ಜನರ ಸಮಸ್ಯೆಗೆ ಸ್ಪಂದಿಸದಿದ್ರೆ ಕ್ರಮ : ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್​ ಎಚ್ಚರಿಕೆ

ಆಳಂದನಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್​ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ತಹಸೀಲ್ದಾರ್​ ಅಣ್ಣಾರಾವ ಪಾಟೀಲ್​ ಇದ್ದರು.ಆಳಂದನಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್​ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ತಹಸೀಲ್ದಾರ್​ ಅಣ್ಣಾರಾವ ಪಾಟೀಲ್​ ಇದ್ದರು.ಆಳಂದನಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್​ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ತಹಸೀಲ್ದಾರ್​ ಅಣ್ಣಾರಾವ ಪಾಟೀಲ್​ ಇದ್ದರು.
ಆಳಂದನಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್​ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ತಹಸೀಲ್ದಾರ್​ ಅಣ್ಣಾರಾವ ಪಾಟೀಲ್​ ಇದ್ದರು.ಆಳಂದನಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್​ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ತಹಸೀಲ್ದಾರ್​ ಅಣ್ಣಾರಾವ ಪಾಟೀಲ್​ ಇದ್ದರು.ಆಳಂದನಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್​ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ತಹಸೀಲ್ದಾರ್​ ಅಣ್ಣಾರಾವ ಪಾಟೀಲ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಳಂದನಲ್ಲಿ ಜನಸಂಪರ್ಕ ಸಭೆ
ಆಳಂದ: ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ಕಲ್ಪಿಸುವುದೇ ಜನಸಂಪರ್ಕ ಕಾರ್ಯಕ್ರಮದ ಉದ್ದೇಶವಾಗಿದೆ. ಅಧಿಕಾರಿಗಳು ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಾರ್ವಜನಿಕರನ್ನು ಸುಮ್ಮನೆ ಅಲೆದಾಡಿಸುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಎಚ್ಚರಿಕೆ ನೀಡಿದರು.
ತಾಲೂಕು ಆಡಳಿತಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಜನರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, 88 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 6 ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಾಗಿದೆ. ಬಾಕಿ ಉಳಿದ ಅರ್ಜಿಗಳನ್ನು ತಿಂಗಳೊಳಗೆ ಇತ್ಯರ್ಥ ಪಡಿಸಲಾಗುವುದು. ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಪ್ರತಿ ಎರಡು ತಿಂಗಳಿಗೊಮ್ಮೆ ತಾಲೂಕಿಗೆ ಆಗಮಿಸಿ ಜನರ ಸಮಸ್ಯೆ ಆಲಿಸುವೆ. ತಾಲೂಕು ಮಟ್ಟದ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸಂಪರ್ಕ ಸಭೆ ಮಾಡಿ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಸಹಾಯಕ ಆಯುಕ್ತೆ ಸಾಹಿತ್ಯಾ ಆಲದಕಟ್ಟಿ, ಆಹಾರ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಮುನಾವರ್​ ದೌಲಾ, ತಹಸೀಲ್ದಾರ್​ ಅಣ್ಣಾರಾವ ಪಾಟೀಲ್​, ತಾಪಂ ಇಒ ಮಾನಪ್ಪ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಗ್ರೇಡ್​ 2 ತಹಸೀಲ್ದಾರ್​ ಭೀಮಣ್ಣ ಕುದರಿ, ಪಿಐ ಶರಣಬಸಪ್ಪ ಕೋಡ್ಲಾ, ಗ್ರಾಮೀಣ ಕುಡಿವ ನೀರು ಇಲಾಖೆ ಎಇಇ ಸಂಗಮೇಶ ಬಿರಾದಾರ, ಲೋಕೋಪಯೋಗಿ ಇಲಾಖೆಯ ಹೋನ್ನೇಶ ಅಳ್ಳಗಿ, ಬಿಇಒ ವಿ.ರಂಗಸ್ವಾಮಿ ಶೆಟ್ಟಿ, ಸಿಡಿಪಿಒ ಶಂಭುಲಿಂಗ ಹಿರೇಮಠ, ಅಧಿಕಾರಿಗಳಾದ ಶಾಂತಪ್ಪ ಜಾಧವ್​, ವಿಜಯಲ್ಮ ಹೋಳ್ಕರ್​, ಪ್ರಭುಲಿಂಗ ಮಡ್ಡಿತೋಟ, ಉಸ್ಮಾನ್​ ಸುತಾರ್​, ಬಿನಾಜಿ ಸೂರ್ಯವಂಶಿ, ತಿಪ್ಪಯ್ಯ ಸ್ವಾಮಿ, ಶರಣು ಹಕ್ಕಿ, ಅಲ್ಲಾವುದ್ದಿನ್​, ಆನಂದ ಪೂಜಾರಿ, ವಿನೋದ ಇತರರಿದ್ದರು.
ಸಾರ್ವಜನಿಕರಾದ ಮಾಣಿಕ ಜಾಧವ್​, ಮಲ್ಲಿಕಾರ್ಜುನ ವಣದೆ, ಅಡವಿರಾಜ ಅತನೂರೆ, ಶ್ರೀಕಾಂತ ಖೂನೆ, ವಿಜಯಕುಮಾರ ಢಗೆ, ಶ್ರವಣಕುಮಾರ ಆಳಂಗೆ, ತಯ್ಯಾಬ್​ ಅಲಿ ಶೇಖ್​, ಲಿಂಗರಾಜ ಪಾಟೀಲ್​, ಸೂರ್ಯಕಾಂತ ಹಿತ್ತಲಶಿರೂರ, ಶ್ರೀಕಾಂತ ಸಾಲೇಗಾಂವ್​, ಪಿಂಟು ಢಗೆ, ಸಾಯಿನಾಥ ಕಠಾರೆ, ರಮೇಶ ಜಗತಿ, ರವೀಂದ್ರ ಕೋರಳ್ಳಿ, ಸಿದ್ದು ಪಾಟೀಲ್​, ರಾಜಶ್ರೀ ಪುಲಾರೆ, ಆರತಿ ಕಾಸರ್​, ಸೂರಜ್​ ಆಳಂದಕರ, ಅಮೀತ ಶಾಹ ಸೇರಿ ಹಲವಾರು ಜನರು ಸಮಸ್ಯೆಗಳ ಮನವಿಪತ್ರ ಸಲ್ಲಿಸಿದರು.
ಜಿಲ್ಲಾಧಿಕಾರಿಗೆ ಅರ್ಜಿಗಳ ಮಹಾಪೂರ
ಮಧ್ಯಾಹ್ನ 12.30 ಸುಮಾರಿಗೆ ಜನಸಂಪರ್ಕ ಸಭೆ ಆರಂಭವಾಯಿತು. ಕುಡಿವ ನೀರು, ರಸ್ತೆ ಅಗಲೀಕರಣ, ಸಿಲಿಂಡರ್​, ವಿದ್ಯುತ್​ ಸಮಸ್ಯೆ, ಗ್ರಾಮದಲ್ಲಿ ಸಿಸಿ ರಸ್ತೆ, ಸ್ಮಶಾನ ಭೂಮಿ, ಖಾಸಗಿ ಫೈನಾನ್ಸ್​ ಕಿರುಕುಳ, ಆಸ್ತಿ ವರ್ಗಾವಣೆ, ಪಹಣಿಯಲ್ಲಿ ಹೆಸರು ತಿದ್ದುಪಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧ ಕೊರತೆ, ಎನ್​ಎಸ್​ಎಲ್​ ಸಕ್ಕರೆ ಕಾರ್ಖಾನೆಯೂ ಕಬ್ಬು ನೀಡಿದ ರೈತರಿಗೆ ಬಿಲ್​ ಪಾವತಿಸಿಲ್ಲ, ಆಳಂದ&ನಿಂರ್ಬಗಾ, ಮಾಡಿಯಾಳ&ಕವಲಗಾ ರಸ್ತೆ ಸುಧಾರಣೆ, ಖಜೂರಿ ಕೆರೆ ಅಭಿವೃದ್ಧಿ, ಖಜೂರಿಯ ಸುಮಾರು 110 ರಿಂದ 115 ರೈತರ ಪಹಣಿಯಲ್ಲಿ ಕರ್ನಾಟಕ ಸರ್ಕಾರದ ಹೆಸರು ತೆಗೆದು ಮೂಲ ವಾರಸುದಾರರ ಹೆಸರು ನಮೂದಿಸಬೇಕು, ವಳವಂಡವಾಡಿ, ಬೆಳಮಗಿ, ದೇಗಾಂವ್​ ಗ್ರಾಮಗಳಿಗೆ ಹೋಗುವ ರೈತರ ಹೊಲಗಳಿಗೆ ರಸ್ತೆ ಮಾಡಿಕೊಡಿ ಎಂಬುದು ಸೇರಿ 88 ಅರ್ಜಿಗಳು ಸಲ್ಲಿಕೆಯಾದವು. ಎಲ್ಲ ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ತಾಳ್ಮೆಯಿಂದ ಪಡೆದು, ಪರಿಹಾರದ ಭರವಸೆ ನೀಡಿದರು.

