ಯುವಕರು ತಮ್ಮ ಬೆಳವಣಿಗೆಯ ವರ್ಷಗಳಲ್ಲಿ ಜಾಗರೂಕರಾಗಿರಬೇಕು, ಜೀವನದಲ್ಲಿ ಸಾಧಿಸಬಹುದಾದ ಗುರಿ ನಿಗದಿಪಡಿಸಬೇಕು, ಈ ಗುರಿ ಸಾಧಿಸಲು ಅವಿಶ್ರಾಂತವಾಗಿ ಶ್ರಮಿಸಬೇಕು. ಇತ್ತೀಚಿನ ದಿನಗಳಲ್ಲಿ ಸುಲಭವಾಗಿ ಹಣ ಗಳಿಸಲು ಸೈಬರ್ ಅಪರಾಧದಂತಹ ಚಟುವಟಿಕೆಗಳಲ್ಲಿ ಯುವಕರು ಭಾಗಿಯಾಗುತ್ತಿರುವುದು ಆತಂಕಕಾರಿ ಸಂಗತಿ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮಾದಕ ದ್ರವ್ಯ ಮತ್ತು ಇತರ ಹಾನಿಕಾರಕ ಅಭ್ಯಾಸಗಳಿಗೆ ಬಲಿಯಾಗದಂತೆ ಪೋಷಕರು ಮತ್ತು ಶಿಕ್ಷಕರು ಸರಿಯಾದ ಹಾದಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಜೀವನದಲ್ಲಿ ದಾರಿ ತಪ್ಪಿದ ವಿದ್ಯಾರ್ಥಿಗಳಿಗೆ ಸಮಯೋಚಿತ ಸಮಾಲೋಚನೆ ನಡೆಸಿ ಅವರನ್ನು ಮತ್ತೆ ಸರಿ ದಾರಿಗೆ ತರಬೇಕು ಎಂದು ಕಿವಿಮಾತು ಹೇಳಿದರು.