ಬಳಿಕ ಆಸ್ಪತ್ರೆಯ ಹಿರಿಯ ಸಲಹೆಗಾರ ಹಾಗೂ ಜಂಟಿ ಬದಲಿ ಮತ್ತು ಆರ್ಥ್ರೋಸ್ಕೋಪಿಕ್ ಶಸ್ತ್ರಚಿಕಿತ್ಸಾ ತಜ್ಞ ಡಾ. ಕಿರಣ್ ಚೌಕ ಅವರ ನೇತೃತ್ವದಲ್ಲಿ ಅತ್ಯಾಧುನಿಕ ಕ್ಯುವಿಸ್ ತಂತ್ರಜ್ಞಾನ ಆಧಾರಿತ ರೋಬಾಟಿಕ್ ನೆರವಿನಿಂದ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನೆಡೆಸಲಾಯಿತು. ಒದಿ ರೋಗಿಯ ದೇಹರಚನೆಗೆ ಅನುಗುಣವಾಗಿ ಕೃತಕ ಸಂಧಿಗಳ ನಿಖರ ಅಳವಡಿಕೆ, ಉತ್ತಮ ಜಂಟಿ ಸಮತೋಲನ ಹಾಗೂ ಸೂಕ್ತ ಹೊಂದಾಣಿಕೆಯನ್ನು ಸಾಧಿಸಲು ಇದು ನೆರವಾಯಿತು. ಎರಡೂ ಮೊಣಕಾಲುಗಳ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಶಸ್ತ್ರಚಿಕಿತ್ಸೆಯ ಬಳಿಕ ಫಿಸಿಯೋಥೆರಪಿ ಆರಂಭಿಸಲಾಯಿತು. ಯಾವುದೇ ಸಮಸ್ಯೆ ಇಲ್ಲದೆ ಶೀಘ್ರವಾಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.