ಆಳಂದ ರಸ್ತೆ ಅಗಲೀಕರಣ ಕಾಮಗಾರಿ ಟೆಂಡರ್​ ಹಂತದಲ್ಲಿದೆ. ಜತೆಗೆ 35 ಜನರು ಆಸ್ತಿ ಕಳೆದುಕೊಂಡಿದ್ದಕ್ಕಾಗಿ ಪರಿಹಾರಕ್ಕಾಗಿ ಕೋರ್ಟ್​ ಮೊರೆ ಹೋಗಿದ್ದಾರೆ. ಹೀಗಾಗಿ ಕೆಲಸ ವಿಳಂಬವಾಗುತ್ತಿದೆ. ನ್ಯಾಯಾಲಯದ ತೀರ್ಪಿನಂತೆ ಕೆಲಸ ನಡೆಯಲಿದೆ. ಈ ಹಿಂದೆ ಅಫಜಲಪುರದಲ್ಲೂ ರಸ್ತೆ ಅಗಲೀಕರಣ ಕಾರ್ಯ ನಡೆದಿದ್ದು, ಅಲ್ಲಿನ ಜನರು ಸಹಕಾರ ನೀಡಿದ್ದರಿಂದ ಕಾಮಗಾರಿ ಬಹುತೇಕ ಪೂರ್ಣವಾಗಿದೆ. ಆಳಂದ ಜನರೂ ಅಭಿವೃದ್ಧಿಗೆ ಸಹಕಾರ ಕೊಡಬೇಕು.

 > ಫೌಜಿಯಾ ತರನ್ನುಮ್​,

 ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net