ದುಡ್ಡಿನ ಹುಳು ನಿರ್ವಹಣೆಗೆ ಸಲಹೆ

ಔರಾದ್​ ತಾಲೂಕಿನ ನಾಗೂರ(ಎಂ) ಹಾಗೂ ಖಾಶೆಂಪುರ ಗ್ರಾಮಕ್ಕೆ ಕೃಷಿ ಅಧಿಕಾರಿಗಳ ತಂಡ ಭೇಟಿ ನೀಡಿ ದುಡ್ಡಿನ ಹುಳು ಬಾಧೆಗೊಳಗಾದ ಬೆಳೆಗಳನ್ನು ಪರಿಶೀಲಿಸಿತು. ಉಪ ನಿರ್ದೇಶಕ ಅನ್ಸಾರಿ ಎಂ.ಎ.ಕೆ., ಸಹಾಯಕ ನಿರ್ದೇಶಕ ಮಾರ್ಥಂಡ, ಅಂಬರೀಶ್​ ಇತರರಿದ್ದರು.
ಔರಾದ್​ ತಾಲೂಕಿನ ನಾಗೂರ(ಎಂ) ಹಾಗೂ ಖಾಶೆಂಪುರ ಗ್ರಾಮಕ್ಕೆ ಕೃಷಿ ಅಧಿಕಾರಿಗಳ ತಂಡ ಭೇಟಿ ನೀಡಿ ದುಡ್ಡಿನ ಹುಳು ಬಾಧೆಗೊಳಗಾದ ಬೆಳೆಗಳನ್ನು ಪರಿಶೀಲಿಸಿತು. ಉಪ ನಿರ್ದೇಶಕ ಅನ್ಸಾರಿ ಎಂ.ಎ.ಕೆ., ಸಹಾಯಕ ನಿರ್ದೇಶಕ ಮಾರ್ಥಂಡ, ಅಂಬರೀಶ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಔರಾದ್​ ತಾಲೂಕಿನ ನಾಗೂರ(ಎಂ), ಖಾಶೆಂಪುರಕ್ಕೆ ಅಧಿಕಾರಿಗಳ ಭೇಟಿ
ಔರಾದ್​: ಮಳೆಗಾಲದಲ್ಲಿ ಕೆಲವೆಡೆ ದುಡ್ಡಿನ (ಸಹಸ್ರಪದಿ) ಹುಳು ಬಾಧೆ ಕಂಡುಬಂದಿದ್ದು, ರೈತರು ಸರಿಯಾದ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಉಪ ಕೃಷಿ ನಿರ್ದೇಶಕ ಅನ್ಸಾರಿ ಎಂ.ಎ.ಕೆ. ಸಲಹೆ ನೀಡಿದ್ದಾರೆ.
ದುಡ್ಡಿನ ಹುಳುಗಳಿಂದ ಬೆಳೆ ನಾಶ ಕುರಿತು ಮುಂಗಾರು ಬೆಳೆಗೆ ದುಡ್ಡಿನ ಹುಳು ಕಾಟ ತಲೆಬರಹದಡಿ ವಿಜಯವಾಣಿ ವರದಿ ಪ್ರಕಟಿಸಿರುವುದನ್ನು ಗಮನಿಸಿದ ಅಧಿಕಾರಿಗಳು ಗುರುವಾರ ನಾಗೂರ(ಎಂ) ಹಾಗೂ ಖಾಶೆಂಪುರ ಗ್ರಾಮಕ್ಕೆ ಭೇಟಿ ನೀಡಿ ದುಡ್ಡಿನ ಹುಳು ಬಾಧೆಗೊಳಗಾದ ಬೆಳೆಗಳನ್ನು ಪರಿಶೀಲಿಸಿದರು.
