ಜೀವನದಲ್ಲಿ ಶಿಸ್ತು, ದೇಶಭಕ್ತಿ ಅಳವಡಿಸಿಕೊಳ್ಳಿ

ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎನ್​ಸಿಸಿ ವತಿಯಿಂದ ಸೋಮವಾರ ಆಯೋಜಿಸಿದ್ದ ಯುವ ಆಪಾದ್​ ಮಿತ್ರ ಶಿಬಿರದ ಸಮಾರೋಪದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರನ್ನು ಕಲಬುರಗಿಯ 32 ಕರ್ನಾಟಕ ಎನ್​ಸಿಸಿ ಬಟಾಲಿಯನ್​ ಕರ್ನಲ್​ ಕಸ್ತೂರಬಾ ದತ್ತಾಜಿ ಟೊಂಗೆ ಪಾಟೀಲ್​ ಸತ್ಕರಿಸಿದರು. ಡಾ.ಎಂ.ಎಸ್​.ಪಾಸೋಡಿ, ಎಸ್​.ಪಿ.ಸುಳ್ಳದ್​, ಡಾ.ಬಸವರಾಜ, ಪ್ರಮೋದ ಚೌಗಲೆ ಇತರರಿದ್ದರು.
ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎನ್​ಸಿಸಿ ವತಿಯಿಂದ ಸೋಮವಾರ ಆಯೋಜಿಸಿದ್ದ ಯುವ ಆಪಾದ್​ ಮಿತ್ರ ಶಿಬಿರದ ಸಮಾರೋಪದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರನ್ನು ಕಲಬುರಗಿಯ 32 ಕರ್ನಾಟಕ ಎನ್​ಸಿಸಿ ಬಟಾಲಿಯನ್​ ಕರ್ನಲ್​ ಕಸ್ತೂರಬಾ ದತ್ತಾಜಿ ಟೊಂಗೆ ಪಾಟೀಲ್​ ಸತ್ಕರಿಸಿದರು. ಡಾ.ಎಂ.ಎಸ್​.ಪಾಸೋಡಿ, ಎಸ್​.ಪಿ.ಸುಳ್ಳದ್​, ಡಾ.ಬಸವರಾಜ, ಪ್ರಮೋದ ಚೌಗಲೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿಕೆ
  • ಯುವ ಆಪಾದ್​ ಮಿತ್ರ ಶಿಬಿರ ಸಮಾರೋಪ
ಕಲಬುರಗಿ: ಯುವ ಸಮುದಾಯ ಕಡ್ಡಾಯವಾಗಿ ದೇಶಸೇವೆಯ ಮನೋಭಾವ ಬೆಳೆಸಿಕೊಳ್ಳಬೇಕು. ಪದವಿ ಕಾಲೇಜು ದಿನಗಳಲ್ಲಿ ಕೇವಲ ಎನ್​ಸಿಸಿ ತರಬೇತಿ ಪಡೆದರೆ ಸಾಕಾಗುವುದಿಲ್ಲ. ಈ ಮೂಲಕ ಕಲಿತ ಶಿಸ್ತು, ದೇಶಸೇವೆ ಮತ್ತು ದೇಶಭಕ್ತಿಯನ್ನು ಜೀವನಪರ್ಯಂತ ಅಳವಡಿಸಿಕೊಂಡು ದೇಶ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಯೂ ಆದ ಕಮಾಂಡಿಂಗ್​ ಆಫೀಸರ್​ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಬಹುಉಪಯೋಗಿ ಸಭಾಂಗಣದಲ್ಲಿ ಎನ್​ಸಿಸಿ ವತಿಯಿಂದ ಸೋಮವಾರ ಆಯೋಜಿಸಿದ್ದ ಯುವ ಆಪಾದ್​ ಮಿತ್ರ ಶಿಬಿರದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದ ರಕ್ಷಣಾ ಇಲಾಖೆಯ ಅಡಿ ಕಾರ್ಯನಿರ್ವಹಿಸುತ್ತಿರುವ ಎನ್​ಸಿಸಿ ವಿದ್ಯಾರ್ಥಿಗಳಿಗೆ ದೇಶಭಕ್ತಿ, ದೇಶಸೇವೆ ಹಾಗೂ ಶಿಸ್ತಿನ ಜೀವನಶೈಲಿ ಕುರಿತು ತರಬೇತಿ ನೀಡುತ್ತಿದೆ. ಜತೆಗೆ ಪ್ರಾಕೃತಿಕ ವಿಕೋಪ ಹಾಗೂ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಇಂತಹ ತರಬೇತಿ ಬಹಳ ಉಪಯುಕ್ತವಾಗಿವೆ ಎಂದು ತಿಳಿಸಿದರು.
ಪ್ಲಾಸ್ಟಿಕ್​ ಮುಕ್ತ ಸಮಾಜ ನಿರ್ಮಾಣ, ಪರಿಸರ ಸಂರಕ್ಷಣೆ, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ತಕ್ಷಣ ಸ್ಪಂದನೆ, ದೇಶಸೇವೆ ಹಾಗೂ ರಕ್ಷಣಾ ೇತ್ರದಲ್ಲಿ ಸೇವೆ ಸಲ್ಲಿಸುವಂತಹ ಸಮಾಜಮುಖಿ ಕಾರ್ಯಗಳ ಬಗ್ಗೆ ಎನ್​ಸಿಸಿ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಲಬುರಗಿಯ 32 ಕರ್ನಾಟಕ ಎನ್​ಸಿಸಿ ಬಟಾಲಿಯನ್​ ಕರ್ನಲ್​ ಕಸ್ತೂರಬಾ ದತ್ತಾಜಿ ಟೊಂಗೆ ಪಾಟೀಲ್​, ಸ್ಕೌಟ್ಸ್​ ಮತ್ತು ಗೈಡ್ಸ್​ ಜಿಲ್ಲಾ ಆಯುಕ್ತ ಎಸ್​.ಪಿ. ಸುಳ್ಳದ, ಸಿಯುಕೆಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎಂ.ಎಸ್​.ಪಾಸೋಡಿ, ಸಿಯುಕೆ ವಸತಿ ನಿಲಯಗಳ ಮುಖ್ಯ ವಾರ್ಡನ್​ ಡಾ.ಬಸವರಾಜ ಎಂ.ಎಸ್​, ಉಮೇಶ್​, ರಾಜಕುಮಾರ ಮರಾಠಿ, ಎನ್​ಸಿಸಿ ಶಿಬಿರದ ಸಂಚಾಲಕ  ಪ್ರಮೋದ್​ ಚೌಗಲೆ, ರವಿ ಬರದ, ಡಾ.ಮಮತಾ ನಾಟೀಕರ ಇತರರಿದ್ದರು.
"

ಎನ್​ಸಿಸಿ ವಿದ್ಯಾರ್ಥಿಯಾಗುವುದು ಒಂದು ವಿಶೇಷ ಅವಕಾಶ. ಎಲ್ಲರಿಗೂ ಈ ಅವಕಾಶ ದೊರೆಯುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಂಡು ನಮ್ಮಲ್ಲಿ ನಾಯಕತ್ವ ಗುಣ, ಸೇವಾ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳಬೇಕು.

— ಪ್ರೊ.ಬಟ್ಟು ಸತ್ಯನಾರಾಯಣ, ಕುಲಪತಿ, ಸಿಯುಕೆ ಕಲಬುರಗಿ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net