ಸಮ್ಮೇಳನಾಧ್ಯಕ್ಷ ಪ್ರೊ.ಕೆ.ಎಸ್.ಕೌಜಲಗಿ ತಮ್ಮ ಭಾಷಣದಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಭಾಷೆ ಮತ್ತು ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಬಾರದು. ತಾಲೂಕಿನ ಪ್ರಗತಿ, ಜನರ ಸಮಸ್ಯೆ, ವರ್ತಮಾನದ ಸವಾಲು ಹಾಗೂ ಭವಿಷ್ಯದ ದಾರಿಗಳ ಕುರಿತು ಸಮಗ್ರ ಚಿಂತನೆ ನಡೆಯುವ ವೇದಿಕೆಯಾಗಬೇಕು. ಭಾಷೆ, ಸಾಹಿತ್ಯ, ಸಂಸತಿ, ಜಾನಪದ ಹಾಗೂ ಲಲಿತಕಲೆಗಳ ಸ್ಥಿತಿಗತಿ ಬಗ್ಗೆ ಗಂಭೀರ ಚಿಂತನೆ ಅಗತ್ಯವಿದೆ ಎಂದು ತಿಳಿಸಿದರು. ಸಮ್ಮೇಳನದ ಅಧ್ಯತೆ ವಹಿಸಿದ್ದ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಯುವ ಬರಹಗಾರರು, ಕವಿಗಳು ಬೆಳೆಯಬೇಕು. ಸಮ್ಮೇಳನಗಳು ಯುವ ಪೀಳಿಗೆಗೆ ಪ್ರೇರಣೆಯಾಗುತ್ತವೆ ಎಂದರು. ನಿಜಗುಣಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕನ್ನಡವನ್ನು ತಾಯಿಯಾಗಿ ಸ್ವೀಕರಿಸಿ, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಸಂದೇಶ ನೀಡಿದರು. ಮೂರು ಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ, ಸ್ಥಳಿಯ ಅದ್ವೆ$ೃತಾನಂದ ಸ್ವಾಮೀಜಿ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಮಾಜಿ ಉಪಾಧ್ಯ ಮಹಾಂತೇಶ ತುರಮರಿ, ತಹಸೀಲ್ದಾರ್ ಎಚ್.ಎನ್.ಶಿರಹಟ್ಟಿ, ಬಿಇಒ ಸಿ.ವೈ.ತುಬಾಕಿ, ಶಿವಾನಂದ ಕುಡಸೋಮಣ್ಣವರ, ಕಲಾವಿದ ಸಿ.ಕೆ.ಮೆಕ್ಕೇದ, ಮೋಹನ ಪಾಟೀಲ, ಗ್ರಾಪಂ ಅಧ್ಯೆ ಮಹಾದೇವಿ ಕೋಟಗಿ, ಮಡಿವಾಳಪ್ಪ ಕಲ್ಲೋಳಿ, ಎಂ.ಎಸ್.ಕುಡವಕ್ಕಲಗಿ, ಎಸ್.ಡಿ.ಗಂಗಣ್ಣವರ, ಲಿಂಗರಾಜ ಅಂಗಡಿ, ವೈ.ಎಂ.ಯಾಕೊಳ್ಳಿ ಇತರರಿದ್ದರು. ಎನ್.ಆರ್.ಠಕ್ಕಾಯಿ ಸ್ವಾಗತಿಸಿದರು. ರಾಜು ಹಕ್ಕಿ ನಿರೂಪಿಸಿದರು.