ಜೀವನದಲ್ಲಿ ಬಸವಣ್ಣನವರ ಆದರ್ಶ ಅಳವಡಿಸಿಕೊಳ್ಳಿ

 ಹುಮನಾಬಾದ್​ನ ಬಸವನಗರ ಬಡಾವಣೆಯ ಬಸವೇಶ್ವರ ವೃತ್ತದಲ್ಲಿ ಬಸವನಗರ ಜಾಗೃತಿ ಸಮಿತಿಯಿಂದ ಸೋಮವಾರ ಅದ್ದೂ ಬಸವ ಜಯಂತಿ ಉತ್ಸವ ಆಚರಿಸಲಾಯಿತು. ಸಮಿತಿ ಅಧ್ಯ ಬಾಬುರಾವ ವಾಡೆ, ಪ್ರಮುಖರಾದ ಮಲ್ಲಿಕಾರ್ಜುನ ಸಂಗಮಕರ, ಪಂಡಿತ ಬಾಳೂರೆ, ಅರವಿಂದ ಪಾಟೀಲ್​, ಸಿದ್ದು ಕಣಜಿ, ಡಿ.ಎಂ.ನಂದಿ, ಡಿ.ಸಿ.ಬಿರಾದಾರ, ಡಾ.ನಾಗೇಂದ್ರಕುಮಾರ ಇತರರಿದ್ದರು
ಹುಮನಾಬಾದ್​ನ ಬಸವನಗರ ಬಡಾವಣೆಯ ಬಸವೇಶ್ವರ ವೃತ್ತದಲ್ಲಿ ಬಸವನಗರ ಜಾಗೃತಿ ಸಮಿತಿಯಿಂದ ಸೋಮವಾರ ಅದ್ದೂ ಬಸವ ಜಯಂತಿ ಉತ್ಸವ ಆಚರಿಸಲಾಯಿತು. ಸಮಿತಿ ಅಧ್ಯ ಬಾಬುರಾವ ವಾಡೆ, ಪ್ರಮುಖರಾದ ಮಲ್ಲಿಕಾರ್ಜುನ ಸಂಗಮಕರ, ಪಂಡಿತ ಬಾಳೂರೆ, ಅರವಿಂದ ಪಾಟೀಲ್​, ಸಿದ್ದು ಕಣಜಿ, ಡಿ.ಎಂ.ನಂದಿ, ಡಿ.ಸಿ.ಬಿರಾದಾರ, ಡಾ.ನಾಗೇಂದ್ರಕುಮಾರ ಇತರರಿದ್ದರು
Published on
ಹುಮನಾಬಾದ್​: ಬಸವಣ್ಣನವರು ಸಮಾನತೆ, ಸತ್ಯ ಮತ್ತು ನೈತಿಕ ಮೌಲ್ಯಗಳ ಆಧಾರಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್​ ಚಿಂತಕರು ಎಂದು ಬಸವನಗರ ಬಡಾವಣೆ ಜಾಗೃತಿ ಸಮಿತಿ ಅಧ್ಯಕ್ಷ ಬಾಬುರಾವ ವಾಡೆ ಹೇಳಿದರು.
ಪಟ್ಟಣದ ಬಸವನಗರ ಬಡಾವಣೆಯ ಬಸವೇಶ್ವರ ವೃತ್ತದಲ್ಲಿ ಬಸವನಗರ ಜಾಗೃತಿ ಸಮಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ವಚನಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿದ್ದು, ಯುವ ಪೀಳಿಗೆ ಬಸವಣ್ಣನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಉತ್ಸವದ ಅಂಗವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಸಾಮೂಹಿಕ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.
ಪ್ರಮುಖರಾದ ಮಲ್ಲಿಕಾರ್ಜುನ ಸಂಗಮಕರ, ಪಂಡಿತ ಬಾಳೂರೆ, ಅರವಿಂದ ಪಾಟೀಲ್​, ಸಿದ್ದು ಕಣಜಿ, ಡಿ.ಎಂ.ನಂದಿ, ಡಿ.ಸಿ.ಬಿರಾದಾರ, ಡಾ.ನಾಗೇಂದ್ರಕುಮಾರ, ಶಂಕರರಾವ ರಾಂಪುರೆ, ಶರಣಪ್ಪ ಪಾಟೀಲ್​, ಸಿದ್ದಲಿಂಗಪ್ಪ ನಿರ್ಣಾ, ಪಂಡರಿನಾಥ ಹುಗ್ಗಿ, ಕಾಶಿನಾಥ ಕೋಡ್ಲಿ, ಬಸವರಾಜ ರುದ್ರವಾಡಿ, ಬಾಬುರಾವ ಪೊಚಂಪಳ್ಳಿ, ಮಲ್ಲಿಕಾರ್ಜುನ ರಟಕಲ್​, ಮಾಣಿಕರಾವ ಪಾಟೀಲ್​, ಸಿದ್ದಪ್ಪ ಹೂಗಾರ, ಶಿವಕುಮಾರ ಕಂಪ್ಲಿ, ಮಲ್ಲಿಕಾರ್ಜುನ ರೋಗನ, ಸಂಗ್ರಾಮರೆಡ್ಡಿ, ಶರಣಪ್ಪ ಪಾಟೀಲ್​, ಅಶೋಕ ಸೊಂಡೆ, ಚನ್ನಬಸಪ್ಪ ಪಾರಾ, ರಾಜಶೇಖರ ಚಿಂಚೋಳ್ಳಿ, ರಾಜಶೇಖರ ಸಾಲಿ, ಆಶೋಕ ತುಪ್ಪದ, ಚಂದ್ರಕಾಂತ ರಂಜೋಳಖೇಣಿ, ಚನ್ನಬಸಪ್ಪ ವಡ್ಡನಕೇರಿ ಸೇರಿ ಸಮಿತಿ ಸದಸ್ಯರು, ಸ್ಥಳಿಯ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಬಡಾವಣೆಯ ಸರ್ಕಾರಿ ಸೇವಾ ನಿವೃತ್ತರು ಹಾಗೂ ವಿವಿಧ ೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net