ಉದಯೋನ್ಮುಖ ಕ್ಷೇತ್ರಗಳಲ್ಲಿ ಜ್ಞಾನ ಬೆಳೆಸಿಕೊಳ್ಳಿ

ತಿಮ್ಮೇಗೌಡನದೊಡ್ಡಿಯಲ್ಲಿನ ಅಮೃತಾ ಇನ್‌ಸ್ಟಿಟ್ಯೂಟ್ ಆ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಟ್ರೈನಿಂಗ್ ಕಾರ್ಯಕ್ರಮದಲ್ಲಿ ಡಾ. ಟಿ. ಸೆಂಥಿಲ್ ಕುಮಾರನ್, ಡಾ. ರಾಜೇಶ್ವರ ಕಾಡದೇವರಮಠ್, ಪ್ರಾಂಶುಪಾಲ ಡಾ. ಸಂತೋಷ್ ಎಂ. ಮುರನಾಳ್, ಡಾ. ಮಹಾಂತೇಶ್ ಮಠಪತಿ ಇತರರು ಇದ್ದರು.
ತಿಮ್ಮೇಗೌಡನದೊಡ್ಡಿಯಲ್ಲಿನ ಅಮೃತಾ ಇನ್‌ಸ್ಟಿಟ್ಯೂಟ್ ಆ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಟ್ರೈನಿಂಗ್ ಕಾರ್ಯಕ್ರಮದಲ್ಲಿ ಡಾ. ಟಿ. ಸೆಂಥಿಲ್ ಕುಮಾರನ್, ಡಾ. ರಾಜೇಶ್ವರ ಕಾಡದೇವರಮಠ್, ಪ್ರಾಂಶುಪಾಲ ಡಾ. ಸಂತೋಷ್ ಎಂ. ಮುರನಾಳ್, ಡಾ. ಮಹಾಂತೇಶ್ ಮಠಪತಿ ಇತರರು ಇದ್ದರು.
Published on

ಕಂಪ್ಯೂಟರ್ ಸೈನ್ಸ್ ಕ್ಷೇತ್ರವು ಜಗತ್ತಿನ ಪ್ರತಿ ಕ್ಷೇತ್ರದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಬೆಂಗಳೂರಿನ ಎಸಿಎಸ್‌ಸಿಇಯ ಪ್ರಾಧ್ಯಾಪಕ ಡಾ. ಟಿ. ಸೆಂಥಿಲ್ ಕುಮಾರನ್ ತಿಳಿಸಿದರು.

ತಿಮ್ಮೇಗೌಡನದೊಡ್ಡಿಯಲ್ಲಿನ ಅಮೃತಾ ಇನ್‌ಸ್ಟಿಟ್ಯೂಟ್ ಆ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸೈನ್ಸ್ ಸಂಸ್ಥೆಯ ಕಂಪ್ಯೂಟರ್ ಸೈನ್ಸ್ ಹಾಗೂ  ಎಂಜಿನಿಯರಿಂಗ್ ವಿಭಾಗದಿಂದ ಟೆಕ್ ಎಕ್ಸ್‌ಪ್ರೋರ್ ತಂತ್ರಜ್ಞಾನ, ನಾವೀನ್ಯತೆ ಮತ್ತು ಉದ್ಯಮಶೀಲತೆ ಸಿಎಸ್‌ಇ ಯಲ್ಲಿನ ಉದಯೋನ್ಮುಖ ಪ್ರವೃತ್ತಿಯ ವಿಷಯದ ಕುರಿತು ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ಶಾರ್ಟ್ ಟರ್ಮ ಟ್ರೈನಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪ್ರೋಗ್ರಾಮಿಂಗ್ ಕಲಿಕೆಗೆ ಸೀಮಿತರಾಗದೆ  ಕಂಪ್ಯೂಟರ್ ಸೈನ್ಸ್ ಸಂಶೋಧನೆ, ಕಂಪ್ಯೂಟರ್ ಆರ್ಕಿಟೆಕ್ಚರ್, ಕೃತಕ ಬುದ್ಧಿಮತ್ತೆ, ಡೇಟಾ ಸ್ಟ್ರಕ್ಚರ್ ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್ ನಂತಹ ಉದಯೋನ್ಮುಖ ಕ್ಷೇತ್ರಗಳ ಬಗ್ಗೆ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಲಾಲೇಜಿನ ಡೀನ್ ಅಕಾಡೆಮಿಕ್ಸ್ ಡಾ. ರಾಜೇಶ್ವರ ಕಾಡದೇವರಮಠ್ ಮಾತನಾಡಿ, ವಿದ್ಯಾರ್ಥಿಗಳು ಸ್ಥಳೀಯ ಉದ್ಯೋಗ ಮಾರುಕಟ್ಟೆಗೆ ಮಾತ್ರ ಸೀಮಿತರಾಗದೆ ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಅರ್ಥಮಾಡಿಕೊಳ್ಳಬೇಕು. ತಾಂತ್ರಿಕ ಜ್ಞಾನ ಉದ್ಯಮಶೀಲತೆಯೊಂದಿಗೆ ಸಂಯೋಜಿಸಿ ಉದ್ಯೋಗ ಹುಡುಕುವುದರ ಜತೆಗೆ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗುವತ್ತ ಗಮನಹರಿಸಬೇಕು ಎಂದರು.
ಪ್ರಾಂಶುಪಾಲ ಡಾ. ಸಂತೋಷ್ ಎಂ. ಮುರನಾಳ್ ಮಾತನಾಡಿ, ತಂತ್ರಜ್ಞಾನ ಪ್ರತಿ ಕ್ಷೇತ್ರದ ಅಭಿವೃದ್ಧಿಗೆ ಹಿಂದಿನ ಪ್ರಮುಖ ಶಕ್ತಿ. ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನ ಸೃಷ್ಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಸಿಎಸ್‌ಇ ವಿಭಾಗದ ಮುಖ್ಯಸ್ಥ ಡಾ. ಮಹಾಂತೇಶ್ ಮಠಪತಿ, ಸಹ ಸಂಚಾಲಕ ಡಾ. ಛಾಯಾ ಎಸ್. ದುಳೆ ಹಾಗೂ  ಎಂ.ಕೆ. ಶರವಣ ಇತತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net