ಈ ಹುಳುಗಳು ಸಾಮಾನ್ಯವಾಗಿ ತೇವಾಂಶ ಹೆಚ್ಚಿರುವ ಪ್ರದೇಶ, ಕೊಳೆತ ಎಲೆ, ಕಸ-ಕಡ್ಡಿ ಹಾಗೂ ಸಾವಯವ ಅವಶೇಷಗಳ ಕೆಳಗೆ ಆಶ್ರಯ ಪಡೆಯುತ್ತವೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಸಾವಯವ ಪದಾರ್ಥಗಳನ್ನು ಕೊಳೆಯಿಸುವ ಉಪಯುಕ್ತ ಜೀವಿಗಳಾಗಿದ್ದರೂ ಸಂಖ್ಯೆ ಹೆಚ್ಚಾದಾಗ ಬೆಳೆಗಳಿಗೆ ಹಾನಿ ಉಂಟು ಮಾಡುತ್ತವೆ. ದುಡ್ಡಿನ ಹುಳು ಮುಟ್ಟಿದಾಗ ತನ್ನ ದೇಹವನ್ನು ಗುಂಡಿನಾಕಾರದಲ್ಲಿ ಸುತ್ತಿಕೊಳ್ಳುತ್ತದೆ. ಆದ್ದರಿಂದ ಇದನ್ನು ದುಡ್ಡಿನ ಹುಳು ಎಂದು ಕರೆಯಲಾಗುತ್ತದೆ. ಹೊಲದಲ್ಲಿ ಸ್ವಚ್ಛತೆ ಕಾಪಾಡಬೇಕು. ತೇವಾಂಶಯುಕ್ತ ಕಸ-ಕಡ್ಡಿ ಹಾಗೂ ಕೊಳೆತ ಎಲೆಗಳನ್ನು ತೆರವುಗೊಳಿಸಬೇಕು. ಬೆಳಗ್ಗಿನ ಜಾವ 5ರಿಂದ 7ರವರೆಗೆ ಹೊಲದಲ್ಲಿ ಸಂಚರಿಸಿ ಕೈಯಿಂದ ದುಡ್ಡಿನ ಹುಳುಗಳನ್ನು ಸಂಗ್ರಹಿಸಿ ನಾಶಪಡಿಸಬೇಕು. ಕಸ-ಕಡ್ಡಿ ರಾಶಿಗಳ ಮೇಲೆ ಶೇ.5 ಮಲಾಥಿಯಾನ್​ ಸಿಂಪಡಿಸಬಹುದು ಎಂದು ಹೇಳಿದ್ದಾರೆ.
ಸಹಾಯಕ ಕೃಷಿ ನಿರ್ದೇಶಕ ಮಾರ್ಥಂಡ, ಕೃಷಿ ಅಧಿಕಾರಿ ಅಂಬರೀಶ್​ ಇತರರಿದ್ದರು.
ಹೀಗಿದೆ ಬಾಧೆಯ ಲಕ್ಷಣ
ದುಡ್ಡಿನ ಹುಳುಗಳು ಹೊಸದಾಗಿ ಮೊಳಕೆಯೊಡೆದ ಸಸಿಗಳನ್ನು ಕತ್ತರಿಸಿ ತಿನ್ನುತ್ತವೆ. ಮೊಳಕೆ ಮತ್ತು ಎಳೆಯ ಕಾಂಡ ಹಾನಿಗೊಳಿಸುತ್ತವೆ. ಇದರಿಂದ ಸಸಿಗಳ ಸಂಖ್ಯೆ ಕಡಿಮೆಯಾಗಿ ಇಳುವರಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಮುಖ್ಯವಾಗಿ ಸೋಯಾಬೀನ್​, ತೊಗರಿ, ಹೆಸರು, ಉದ್ದು ಇತರ ಬೆಳೆಗಳಲ್ಲಿ ಈ ಬಾಧೆ ಹೆಚ್ಚಾಗಿ ಕಂಡುಬರುತ್ತದೆ ಎಂದು ಡಿಡಿ ಅನ್ಸಾರಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net