ಕಲಬುರಗಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವುದಕ್ಕಾಗಿ ಸಂಭ್ರಮಿಸಿ, ಕಲಬುರಗಿ ಜಿಲ್ಲಾ ಬಿಜೆಪಿ ಟಕ ಕಾರ್ಯಕರ್ತರು ನಗರದಲ್ಲಿ ಸೋಮವಾರ ಅದ್ದೂರಿ ವಿಜಯೋತ್ಸವ ಆಚರಿಸಿದರು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಜಮಾಯಿಸಿದ ನೂರಾರು ಕಾರ್ಯಕರ್ತರು, ಪಟಾಕಿ ಸಿಡಿಸಿ ಮತ್ತು ಪರಸ್ಪರ ಚುರುಮುರಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಅಸ್ಸಾಂನಲ್ಲಿ ಅಧಿಕಾರ ಉಳಿಸಿಕೊಂಡಿರುವುದು ಹಾಗೂ ಪುದುಚೇರಿಯಲ್ಲಿ ಮೈತ್ರಿಕೂಟದೊಂದಿಗೆ ಜಯಭೇರಿ ಬಾರಿಸಿರುವುದಕ್ಕೆ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು. ತಮಿಳುನಾಡಿನಲ್ಲಿ ಪದ ಬಲವರ್ಧನೆಗೆ ಸಹಕರಿಸಿದ ಮತದಾರರಿಗೆ ಈ ಸಂದರ್ಭದಲ್ಲಿ ನಾಯಕರು ಅಭಿನಂದನೆ ಸಲ್ಲಿಸಿದರು.
ಐತಿಹಾಸಿಕ ಸಾಧನೆ
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಸ್ಮರಣೀಯವಾದುದು. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ರಾಜಕಾರಣಕ್ಕೆ ಸಂದ ಜಯವಿದು. ಅಸ್ಸಾಂನಲ್ಲಿ ಮರು ಆಯ್ಕೆಯಾಗಿರುವುದು ಹಾಗೂ ಪಶ್ಚಿಮ ಬಂಗಾಳದಲ್ಲೂ ಅದ್ಭುತ ಸಾಧನೆ ಮಾಡಿರುವುದು ಇತಿಹಾಸ ಪುಟ ಸೇರಲಿದೆ. ಈ ಯಶಸ್ಸಿಗೆ ಶ್ರಮಿಸಿದ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ನಾಯಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಬಿಜೆಪಿ ಜಿಲ್ಲಾಧ್ಯ ಅಶೋಕ ಬಗಲಿ ಮಾತನಾಡಿ, ಪಶ್ಚಿಮ ಬಂಗಾಳದ ಜನತೆ ಈ ಬಾರಿ ಬಿಜೆಪಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ. ದಶಕಗಳ ಕಾಲ ಆಡಳಿತ ನಡೆಸಿದ ಪಗಳ ವಿರುದ್ಧ ಬಿಜೆಪಿ ಸೆಡ್ಡು ಹೊಡೆದು ನಿಂತಿದೆ. ಇದೊಂದು ಪ್ರಜಾಪ್ರಭುತ್ವದ ಗೆಲುವು ಎಂದು ಬಣ್ಣಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್, ಲಿಂಗರಾಜ ಬಿರಾದಾರ್, ಶರಣಪ್ಪ ತಳವಾರ, ಡಾ.ಸುಧಾ ಹಾಲಕಾಯಿ, ಧರ್ಮಣ್ಣ ಇಟಗಾ, ಶಿವಯೋಗಿ ನಾಗನಹಳ್ಳಿ, ರಾಜೂಗೌಡ ನಾಗನಹಳ್ಳಿ, ಅಂಬಾರಾಯ ಅಷ್ಟಗಿ, ಮಲ್ಲು ಉದನೂರು, ಶಿವು ಅಷ್ಟಗಿ, ಮಲ್ಲಿಕಾರ್ಜುನ, ಯಳಮೇಲಿ ಇತರರಿದ್ದರು.