ಅಜ್ಞಾನದ ಲಯ ಮಾಡಿದ ಆದಿ ಶಂಕರರು

ಕಲಬುರಗಿಯ ಸಂಗಮೇಶ್ವರ ಕಾಲನಿಯ ಶಂಕರ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ  ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಪ್ರಭಾಕರ ಜೋಶಿ ಅವರನ್ನು ಸತ್ಕರಿಸಲಾಯಿತು. ಶಾಮಾಚಾರ್ಯ ಜೋಶಿ, ಗೋಪಾಲಕೃಷ್ಣ ಕುಲಕರ್ಣಿ ಇತರರಿದ್ದರು.
ಕಲಬುರಗಿಯ ಸಂಗಮೇಶ್ವರ ಕಾಲನಿಯ ಶಂಕರ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಪ್ರಭಾಕರ ಜೋಶಿ ಅವರನ್ನು ಸತ್ಕರಿಸಲಾಯಿತು. ಶಾಮಾಚಾರ್ಯ ಜೋಶಿ, ಗೋಪಾಲಕೃಷ್ಣ ಕುಲಕರ್ಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ಶಂಕರ ಮಠದಲ್ಲಿ ಶಂಕರಾಚಾರ್ಯರ ಜಯಂತಿ
ಕಲಬುರಗಿ: ದೇವ ಅಸುರರು ನಡೆಸಿದ್ದ ಸಮುದ್ರ ಮಂಥನದಲ್ಲಿ ಆವಿರ್ಭವಿಸಿದ್ದ ಹಾಲಾಹಲದಿಂದ ಸೃಷ್ಟಿಯನ್ನು ಉಳಿಸಿದ್ದ ಆ ಆದಿಯೋಗಿ ಶಂಕರನೇ ಮತ್ತೊಮ್ಮೆ ಆದಿಗುರು ಶಂಕರಾಚಾರ್ಯರಾಗಿ ಭಾರತದಲ್ಲಿ ಧರ್ಮ ಅವತರಿಸಿ, ಶ್ರದ್ಧಾಳುಗಳ ಅಜ್ಞಾನದ ಲಯ ಮಾಡಿದರು ಎಂದು ಪತ್ರಕರ್ತ, ಸಾಹಿತಿ ಪ್ರಭಾಕರ ಜೋಶಿ ಹೇಳಿದರು.
ಕಲಬುರಗಿಯ ಶಂಕರ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಯಾರು ಸಮಸ್ತ ಸೃಷ್ಟಿಗೆ ಒಳಿತು ಮಾಡುತ್ತಾರೋ ಅಂಥವರು ಶಂಕರನ ಕೃಪೆಗೆ ಪಾತ್ರರಾಗುತ್ತಾರೆ. ಹಿಂದಿನ ಪಂಡಿತರು ಜ್ಞಾನ ಮಾರ್ಗಕ್ಕಿಂತ ಯಯಾಗಾದಿಗಳನ್ನು ಮಾಡುವ ಕರ್ಮಕಾಂಡಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರಿಂದಲೇ ಅಜ್ಞಾನಿಗಳು ಧರ್ಮದ ದಾರಿಬಿಟ್ಟಂತಾಗಿ ಭಾರತ ಜಡವಾಗುವ ಹಂತಕ್ಕೆ ಬಂದು ತಲುಪಿತ್ತು. ಭಾರತದ ಶ್ರುತಿ ಸಾರವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಸುವ ಜ್ಞಾನಿಯ ಅಗತ್ಯತೆ ಇದ್ದ ಕಾಲದಲ್ಲಿ ಶಂಕರರು ಭಾರತದ ಮೂಲತತ್ವವನ್ನು ಪುನ@ ಹೇಳಿದರೇ ಹೊರತು ಹೊಸ ಸಿದ್ಧಾಂತವನ್ನು ತಾವಾಗಿಯೇ ಸೃಷ್ಟಿಸಿ ಅದನ್ನು ಪ್ರಚಾರ ಮಾಡಲಿಲ್ಲ. ಆದ್ದರಿಂದಲೇ ಶಂಕರರ ಸಿದ್ಧಾಂತ ಸನಾತನ, ವಿನೂತನವಾಗಿಯೂ ಉಳಿಯಲು ಸಾಧ್ಯವಾಗಿದೆ ಎಂದರು.
ಶೃಂಗೇರಿ ಶಂಕರ ಮಠದ ವಿಶೇಷ ಪ್ರತಿನಿಧಿ ಪ್ರಕಾಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಶಾಮಾಚಾರ್ಯ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಜಯಂತಿ ಸಮಿತಿ ಅಧ್ಯಕ್ಷ ಹೃಷಿಕೇಷ ಚೌಡಾಪೂರಕರ್​, ಪದಾಧಿಕಾರಿಗಳಾದ ಗೋಪಾಲಕೃಷ್ಣ ಕುಲಕರ್ಣಿ, ವಿಶ್ವಾಸ ಮೋಕರ್​, ಮಂಜುನಾಥ ಕುಲಕರ್ಣಿ, ಗೋವಿಂದ ಕುಲಕರ್ಣಿ, ಪ್ರೊ.ಪ್ರತಿಮಾ ಕುಲಕರ್ಣಿ, ಹಿರಿಯ ಉದ್ಯಮಿ ಲಕ್ಷಿ$್ಮನಾರಾಯಣ ತಪಾಡಿಯಾ, ರಾಹುಲ್​ ದೇಶಪಾಂಡೆ ಇತರರಿದ್ದರು. ಪತ್ರಕರ್ತ ಗೋಪಿ ಕುಲಕರ್ಣಿ ಶಂಕರಾಚಾರ್ಯರು ರಚಿಸಿದ ಶಾರದಾ ಸ್ತುತಿ ಪ್ರಸ್ತುತ ಪಡಿಸಿದರು.
ಶಂಕರ ಜಯಂತಿ ಹಿನ್ನಲೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ನಂತರ ಶಿವಶಂಕರಿ ಭಜನಾ ಮಂಡಳಿ, ಭವಾನಿ ಶಂಕರ ಭಜನಾ ಮಂಡಳಿ, ವಾಗ್ದೇವಿ ಭಜನಾ ಮಂಡಳಿ, ಕಾಶಿಕಮಲ್​ ಭಜನಾ ಮಂಡಳಿಯ ಸದಸ್ಯರು ತೊಟ್ಟಿಲೊತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net