ಬಸವಣ್ಣನವರ ತತ್ವ ಅಳವಡಿಸಿಕೊಳ್ಳಿ

ಕಮಲನಗರ ತಾಲೂಕಿನ ಚ್ಯಾಂಡೇಶ್ವರ ಗ್ರಾಮದಲ್ಲಿ ಅಶ್ವಾರೂಢ ಬಸವೇಶ್ವರ ಪ್ರತಿಮೆಯನ್ನು ಶಾಸಕ ಪ್ರಭು ಚವ್ಹಾಣ್​ ಅನಾವರಣಗೊಳಿಸಿದರು.
ಕಮಲನಗರ ತಾಲೂಕಿನ ಚ್ಯಾಂಡೇಶ್ವರ ಗ್ರಾಮದಲ್ಲಿ ಅಶ್ವಾರೂಢ ಬಸವೇಶ್ವರ ಪ್ರತಿಮೆಯನ್ನು ಶಾಸಕ ಪ್ರಭು ಚವ್ಹಾಣ್​ ಅನಾವರಣಗೊಳಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಪ್ರಭು ಬಿ.ಚವ್ಹಾಣ್​ ಕರೆ
  • ಚ್ಯಾಂಡೇಶ್ವರದಲ್ಲಿ ಪ್ರತಿಮೆ ಅನಾವರಣ
ಕಮಲನಗರ: ಇಡೀ ಪ್ರಪಂಚದಲ್ಲಿ ಬಸವ ತತ್ವಗಳು ಪ್ರಸಾರವಾಗಿವೆ ಎಂಬುದಕ್ಕೆ ಬ್ರಿಟನ್​ ಪಾರ್ಲಿಮೆಂಟ್​ ಮುಂದೆ ಬಸವಣ್ಣನ ಪುತ್ಥಳಿ ಸ್ಥಾಪಿಸಿರುವುದೇ ಸಾ ಎಂದು ಶಾಸಕ ಪ್ರಭು ಚವ್ಹಾಣ್​ ಹೇಳಿದರು.
ತಾಲೂಕಿನ ಚ್ಯಾಂಡೇಶ್ವರ ಗ್ರಾಮದಲ್ಲಿ ಇತ್ತೀಚೆಗೆ ಬಸವೇಶ್ವರ ವೃತದಲ್ಲಿ ಅಶ್ವರೂಢ ಬಸವೇಶ್ವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಬಸವಣ್ಣನ ತತ್ವಗಳು ಸಮಾಜದಲ್ಲಿ ಸಮಾನತೆ ಸಾರುತ್ತವೆ. ನಿತ್ಯ ಜೀವನದಲ್ಲಿ ಅವುಗಳನ್ನು ಅನುಸರಿಸಿದರೆ 12ನೇ ಶತಮಾನದ ಶರಣ ಪರಂಪರೆ ಮರುಕಳಿಸುತ್ತದೆ ಎಂದರು.
ಬೆಂಬುಳಗಿ ಹಿರೇಮಠದ ಪೀಠಾಧಿಪತಿ ಶ್ರೀ ರಾಜಶೇಖರ ಶಿವಾಚಾರ್ಯ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಬೋಧಿಸಿದ ವಚನ ಸಾಹಿತ್ಯದ ಚಿಂತನೆಗಳು ಕೇವಲ ಕನ್ನಡ, ಭಾರತಕ್ಕೆ ಸೀಮಿತ ಅಲ್ಲ.ಅವು ಜಗದಗಲವಾಗಿವೆ. ಅನುಭವ ಮಂಟಪದ ಮೂಲಕ ಸಂಸ್ಕಾರ , ಸಮಾನತೆ, ಸಹೋದರತೆ, ಸಮಗಟನೆಗಳನ್ನು ಕಟ್ಟಿ, ಪ್ರಜಾಪ್ರಭುತ್ವದ ಚಿಂತನೆಗಳಿಗೆ ಬುನಾದಿ ಹಾಕಿದರು ಎಂದು ಹೇಳಿದರು.
ಭಾಲ್ಕಿ ಹಿರೇಮಠ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ತಮಲುರು ಶ್ರೀಮಠದ ಪೀಠಾಧಿಪತಿ ಶ್ರೀ ವಶಿವಾನಂದ ಶಿವಾಚಾರ್ಯ, ಗುರುಬಸಯ್ಯ ಸ್ವಾಮಿ ಸುಭಾಷ ಧಬಾಲೆ, ವೈಜಿನಾಥ ಗುಡ್ಡಾ, ನಾಗಣ್ಣ ಧಬಾಲೆ, ಈಶ್ವರ ಧಬಾಲೆ, ಶ್ರೀಮಂತ ಧಬಾಲೆ, ರಮೇಶ ಪಿಪರೆ, ಬಾಲಾಜಿ ಮುರ್ಕೆ ಇತರರಿದ್ದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾಸಿ ಪ್ರೋತ್ಸಾಹಿಸಿಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net