ಕಲಬುರಗಿ: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಅಗ್ನಿ ಬನ್ನಿರಾಯ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ಅ. ನಾಸಿ, ಸಿಬ್ಬಂದಿಗಳಾದ ನಾಗರಾಜ, ಅರವಿಂದ್ ನ್ಯಾಮನೂರ್, ರಾಜಕುಮಾರ, ಶಿವರಾಜ್ ಭಂಕೂರ, ನಾಗಪ್ಪ ಸಣ್ಣೂರ್, ಗುಂಡಮ್ಮ, ರಾಜ್ಯಶ್ರೀ, ನಾಗವೇಣಿ ಇತರರು ಉಪಸ್ಥಿತರಿದ್ದರು.