ ಮಂಗಲಗಿ, ಚಂದ್ರಶೇಖರ್​ ತಳ್ಳಳ್ಳಿ ಇತರರಿದ್ದರು.
"

ಕಲಬುರಗಿ ಪ್ರದೇಶದಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್​ ಸ್ಥಾಪನೆಯಾಗುತ್ತಿದ್ದು, ರೈತರು ಹಾಗೂ ಉದ್ಯಮಿಗಳಿಗೆ ಉಪಯುಕ್ತವಾಗಲಿದೆ. ಈ ಯೋಜನೆ ಶ್ರೀ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ಕೆಕೆಸಿಸಿಐ ನಿರಂತರ ಹೋರಾಟ ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net